ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 54 -

ಬಂದಿಯಿಂದ ತಪ್ಪಿಸಿಕೊಳ್ಳುವ ವಿಚಾರದಲ್ಲಿ ಅವನ ಮನಸ್ಸು ಮಗ್ನ ಹಾಗೆ ಮಗ್ನವಾಗಿತ್ತು ಎಂದು ತಿಳಿಯಲೆ? ಆದರೂ ಈ ಹತಭಾಗಿನಿಗೆ ಆ ಹೃದಯದಲ್ಲಿ ಒಂದು ಎಡೆಯಿಲ್ಲವೇ? ರಾಜ್ಯ ಕಾರ್ಯವು ವಿಶೇಷವಾದ ಮಾತ್ರಕ್ಕೆ ಅರಸರು ತಮ್ಮ ಪ್ರಾಣವಲ್ಲಭೆಯರನ್ನು ತ್ಯಜಿಸಿಬಿಡುವರೇ? ಬಿಡುವಂತಹರು ಬಿಡುವರು. ಶ್ರೀರಾಮನು ತನ್ನ ಪತ್ನಿಯನ್ನು ತೊರೆದನು. ದೂ ಬಾಯನ್ನು ಮುಚ್ಚುವುದಕ್ಕೆ ರಾಮನು ಜಾನಕಿಯನ್ನು ಕೈಬಿಟ್ಟನು. ನನ್ನಲ್ಲಿ ದೋಷವೇನು? ಹಗಲೆಲ್ಲಾ ಪತಿದೇವತೆಯು ಧ್ಯಾನಮಾಡುತ್ತ, ಎಂದಿಗೆ ಸುಖಿಯಾಗುವೆನು ಎಂದು ಚಿಂತಿಸುತ್ತ ಇರುವುದು ದೋಷವೇ? ಇರುಳೆಲ್ಲಾ ನಿದ್ದೆಯಿಲ್ಲದೆ ನೆಲದ ಮೇಲೆ ಹೊರಳುತ್ತ, ಕನಸುಕಂಡ ಮಾತ್ರಕ್ಕೆ ಸುಖಿಯಂದು ತಿಳಿದು, ಎಚ್ಚರವಾಗಿ ನೋಡುವುದು ದೊಷವೇ? ತಂದೆಯ ಮಾತನ್ನು ಮೂಾರಿ, ಅನೇಕ ನೃಪಕುಮಾರರನ್ನು ತ್ಯಜಿಸಿ, ನೀನೆ ಗತಿಯಂದು ನಂಬಿದುದು ದೋಷವೇ? ನಾನು ಮರ್ಖಳು, ಸುಮ್ಮನೆ ಹುಚ್ಚಳಂತೆ ಮಾತಾಡುವೆನು. ನನ್ನ ಮನಸ್ಸಿನ ಭ್ರಮೆ; ನನ್ನ ಹುಚ್ಚು ಭ್ರಾಂತಿ. ಪತಿಯ ಪ್ರೇಮದಲ್ಲಿ ಸಂಶಯಪಡುವವಳು ಮೂರ್ಖಳಲ್ಲದೆ ಮತ್ತೇನು? ನನ್ನ ವಲ್ಲಭನ ಪ್ರೀತಿಯ ಅಚಲವಾದುದು; ಪರ್ವತದಂತೆವಾದುದು. ನಕ್ಷತ್ರವು ಸ್ಥಿರವಾದುದು; ಅದು ಅಸ್ಥಿರವೆಂಬುದು ಚಲಿಸುತ್ತಿರುವವನ ಸುಳ್ಳು, ಭಾವನೆಯಾಗಿದೆ. ಪತಿಯ ಪ್ರಣಯಮುಕುರದಲ್ಲಿ ನಮ್ಮ ಮನೋಭಾವವೇ ಪ್ರತಿಬಿಂಬಿಸುವುದಲ್ಲದೆ, ಅದು ತಾನೇ ವರ್ಣರಹಿತವಾದುದು. ನಾನು ಇದನ್ನೆಲ್ಲಾ ಚಿಂತಿಸುವಷ್ಟಕ್ಕೆ ನನ್ನ ನಡೆಯು ಹಿಂಚುವುದು. ನನ್ನ ಏಳcಬವು ಘೋರ ಪ್ರಮಾದಕ್ಕೆ ಕಾರಣವಾಗುವುದು. ಇಕೋ! ಶಿಬಿರವು ನನ್ನ ಮುಂದೆ ತೋರುತ್ತಿರುವುದು. ಇಲ್ಲಿಯೇ! ನಿನಗೆ ನಮಸ್ಕಾರವು! ನಿನ್ನ ಧರ್ಮಾಂಧತೆಗೆ, ನಿನ್ನ ಕುಹಕೋಪಾಯಗಳಿಗೆ, ನಿನ್ನ ರಾಜತಂತ್ರಗಳಿಗೆ, ನಿನ್ನ ದುಷ್ಕಾರ್ಯಕೌಶಲಕ್ಕೆ ತ್ರಾಹಿ ಎನ್ನು ವನು! ನಮ್ಮ ಸ್ವಾತಂತ್ರಾಪಹಾರಿಯಾದ ನಗರವೇ! ನಾನು ಇನ್ನೂ ನಿನ್ನ ಮುಖವನ್ನು ನೋಡಲಾರೆನು. ರಾಜಪುತ್ರರ ಸುವರ್ಣ ಕಾರಾಗೃಹವೇ! ಯಾವಾತನನ್ನು ನಿನ್ನ ಮೊಗದ ಕೈಗಳಿಂದ ಬಂಧಿಸಬೇಕೆಂದು ನೀನು