ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 44 -

ಕುಲವನ್ನೂ ಅಳಿಸಿ ಬಿಡುವುದಕ್ಕಿಂತಲೂ, ನಾನು ಹೇಳಿದಂತೆ ನಡೆದುಕೊಳ್ಳುವುದು ಒಳ್ಳೆಯದಲ್ಲವೇ? ಅವರಂಗಜೀಬನ ಬಂದಿಯಾದ ಶೂದ್ರ ಮರಾಟನ ಕಪಟಪ್ರೇಮಪಾಶದಲ್ಲಿ ನೀನು ಬಿದ್ದು ಸಾಯುವುದಕ್ಕಿಂತಲೂ ಸಾಕ್ಷಾತ್ ಭಾರತ ಬಾದಶಾಹಿಯ ಪುತ್ರನಾದ, ವಿಕ್ರಮಸಂಪನ್ನನಾದ ಮುಆಜಮನ ಯಥಾರ್ಥ ಪ್ರಣಯಭಾಜನೆಯಾಗಿ, ಭಾಗ್ಯಶಾಲಿನಿ ಎನಿಸಿಕೊಳ್ಳುವುದು ಲೇಸಲ್ಲವೇ! ತುಚ್ಛನಾದ ಆ ಮಾವಳಿಗನೆಲ್ಲಿ? ರಜಪೂತ ಕನ್ಯೆಯಾದ ಶೈಲಿನಿ ಎಲ್ಲಿ? ಕೆಲವು ದಿನಗಳಿಂದ ಈಚೆಗೆ ನಿನ್ನ ನಡತೆ ನನಗೆ ಅಸಹ್ಯವಾಗುತ್ತ ಬಂದಿದೆ. ಅನ್ನಾಹಾರಾದಿಗಳಲ್ಲಿ ಅಲಕ್ಷ್ಯ, ಮನೆಯವರ ಮೇಲೆ ಔದಾಸೀನ್ಯ, ನನ್ನೊಡನೆ ಅವಿಧೇಯತೆ, ಮುಆಜಮನ ವಿಷಯದಲ್ಲಿ ತಾತ್ಸಾರ, ನಿನ್ನ ಆತ್ಮಸಂಭಾಷಣೆ, ನಿನ್ನ ಅಂತರಂಗ ಪಲಾಯನ- ಇವೆಲ್ಲವು ವಿಪರೀತವನ್ನು ಸೂಚಿಸುತ್ತಿವೆ. ಬಾದಶಹರ ರಾಜಕಾರ್ಯಗೌರವ, ಶಿವಾಜಿಯ ಆಗಮನ ಮುಆಜಮನ ನಿರ್ಬಂಧ, ನಿನ್ನ ಹುಚ್ಚು ಹಟ- ಇವೆಲ್ಲವುಗಳಿಂದ ನನ್ನ ಬುದ್ದಿಯು ಮು೦ಗಾಣದು” ಎಂದು ಹೇಳಿದನು.

ಶೈಲಿನಿಯು ಈ ವಾಕ್ಯಪರಂಪರೆಯಿಂದ ಕದಲದೆ, “ಅಪ್ಪಾ! ಶಿವಾಜಿಯು ಅವರಂಗಜೀಬನ ಬಂಧಿ ಎಂದು ನೀನು ಹೇಳಿದೆ. ಅವಮಾನ ಮಾಡಿದ್ದು ಸಾಲದೆ ಅವನನ್ನು ಮೋಸದಿಂದ ಬಂದಿಯಾಗಿ ಮಾಡಿದೆನೇ ? ಎಂದು ಕೇಳಿದಳು.

ರಾಜಸಿಂಹನು ಮೈದೆಗೆದು, “ಶಿವಾಜಿ ಬ೦ದಿಯಾಗಿರುವೆನಂದು ನಾನು ಹೇಳಿದೆನೇ? ನನ್ನ ಮನಸ್ಸು ಸರಿಯಾಗಿಲ್ಲ. ನಿದ್ದೆ ಗಣ್ಣುಗಳಿಂದ ಏನು ಹೇಳಿರುವೆನೆಂದು ಅರಿಯೆನು” ಎಂದು ಹೇಳಿ ಉಪ್ಪರಿಗೆಯಿಂದ ಇಳಿದುಹೋದನು.

ಶೈಲಿನಿಯು ತಂದೆಯ ಮಾತುಗಳನ್ನು ಮನಸ್ಸಿನಲ್ಲಿ ಮಥಿಸುತ್ತ, ಕುಳಿತಲ್ಲಿಯೇ ಗೋಡೆಗೆ ಒರಗಿ ನಿದ್ದೆ ಹೋದಳು.

ರಾಜಸಿಂಹನು ಎಚ್ಚರ ತಪ್ಪಿ ಹೇಳಿದಂತೆ, ಶಿವಾಜಿಯು ಡಿಲ್ಲಿಯಲ್ಲಿ ಸೆರೆಯಾಗಿದ್ದನು. ಶಿವಾಜಿಯು ತಪ್ಪಿಸಿಕೊಳ್ಳದಂತೆಯೂ, ರಾಜಪುತ್ರರೊಡನೆ ಒಳಸಂಚು ನಡೆಸದಂತೆಯೂ, ಅವರಂಗಜೀಬನು ಅವನ ಮೇಲೆ ಹೊಂಚು ಹಾಕಿದ್ದನು. ಆದರೆ ಈ ಪಹರೆಯಲ್ಲಿ ಶಿವಾಜಿಯ ಬಂಧನವು