ಪುಟ:ಉಲ್ಲಾಸಿನಿ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

~

  • #

ಉಲ್ಲು ಸಿನಿ. ಹನ್ನೆರಡು ವರ್ಷದ ಅನಾವೃಷ್ಟಿಯು ತಪ್ಪಿದ್ದಲ್ಲವೆಂತಲೂ ಹಲವರು ಹಲವು ವಿಧವಾಗಿ ಮಾತನಾಡತೊಡಗಿದರು, ಹತ್ತೆಂಟು ತಿಂಗಳಾದರೂ ಆ ನಕ್ಷತ್ರ ವು ಕಾಣಿಸುತ್ತಲೇ ಇತ್ತು, ಹಳ್ಳಿಗಳಲ್ಲಿ ಗ್ರಾಮವಾಸಿಗಳು ಈ ಬಾಲಚುಕ್ಕೆ ಯನ್ನು ನೋಡಿ ಪರಮ ಭಿತರಾಗಿ ಗರ್ಭಿಣಿಯರಿಗೆ ಗರ್ಭಸ್ರಾವವಾದೀ ತೆಂತಲೂ ಅಥವಾ ಗರ್ಭದಲ್ಲಿನ ಮಗುವಿಗೆ ಅಂಗಹೀನವಾದೀತೆಂತಲೂ ಉಸಿ ರಾಡುವುದಕ್ಕೂ ಕೂಡ ಕತ್ಮವಾದ ಕತ್ತಲೆಯ ಕೋಣೆಗಳಲ್ಲಿಟ್ಟು, ಭದ) ಪಡಿಸಿದರು. ಬಾಲ್ಬಡವನ ಸಂಧಿಕಾಲದ ವನಿತೆಯರು ರಜಸ್ವಲೆ ಯರಾಗಿ ಹೆದರಿಕೊಂಡಾರೆಂದು ಬಾಲನಕ್ಷತ್ರದ ಫಲವನ್ನು ಅವರಿಗೆ ಹೇಳದೆ ಹೊರಗೆ ಹೋಗದಂತೆ ಉಪಯದಿಂದ ಕಾಪಾಡುತ್ತಿದ್ದರು, ಪುತ್ರವತಿಯು ರಾದ ವೃದ್ಧಸಿ ಯರು ಮಕ್ಕಳಿಗೆ ಪೀಡಾಪರಿಹಾರಾರ್ಥವಾಗಿ ಫಲ, ಪುಷ್ಪ ಕರ್ಪೂರ ಧೂಪ ಚರಣಾಯುಧ ಮೊದಲಾದ ಪೂಜಾಪರಿಕರವನ್ನು ತೆಗೆದು ಕೊಂಡು ಜಲಾಶಯಗಳಿಗೆ ಹೋಗಿ ನೀರಿನಲ್ಲಿ ಕಾಣಿಸಿದ ಆ ನಕ್ಷತ್ರದ ಪ್ರತಿ ಬಿಂಬವನ್ನು ನೋಡಿ ಕೈಗಳನ್ನು ಜೆಡಿಸಿಕೊಂಡು ಎಲೈ ನಕ್ಷತ್ರಸ್ತರ ಪದ ವಂಹಾವತಾರಿಯ ! ನನ್ನಗಳ ಪೂಜೆಯನ್ನು ಕೈಕೊಂಡು ನಮ್ಮ ಮಕ್ಕಳನ್ನು ಹರಿಸಿ, ನಿನ್ನ ಬಾಲಗಳಂದಭಿಮಂತ್ರಿಸಿ ಹೋಗುವುದಕ್ಕೆ ನೀನು ಕಾಣಿಸಿಕೊಂಡಿರಬಹುದು. ಇಗೋ ಈ ಜೀವವನ್ನು ನಿನಗೆ ಸನು ರ್ಪಿಸುವವು, ನಮ್ಮ ಹಸುಮಕ್ಕಳಿಗೂ ದನಕರುಗಳಿಗೂ ತೊಂದರೆಯುಂ ಟಾಗದಂತೆ ನೋಡಿಕೊ, ವರ್ಷಕ್ಕೊಂದು ಸಲ ಈ ದಿನ ನಿನ್ನ ಜಾತ್ರೆ ಯನ್ನು ನಡಿಸುವವು ” ಎಂದು ಪೂಜಿಸಿ, ಪ್ರಾರ್ಥಿಸಿ, ಸಾಯಂಕಾಲ ಮನೆ ಗಳಗೆ ಬಂದು ನಿರ್ವಾಲ್ಕವನ್ನು ಮಕ್ಕಳಿಗೆ ಮುಡಿಸಿ ಪ್ರಸಾದವನ್ನು ಎಲ್ಲರೂ ಭಕ್ತಿಯಿಂದ ಸೇವಿಸಿದರು, ಆದರೆ ಪಟ್ಟಣಗಳಲ್ಲಿ ವಿದ್ಯಾವಂತರಿಗೆ ಯಾವ ಭಯವೂ ತರಲಿಲ್ಲ. ಈ ನಕ್ಷತ್ರವು ಏಕೆ ಕಾಣಿಸುವುದು ? ಇದು ಭವಿಗೆ ಎಷ್ಟು ದೂರದಲ್ಲಿದೆ ? ಇದರ ಪ್ರಮಾಣವೇನು ? ಎಮ್ಮರ