ಪುಟ:ಉಮರನ ಒಸಗೆ.djvu/೫೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ
೪೭
ಉಮರನ ಒಸಗೆ

ಹೋರಗೊಳಗೆ ಮೇಲೆ ಕೆಳಗೆ ಕಂಡೊಡಂ
ಮಾಟಗಾರನ ನೆರಳ ಬೊಂಬೆಯಾಟವಿದು ;
ನೇಸರೆಂಬೊಂದು ದೀವಿಗೆಯ ನಡುವಣೋಳಿರಿಸಿ
ಬೊಂಬೆಗಳನದರ ಬಳಿ ಸುಳಿಸುವಂತಿಹುದು. ೪೦

ಪೊನಲ ತಡಿಯಲಿ ಪೊಸ ಗುಲಾಬಿ ನಗು ನಗುತಲಿರೆ
ಘನ ಖಯ್ಯಮನ ಕೂಡೆ ಚೆಂಗಳ್ಳ ಕುಡಿ, ಬಾ;
ಕರಿಯ ಕುಡಿತವ ಮುಂದೆ ಕಾಲನೊಡ್ಡಿದೊಡಂದು
ಪಿಂತೆಗೆಯದೆದೆಯುಡುಗದದನು ಕುಡಿ ನಗುತೆ. ೪೧