ಪುಟ:ಉಲ್ಲಾಸಿನಿ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

అల్లు సిని. ೧೧ ಚಿಸಿ ಬೆಳಗ್ಗೆ ಸುಶೀಲನ ಬಳಿಗೆ ಬಂದು, ಸ್ವಾಮಿ ಈಗ ಹತ್ತುವರ್ಷಗಳಿಂದ ನೀವು ಹೇಳಿದಂತೆ ಕೇಳಿಕೊಂಡು ಒಂದು ದಿವಸವಾದರೂ ವಿರಾಮವಿಲ್ಲದೆ ರಾಜಕೀಯ ಕೆಲಸಕ್ಕೆ ಸ್ವಲ್ಪವೂ ಕುಂದಕವಿಲ್ಲದಂತೆ ನಡಿಸಿಕೊಂಡು ಬಂ ದೆನು, ಬಹಳ ಬೇಸರವಾಗಿದೆ, ದೀಪಾಂತರಗಳಿಗೆ ಹೋಗಿ ಅಲ್ಲಿಯ ಮಹಾ ವನಗಳಲ್ಲಿ ವಿನೋದಕರವಾಗಿ ಬೇಟೆಯಾಡಿ ಬರಬೇಕಂದಿರುವನು. ಅಪ್ಪಣೆಯನೀಯಬೆಕೆಂದನು. ಸುಶೀಲ ( ಆಕಾಶದಕಡೆ ಬೆರಳು ತೋರಿಸಿ) ಇಂತಹ ದುಃಶಕುನವು ತಲೆದೋರಿರುವಾಗ ಹೋಗಬಹುದೆ? ಸವ್ರತ-ಆದು ಹೋದಮೇಲೆ ಆಗಲಿ. ಸು-ಪುರಕ್ಕೆ ಹೋಗಬೇಡ, ಪುಷ್ಕರಕ್ಕೆ ಹೋಗಬೇಡ. ಸ-ಪುರಕ್ಕೇಕೆ ಹೋಗಬಾರದು ? ನಮ್ಮ ಮಾತಿನ ಪ್ರಕಾರ ನಡೆದುಕೊಳ್ಳುವವು ಎಂಬ ನಂಬಿಕೆ ಇರುವಂತೆ ಒಡಹುಟ್ಟಿದ ನೀಲನನ್ನು ಲಗ್ನಕನನ್ನಾಗಿ ಬಿಟ್ಟು ಬಂದಿರುವೆನಮ್ಮೆ, ಕರೆ ದುಕೊಂಡು ಬರಬೇಡವೆ? ಸು-ನೀನಲ್ಲದೆ ಇನ್ಯಾರಾದರ.೧ ಹೋದರೆ ಆಗದೊ ? ಸ-ನಾನೇಕೆ ಬೇಡ ? ಉಗ್ರನು ನಮ್ಮ ಸ್ನೇಹಿತನಲ್ಲವೆ? ಸು-11ಡ್ಡ ಹಿಡಿದು ಕೇಳಿಕೊಳ್ಳುವೆನು ಪುರಕ್ಕೆ ಹೋಗದಿರು. ಸ-ದೇವದತ್ತನು ಉಗ್ರನ ಕಡೆಯವರನ್ನು ನಮ್ಮ ದ್ವೀಪದಿಂದ ಓಡಿಸಿಬಿಟ್ಟನನ್ನು ವಿರೆನೋ ? ಅದು ನಡೆದು ಬಹುದಿವಸವಾ ಯಿತು, ಎಲ್ಲರೂ ಮರೆತರು. ಸು-ಶೇಗಾದರೂ ಆಗಲಿ, ನಾನು ಅಪ್ಪಣೆ ಕೊಡಲಾರೆನು. ಸ-ಹಾಗಾದರೆ ಶಾಂತದೀಪಕ್ಕೆ ಹೋಗುವನು.