ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಅತಿಮಾನುಷ ಕಥೆಗಳು

೬೭

"ಒ೦ದು ಶಾಲು ಬೇಕಾಗಿದೆ.ದಡೂತಿ ಶಾಲು.ಉದ್ದ-ಅಗಲತಾಳಿಕೆ-ಬಣ್ಣ ಇವಾವಕ್ಕೂ ಕು೦ದು ಇರಬಾರದು; ಬರಬಾರದು. ಒ೦ದು ವಾರ ಮಾತ್ರ ನಿನಗೆ ಅವಕಾಶ. ಮು೦ದಿನ ವಾರದೊಳಗಾಗಿ ನನ್ನ ಶಾಲು ನನ್ನ ಕೈಗೆ ಬರಬೇಕು" ಎ೦ದು ಸ್ಪಷ್ಪಡಿಸುವ ಶಿವನ ಮಾತುಗಳನ್ನು ಕೇಳಿ,ಪಾರ್ವತಿಗೆ ಅತ್ಯ೦ತ ಹರ್ಷವಾಯ್ತು.

"ಶಿವನು ಕರುಣಾಶಾಲಿ. ಅದನ್ನು ಅವನಿಗೆ ಇನ್ನಾರೂ ಹೇಳಿಕೊಡುವ ಕಾರಣವೇ ಇಲ್ಲ" ಎ೦ದುಕೊಳ್ಳತ್ತ ಹೊರಗೆ ಒಡಿಬಂದು, ಕೈಜೋಡಿಸಿ ಶಿವನಿಗಂದಳು- "ಕರುಣಾಕರನೆಂಬ ಹೆಸರು ತಮಗೇ ಸಲ್ಲುವದು.ಪಾಪ! ಪಿಂಜಾಳಿಯಾದ ಕಂಬಳಿಯನ್ನು ಹೊದೆದು.ಚಳಿಯನ್ನು ತಡೆಯಲಾರದೆ ಮುದುಡೆಯಾಗಿ ಬಿದ್ದ ಆ ಪ್ರಾಣಿಯ ಸಲುವಾಗಿ ನಾನೇ ತಮ್ಮಲ್ಲಿ ಬಿನ್ನಯಿಸಿಕೊಳ್ಳಬೇಕೆಂದು ಯೋಚಿಸಿದ್ದೆ. ಬಹಳ ಒಳ್ಳೆಯ ಕೆಲಸಮಾಡಿದದಿರಿ. ಶಾಲು ನೆಯ್ದು ತರಲು ದೇವಾಂಗ ಪತಿಗೆ ಹೇಳಿದ್ದು ತುಂಬಾ ಸಂತಸದ ವಿಷಯ."

"ಛೇ ಛೇ ಛೇ! ತಪ್ಪು ತಿಳಿದುಕೊಂಡಿರುವಿ ಪಾವರ್ತಿ. ನಾನು ಶಾಲು ಹೇಳಿದ್ದು ಅವನ ಸಲುವಾಗಿ ಅಲ್ಲ. ಪಿಂಜಾಳಿ ಕಂಬಳಿ ಹೊದೆದು ಜೋಕೆಯಿಂದ ಮಲಗಿಕೊಂಡವನು ತನ್ನ ಆ ಹೊದಿಕೆಯಲ್ಲಿ ಇನ್ನೂ ಮೂರು ಚಳಿಗಾಲಗಳನ್ನು ಕಳೆಯುತ್ತಾನೆ. ಅವನ ಚಿ೦ತೆ ನನಗಿಲ್ಲ. ಹಿ೦ದುಗಡೆ ನಾವು ನೋಡಿದೆವಲ್ಲ.ಆ ಹೊಸ ಶಾಲು ಹೊದ್ದು ಜೇಟ್ಟುಕೊಟ್ಟು ಮಲಗಿದವನನ್ನು. ಇನ್ನು ಒ೦ದೇವಾರ ಕಳೆಯುವಷ್ಟರಲ್ಲಿ ಅವನು ತನ್ನ ಶಾಲನ್ನು ಹರಿದು ಚಲ್ಲುತ್ತಾನೆ. ಅವನ ಸಲುವಾಗಿ ಚಿ೦ತೆಯಾಗಿದ್ದರಿ೦ದ, ನಿ೦ತಕಾಲಮೇಲೆ ದೇವಾ೦ಗ ಪತಿಯನ್ನು ಕರೆಸಿ, ಶಾಲು -ದಡೂತಿ ಶಾಲು ನೆಯ್ದು ತರಲು ಹೇಳಬೇಕಾಯಿತು. ಹಾಗೂ ಎ೦ಟು ದಿನಗಳಲ್ಲಿ ಸಿದ್ದಗೊಳಿಸಿ ತರಬೇಕೆ೦ದು" ಎ೦ದು ಶಿವನು ಪಡಿನುಡಿದನು. ಶಿವನ ವಿಚಾರಸರಣಿಯನ್ನು ಕೇಳಿ ಪಾರ್ವತಿಯು ಅಚ್ಚರಿಗೊ೦ಡಳು.

 •