ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 55 -

ಉಪಾಯವನ್ನು ಮಾಡುತ್ತಿರುವೆಯೋ, ಆತನ ಸಹಾಯದಿಂದಲೇ ನಾನು ನಿನ್ನ ಅಪವಿತ್ರ ಸ್ಥಳದಿಂದ ಮುಕ್ತಳಾಗುವೆನು ನಿನ್ನ ಅಧೀಶ್ವರಿಯಾಗಿ ನಿನ್ನ ಸಾಮ್ರಾಜ್ಯ ರಥವನ್ನು ನಾನು ನಡಿಸುವುದಕ್ಕೆ ಧಿಕ್ಕಾರವಿರಲಿ! ನಾನು ಶಿವಾಜಿಯ ದಾಸಿಯಾಗಿ ಅವನ ರಾಜ್ಯವೆಂಬ ಮಂದಿರದ ಬಳಿಯಣ ಕಸವನ್ನು ಗುಡಿಸಿ ಈ ಜೀವಕಾಲವನ್ನು ಕಳೆಯುವೆನು.”

ಅರಮನೆಯ 'ಘುಸಾಲಿಖಾನೆಯಲ್ಲಿ' ಅವರಂಗಜೇಬನು ಈ ರಾತ್ರಿ ಏಕಾಂತದಲ್ಲಿ ರಾಜ್ಯ ಕಾರ್ಯವನ್ನು ಕುರಿತು ಆಲೋಚಿಸುತ್ತಲಿದ್ದನು. ಮಂತ್ರಿಗಳು ಯಾರೂ ಅವನ ಬಳಿಯಲ್ಲಿ ಇರಲಿಲ್ಲ. ಬಾದಶಹನ ಬಲಗಡೆಯಲ್ಲಿ ರಾಜಸಿಂಹನು ನಿಂತಿದ್ದನು. ಸ್ವಲ್ಪ ದೂರದಲ್ಲಿ ಇಬ್ಬರು ಸಿಪಾಯರು ಕಾವಲಾಗಿದ್ದರು, ಬಾದಶಹನು ಹಣೆಯನ್ನು ನಿರಿಗೊಳಿಸಿ “ನಮ್ಮ ಮನಸ್ಸು ಸ್ವಸ್ಥವಾಗಿಲ್ಲ. ಮರಾಟನ ಶಿಬಿರದಿಂದ ಏನೊಂದೂ ವರ್ತಮಾನ ಬರಲಿಲ್ಲ, ಹೋದ ಮುಂಜಮನು ಇನ್ನೂ ಬರಲಿಲ್ಲ. ನಮಗೆ ಯೋಚನೆ ಹತ್ತಿದೆ" ಎಂದು ಹೇಳಿದನು.

ರಾಜಸಿಂಹ:- “ ಅಂತಹ ಯೋಚನೆಗೆ ಆಸ್ಪದವಿಲ್ಲ. ಈ ದೂತನು ಈಗ ತಾನೇ ಪಾಳೆಯದಿಂದ ಬಂದಿರುವನು. ಅವನು ಶಿವಾಜಿಯನ್ನು ಕಣ್ಣಾರೆ ನೋಡಿ ಬಂದಿರುವನು.”

ಬಾದಶಹನು ಕೈಯಿಂದ ತಲೆಯನ್ನು ಸವರುತ್ತ, “ನೀವೆಲ್ಲರು ಹೇಗೆ ಹೇಳಿದರೂ, ನಮ್ಮ ಮನಸ್ಸಿಗೆ ಸಮಾಧಾನವಿಲ್ಲ. ಬೋನಿನಲ್ಲಿ ಬಿದ್ದ ಬೆಟ್ಟದ ಇಲಿಯು ತಪ್ಪಿಸಿಕೊಂಡಿರಬಹುದು ಎಂದು ನಮಗೆ ಶಂಕೆ ಉಂಟು. ನಮ್ಮ ಶಂಕೆ ಸುಳ್ಳಾಗಲಾರದು” ಎಂದನು.

ರಾಜಸಿಂಹನು ಸ್ವಲ್ಪ ಹತ್ತಿರಕ್ಕೆ ಬಂದು, “ಹುಜುರ್! ಅಂತಹ ಸಮಯ ಒದಗಿದರೆ ಈ ಸೇವಕನು ಯಾವ ರ್ಯ ಸಿದ್ಧನಾಗಿರುವನು. ಬೋನು ಬಿಗಿಯಾದುದರಿಂದ, ಇಲಿಯು ತಪ್ಪಿಸಿಕೊಳ್ಳಲಾರದು” ಎಂದು ಸಮಾಧಾನಗೊಳಿಸಿದನು.

ಬಾದಶಹನು ಸ್ವಲ್ಪ ಆಲೋಚಿಸುತ್ತ, ಮುಜವನು ಬರುವ ತನಕ ನೀನು ಇಲ್ಲಿಯೇ ಇರುವೆಯಾ? ಅವನು ವಿಲಾಸಪ್ರಿಯನು; ವಿಲಾಸದಲ್ಲಿ