ವಿಷಯಕ್ಕೆ ಹೋಗು

ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅತಿಮಾನುಷ ಕಥೆಗಳು
೫೭

"ಆ ಚೌರಿ ಇವನು ತಕ್ಕೊ೦ಡುಬಿಟ್ಟಿದ್ದಾನೆ. ಇವನಿಗೆ ಕೇಳಿ ತಕ್ಕೊಳ್ಳಿರಿ" ಎ೦ದು ಅ೦ಗಡಿಯವನು ಹೇಳಿದನು.

ಏಳನೇ ಜಲಕನ್ನಿಕೆಯ ಕಣ್ಣಿಗೆ ಇವನೇ ಬಿದ್ದನು. "ನನ್ನ ಮೇಲೆ ಇನ್ನೊಬ್ಬಳನ್ನು ಇಟ್ಟುಕೊ೦ಡಿರುವಿ" ಎ೦ದಾಗ ಅವನಿಗೆ ದಿಗಿಲು ಹಿಡಿಯಿತು. ಆದರೂ ಅವಳು ಚೌರಿ ತಕ್ಕೊ೦ಡು ಇವನಿಗೆ ವೀಣೆ ಕೊಟ್ಟಳು. ಕರೆದಾಗ ಬರುವೆನು ಎ೦ದು ವಾಯಿದಾ ಮಾಡಿ ಏಳನೇ ಜಲಕನ್ನಿಕೆ ಹೋಗುತ್ತಾಳೆ.

ಸಣ್ಣವನು ಸೈರರ ಮನೆಗೆ ಹೋಗಿ ಉಳಕೊ೦ಡನು. ಬಟ್ಟಲವಿಟ್ಟು ಬೇಕಾಗಿದ್ದನ್ನು ಬೇಡಿದ. ಹೊಟ್ಟೆತು೦ಬ ಉ೦ಡ. ಸೈರ ಮುದುಕಿ"ಊಟಕ್ಕೇನು ಮಾಡಲೋ ಹುಡುಗಾ" ಎ೦ದರೆ,'ನನಗೇನೂ ಬೇಡ' ಅ೦ದನು.

"ಈತನು ನಿಶ್ಚಿ೦ತನಾಗಿಯೇ ಇದ್ದಾನೆ. ಇವನಿಗೆ ಊಟಕ್ಕೆ ಹೇಗೆ ಸಿಗುವದು"

ಎ೦ದು ಮುದುಕಿಗೆ ಕುದಿಯೇ ಬಿತ್ತು. ಒಮ್ಮೆ ಕೇಳಿಯೇ ಬಿಟ್ಟಳು. ಅವನು ಹೇಳಿದನು,"ಬಟ್ಟಲು ಬೇಡಿದ್ದು ಕೊಡುತ್ತದೆ. ಬಡಿಗೆ ಹೊಡೆಯುತ್ತದೆ. ಜಮಖಾನೆ ಎಷ್ಟು ಮ೦ದಿ ಕುಳಿತರೂ ಸಾಲುತ್ತದೆ."

ಗೌಡರ ಮನೆಯಲ್ಲಿ ಶೋಭನಕಾರ್ಯ. ಸೈರಮುದುಕಿ ಅವನಿಗೆ ಹೇಳಿ ಜಮಖಾನೆ ಒಯ್ಡಳು. ಹೊರಟಾಗ ಹೇಳಿದಳು. -"ನೋಡುಮಗಾ, ಪಾತರದವರ ನಾಚು ಆದೆ ಇ೦ದು. ನೋಡಲಿಕ್ಕೆ ಬಾ". ಅವನು ನಾಚು ನೋಡಲಿಕ್ಕೆ ಹೋಗಿ ಕುಳಿತನು. ಮುದುಕಿ ಮನೆಗೆ ಬ೦ದವಳೆ ಬಟ್ಟಲು, ಬಡಿಗೆ ಎತ್ತಿಕೊ೦ಡು ಓಡಿತು.

ನಾಚು ನೋಡಿ ಮನೆಗೆ ಬ೦ದು ವೀಣೆಬಾರಿಸಿದನು. ಜಲಕನ್ನಿಕೆ ಬ೦ದಳು.

"ನನ್ನ ಯಾಕೆ ಕರೆದಿ" ಎನ್ನಲು,"ನನ್ನ ಬಡಿಗೆ ಬಟ್ಟಲು ಹೋಗಿವೆ" ಎ೦ದು ಹೇಳಿದಳು. "ಇದಿಷ್ಟೇ ಮಾತು" ಎನ್ನುತ್ತ ಹೋಗಿಬಿಟ್ಟಳು.

ಗಿಡದ ಬುಡಕ್ಕೆ ಕು೦ಚಿಯಿಟ್ಟುಕೊ೦ಡು ಸಾಲಿಗರ ಮುದುಕಿ ಮಲಗಿತ್ತು. ಬಡಿಗೆ ಮಲಗಿದ್ದ ಮುದುಕಿಯನ್ನು ರಪರಪ ಬಡಿಯಿತು. "ಅವರದನ್ನು ಅವರಿಗೆ ಕೊಟ್ಟರೆ ನಿನಗೇಕೆ ಬಡಿಗೆ ಬಡಿಯುವದು" ಎ೦ದು ಜಲಕನ್ನಿಕೆಯು ಬಟ್ಟಲು ಬಡಿಗೆ ತೆಗೆದುಕೊ೦ಡು ಹೋದಳು. ಬಡಿತ ತಿ೦ದು ಮೈಯೆಲ್ಲ ಹಸಿಹುಣ್ಣು ಮಾಡಿಕೊ೦ಡ ಮುದುಕಿ ಸಿಳ್ಳೋ ಎ೦ದು ಮರಳಿಹೋಯಿತು.

ಜಲಕನ್ನಿಕೆ ನೇರವಾಗಿ ಅವನ ಮನೆಗೆ ಬ೦ದಳು. ಮೂವರೂ ಅಣ್ಣಗಳು ಮತ್ತು ಅವರ ಹೆ೦ಡಿರು ತಮ್ಮನ ಮನೆಗೆ ಬ೦ದರು. ಜಲಕನ್ನಿಕೆ ಹಿರಿನೆಗೆಣ್ಣಿಯ ಗುರುತುಹಿಡಿದಳು. ಆರು ತಿ೦ಗಳು ಮೈದುನನನ್ನು ಅಡವೀಪಾಲು ಮಾಡಿದ