ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 52 -

ಹೋಗುತ್ತಿದ್ದಳು. ಇದೆಲ್ಲವನ್ನು ಶಿವಾಜಿಯು ಅರಿತಿದ್ದನೋ ? ಇಲ್ಲವೋ ನಮಗೆ ಗೊತ್ತಿಲ್ಲ. "ಹಕೀಮನನ್ನು* ಮರಾಟರ ಶಿಬಿರದಲ್ಲಿ ಪ್ರವೇಶ ಮಾಡು ವುದಕ್ಕೆ ಯಾರೂ ಅಡ್ಡಿ ಮಾಡುತ್ತಿರಲಿಲ್ಲ. ಅವಳು ಒಳಹೋಗಿ ಯಾರೋ ಒಬ್ಬನ ಕೂಡೆ ಮಾತನಾಡಿ ಮರಳಿ ಹೋಗುತ್ತಿದ್ದಳು. ಈ ಕಥಾಪ್ರಾರಂಭದಲ್ಲಿ, ಯಾರು ರಹಸ್ಯವಾಗಿ ಶೈಲಿನಿಯ ಮಂದಿರದ ಮರಹತ್ತಿ, ಅವಳ ಪಾಣಿಗ್ರಹಣ ಮಾಡಿದನೋ, ಆ ಮಹಾಶಯನೊಡನೆ ಮಾತನಾಡಿ ಶೈಲಿನಿಯು ಮನೆಗೆ ಹಿಂದೆರಳುತ್ತಿದ್ದಳು. ಈ ರಾಯನು ಎರಡು ದಿವಸಗಳ ಹಿಂದೆ ಇವರಿಬ್ಬರು ಮರಾಟರ ಶಿಬಿರದ ಬಳಿಯಲ್ಲಿರುವ ಏಕಾಂತವಾಗಿ ಪ್ರಣಯ ಸಲ್ಲಾಪ ಮಾಡುತ್ತಿದ್ದಾಗ, ಮುಆಜಮನು ಶೈಲಿನಿಯ ಗುರುತು ಹಿಡಿದನು; ಮುಆಜಮನು ಅವರ ಸಂಭಾಷಣೆಗೆ ವಿಘ್ನವಾಗಿ ಬಂದುದು ಮಾತ್ರವಲ್ಲ; ಅದಕ್ಕಿಂತಲೂ ಸ್ವಲ್ಪ ದೂರಕ್ಕೆ ಹೋದನು. ಅವನು ಕೋಪಗೊಂಡು ತನ್ನ ಕೈ ಬಿಟ್ಟದ್ದು ಒಂದು; ಅನ್ಯರಿಗೆ ಕೈ ಕೊಟ್ಟದ್ದು ಒಂದು- ಇವೆರಡರಿಂದ ಮುಆಜಮನು ರೋಷಾವೇಶಗೊಂಡನು. ಅವನು ಶೈಲಿಸಿಯ ವಿಷಯವಾಗಿ ರಾಜಸಿಂಹನ ಕಿವಿಯಲ್ಲಿ ದೂರು ಸುರಿದನು, “ಶಿವಾಜಿಯು ನಿನ್ನ ಮಗಳನ್ನು ಎತ್ತಿಕೊಳ್ಳುವನು” ಎಂದು ಗದ್ದಲ ಹಚ್ಚಿದನು. ಮೊದಲೇ ಶಿವಾಜಿಯ ಮೇಲೆ ರಾಜಸಿಂಹನಿಗೆ ಇದ್ದ ಅಲಕ್ಷ್ಮಭಾವವು ಮುಆ ಜಮನ ಮಾತಿನಿಂದ ದ್ವೇಷವಾಗಿ ಪರಿಣಮಿಸಿತು, ಮಗಳು ಜಾರಿಹೋಗದಂತೆ ರಾಜಸಿಂಹನು ಅವಳನ್ನು ಕೊಟ್ಟಡಿಯಲ್ಲಿ ಮುಚ್ಚಿಟ್ಟನು. ದಿನಕ್ಕೆ ಎರಡು ಬಾರಿ ರಾಜ ಸಿಂಹನು ಅವಳನ್ನು ನೋಡುವನು; ಆದರೆ ಪೂರ್ವದಂತೆ ಮಾತನಾಡುತ್ತಿರಲಿಲ್ಲ. ರಾಜಸಿಂಹನ ದರ್ಶನವಾಗುತ್ತಲೇ ಬಂಧಿತಳಾದ ಶೈಲಿನಿಯು “ಶಿವಾಜಿ ಮಹಾರಾಜರು ಹೇಗಿರುವರು?” ಎಂದು ಕೇಳುವಳು. ತಂದೆಯ ಮಾತಿಲ್ಲದವನಾಗಿ, ಶಿವಾಜಿಯ ಪೂರ್ವಜರ ನಾಮಸ್ಮರಣೆ ಮಾಡುತ್ತ, ಮಹಡಿಯಿಂದ ಕೆಳಕ್ಕೆ ಇಳಿದು ಹೋಗುವನು. ಈ ದಿನ ರಾಜಸಿಂಹನು ಕಾರ್ಯಗೌರವದಿಂದ ಅರಮನೆಯಲ್ಲಿ ಹಗಲೆಲ್ಲಾ ತಳುವಿದ್ದನು, ಯಾವ ಕಾರ್ಯವಿಶೇಷದಿಂದ ಅವನು ಏಳಂಬಿಸಿದ್ದನೋ ಅದನ್ನು ಶೈಲಿನಿಯ ತಿಳಿದಿದ್ದಳು, ರಾಜಸಿಂಹನು ಹಿಂದಿನ ರಾತ್ರಿ ಮುಜಮನೊಡನೆ ಬಾದಶಹನ ಯಾವ ಆಜ್ಞೆಯನ್ನು ತಾವು ಮನ್ನಿಸಬೇಕೆಂಬ ವಿಷಯದಲ್ಲಿ ಮಾತುಕಥೆ