ಈ ಪುಟವನ್ನು ಪ್ರಕಟಿಸಲಾಗಿದೆ
ಉಮರನ ಒಸಗೆ
೩೫
೬
ಬಾ, ತುಂಬು ಬಟ್ಟಲನು ; ಮಧುಮಾಸದಗ್ನಿಯಲಿ
ಚಿಂತೆ ಬೆಸನೆಂಬ ಚಳಿಬೊಂತೆಯನು ಬಿಸುಡು ;
ಆಯುವೆಂಬಾ ಪಕ್ಕಿ ಪಾಶ್ವ ದೂರವು ಕಿರಿದು ;
ಪಾರುತಿಹುದದು ನೋಡು ; ಬಾ, ಮನಸುಮಾಡು.
೭
ಏಳು, ಬಾರೆನ್ನೊಡನೆ ನಾಡಗಡಿಯತ್ತಲಿಗೆ––
ಹುಲುಸುಹೊಲ ಮರಳಕಾಡೆರಡುಮೊಡವೆರೆದು,
ಸುಲ್ತಾನ್ ಗುಲಾಮರೆಂಬರ ಮರೆಯಿಪಾ ಬಳಿಗೆ––
ಅಲ್ಲಿ ನೀಂ ದೊರೆತನದ ಕಿರಿತನವ ಕಾಣ್ಬೆ.