ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 51 -

ನಿರ್ಧರಿಸಿ ಕೆಳಕ್ಕೆ ಇಳಿದನು. “ಅಂದು ನಾನು ಕಾಲಿಗೆ ಎರಗಿದಾಗ ನನ್ನನ್ನು ಎಡವಿ ಒಡೆದುಬಿಟ್ಟಳು, ತಾಯಿತಂದೆಗಳಿಗೆ ನಮಸ್ಕರಿಸದ ನನ್ನ ಪವಿತ್ರ ಮಸ್ತಕವನ್ನು ಈ ಮಳಿಯು ಚಂಡಾಡಿದಂತೆ ಒದೆದುಬಿಟ್ಟಳು. 'ಹರಾನ್ ಖೋರಿಯನ್ನು' ಮೂಗುದಾರ ಹಿಡಿದು, ಹಟ್ಟಿಗೆ ಒಯ್ಯದೆ ಬಿಡೆನು.” ಎಂದು ಮನಸ್ಸಿನಲ್ಲಿಯ ಅನ್ನು ತೆ, ಮುಜಮನು ಮಾರ್ಗಕ್ಕೆ ಬಂದನು.

ರಾತ್ರಿ ೧೦ ಗಳಿಗೆ ಕಳೆಯಿತು. ಪೃಥ್ವಿಗೆ ಗಾಢಾಂಧಕಾರದ ಅವರಣವು ಸುತ್ತಿ ತು. ಶ್ರಾಂತವಾದ ಡಿಲ್ಲಿ ನಗರವು ಪ್ರಕೃತಿಯ ಸುಷುಪ್ತಿಯಲ್ಲಿ ಸ್ವಪ್ನ ಮಯವಾಗಿತ್ತು. ಮಾರ್ಗಗಳಲ್ಲೆಲ್ಲಾ ನಿರ್ಜನ, ನಿಶ್ಯಬ್ದ, ಭೂ ಗಗನಗಳ ಆಂತರವು ಉಜ್ವಲವಾದ ನಕ್ಷತ್ರಗಳಿಂದ ಅಲ್ಲದೆ ತಿಳಿಯಲು ಅಸಾಧ್ಯ. ನೀಲವಾದ ಆಕಾಶದಲ್ಲಿ ಪ್ರಭಾಪುಂಜದಂತಿರುವ ಸಾವಿರಾರು ನಕ್ಷತ್ರಗಳು-- ಕರಿಕಂಬಳಿಯಲ್ಲಿ ದಟ್ಟವಾಗಿ ಚಿಮಿಕಿಸಿದ ವಜ್ರದ ಗೊಂಚಲುಗಳಂತಿರುವ ನಕ್ಷತ್ರಗಳು, ಈ ನಿಶಿಯಲ್ಲಿ ಶೈಲಿನಿಯು ಒಬ್ಬಳೇ ಹೋಗುತ್ತಿದ್ದಳು. ಎಲ್ಲಿಗೆ ಹೋಗುತ್ತಿದ್ದಳೆಂಬುದು ವಾಚಕರಿಗೆ ತಿಳಿದಿದೆ ರಾಜಮಾರ್ಗದಿಂದ ಕವಲಾಗಿ ಹೋದ, ಅಳಿಸಿದ ಕಾಲುಹಾದಿಯನ್ನು ಹಿಡಿದು ಹೋಗುತ್ತಿದ್ದಳು. ಶೈಲಿನಿಯ ಗುರುತು ಯಾರಿಗೂ ಹತ್ತದು. ಹಾದಿಯಲ್ಲಿ ಜನಸಂಚಾರವಿಲ್ಲ; ಅದರಮೇಲೂ ಅಂಧಕಾರ; ಅದೂ ಅಲ್ಲದೆ ಗಂಡು ಉಡುಪನ್ನು ಉಟ್ಟುಕೊಂಡಿದ್ದಳು. ಆ ಕಾಲದಲ್ಲಿ ರೋಗಿಗಳ ಚಿಕಿತ್ಸೆಗೆ ಹೋಗುವ "ಹಕೀಮರು” ಯಾವ ಉಡುಪನ್ನು ಧರಿಸಿಕೊಳ್ಳುತ್ತಿದ್ದರೋ, ಆ ವೇಷವನ್ನು ಶೈಲಿನಿಯು ಇಂದು ಅಳವಡಿಸಿದ್ದಳು. ಇದೇ ವೇಷದಲ್ಲಿ ಅವಳು ಒಂದೆರಡು ಸಲ ಮರಾಟರ ಶಿಬಿರಕ್ಕೆ ಹೋಗಿದ್ದಳು. ಅವಳ ಇಚ್ಛಿತ ವರ'ನು ಸಂಕೇತ ಮಾಡಿದ ರಾತ್ರಿಯಲ್ಲಿ ರೈಲಿನಿಯು ಅವನ ಆಶಾನುಬದ್ಧಳಾಗಿ ಒಂದು ಗುರುವಾರ ಹೋದಳು. ಆದರೆ ಆ ದಿನ ಶಿವಾಜಿಯು ತನ್ನ ಪರಿಜನರೊಡನೆ ಯಾವುದೋ ಒಂದು ರಾಜ್ಯಾಲೋಚನೆಯನ್ನು ಕುರಿತು ವಿಚಾರಮಗ್ನನಾಗಿದ್ದುದರಿಂದ, ಶೈಲಿನಿಯು ಕೃತಕಾರ್ಯಳಾಗಲಿಲ್ಲ. ಶಿವಾಜಿಯ ಅಸ್ವಸ್ಥವು ಶೈಲಿನಿಯ ಪುನರಾಗಮನಕ್ಕೆ ಕಾರಣವಾಯಿತು. ಶಿವಾಜಿಗೆ ಮೂಲಿಕೆಯನ್ನು ತಂದುಕೊಡುವ ನಿಮಿತ್ತವಾಗಿ ಜೈಲಿನಿಯು "ಹಕೀಮ" ವೇಷದಲ್ಲಿ ಬಂದು