ಪುಟ:ಉಮರನ ಒಸಗೆ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮುನ್ನುಡಿ

ಉಮರ್ ಖಯಾಮ್ ಕವಿಯ ಪಾರಸೀ ಭಾಷೆಯಲ್ಲಿ ಬರೆದ ಪ್ರಸಿದ್ದವಾದ “ರುಬಾಯಿ-ಯಾತ" ಕಾವ್ಯದ ಪದ್ಯಗಳಲ್ಲಿ ಎಡ್ವರ್ಡ್ ಫಿಟ್ಸ್-ಜೆರಲ್ಡನು ಕೆಲವನ್ನಾರಿಸಿಕೊಂಡು, ಅವುಗಳ ಭಾವದನ್ನು ಇಂಗ್ಲಿಷ್ ಪದ್ಯಗಳಲ್ಲಿ ಅನುವಾದಿಸಿರುವನು. ಸಂಗರ ಭಾವಾನುವಾದದ ಛಾಯೆಯನ್ನು ಕನ್ನಡಿಗರಿಗೆ ತೋರಿಸಬೇಕೆಂಬುದು ಈ ಪ್ರಬಂಧದ ಉದ್ದೇಶ.

⁠ಇದನ್ನು ನಾನು ಬರೆದು ಇಲ್ಲಿಗೆ ಮೂರು ವರ್ಷಗಳ ಮೇಲೆ ಆಗಿದೆ. ಈಚೆಗೆ, ೧೯೨೮ನೆಯ ಜುಲೈ ತಿಂಗಳಿನ "ಕರ್ಣಾಟಕ ಸಾಹಿತ್ಯ ಪರಿಷತ್ಪತ್ರಿಕೆ"ಯಲ್ಲಿ, ಉಮರ್-ಫಿಟ್ಸ್‌ಜೆರಲ್ಡರ ಕೃತಿಯ ೫೦ ಪದ್ಯಗಳ ಅನುವಾದವು ಶ್ರೀಮಾನ್ ಗೋವಿಂದ ಪೈ ಅವರ ಲೇಖಣಿಯಿಂದ ಬಂದು ಪ್ರಕಟವಾಗಿದೆ. ಅದರ ಬಂಧದಲ್ಲಿ ಪಂಡಿತ ಸಾಧ್ಯವಾದ ಬಿಕ್ಕಟ್ಟಿರುವುದಲ್ಲದೆ, ಪಾರಸೀ ಇಂಗ್ಲಿಷ್ ಭಾಷೆಗಳ ಮೂಲ ಗ್ರಂಥಗಳಲ್ಲಿರುವಂಥ ಪ್ರಾಸ ಸಂಪತ್ತೂ ಇದೆ, ಈ ಗುಣಗಳಿಲ್ಲದ ಬರೆವಣಿಗೆ ನನ್ನದು. ಹಾಲೋಗರವಿದ್ದರೂ ಅದರ ನಡುವೆ ಹುಳಿಮಜ್ಜಿಗೆಯೂ ಒಂದೊಂದು ವೇಳೆ ಕೊಂಚ ರುಚಿಸಬಹುದಲ್ಲವೆ ?

⁠ಇದಕ್ಕಾಗಿ ಕ್ಷಮೆ ಕೇಳಿಕೊಳ್ಳುವ ಭಾರವು ನನ್ನದೊಬ್ಬನದೇ ಆಗಿಲ್ಲ. ಇಂಥಾ ಭಾರವನ್ನು ಬೆಂಗಳೂರು ಸೆಂಟ್ರಲ್ ಕಾಲೇಜಿನ ಕರ್ಣಾಟಕ ಸಂಘವು ನನ್ನೊಡನೆ ಭಾಗಮಾಡಿಕೊಂಡಿರುವುದು ಇದೇ ಮೊದಲನೆಯ ಸಲವಲ್ಲ, ಈ ಪದ್ಯಗಳನ್ನು "ಪ್ರಬುದ್ಧ ಕರ್ಣಾಟಕ" ಪತ್ರಿಕೆಯಲ್ಲಿ ಪ್ರಕಟ ಪಡಿಸಿರುವುದ