ಪುಟ:ಉಮರನ ಒಸಗೆ.djvu/೬೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ
ಉಮರನ ಒಸಗೆ
೫೩


ಈ ತೆರದಿ ಘಟಜನಂ ಹರಟುತ್ತಲಿರಲಾಗ
ಳವರ್ಳೊರ್ವಂ ಮೂಡುವಿಂದುವಂ ಕಾಣಲ್
ಒರ್ವನೋರ್ವನ ತಟ್ಟುತಿಂತೆಂದರ್ "ಅಣ್ಣಣ್ಣ!
ಅತ್ತ ಕೇಳಡ್ಡೆ ಹೊತ್ತವನು ಬಹ ಕಿರುಕು.” ೫೬


ಆಹ ! ದ್ರಾಕ್ಷಿಯನೆನ್ನ ಬಡಜೀವಕೀಂಟಿಸುತೆ
ಅದರಿನೀ ಹರಣಮುಡುಗಿದ ತನುವ ತಳೆದು
ಅದರೆಲೆಯೇನಿದಕೆ ಹೋದಕೆಯ ಹೊದಿಸಿ ನಲವಿಂದೆ
ತನಿಗಂಪುಟದೊಳಗೆನ್ನ ಪೂಳಿರಿಸು. ೫೭