ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 56 -

ಮಗ್ನನಾಗಿ ಇರುಳೆಲ್ಲ ಕಳೆದರೆ, ಕಾರ್ಯವು ಕೆಟ್ಟು ಹೋಗುವುದು” ಎಂದನು.

ರಾಜಸಿಂಹ:-“ಅಪ್ಪಣೆಯಾದರೆ ನಾನೇ ಹೋಗುವೆನು.”

ಬಾದಶಹನು ಸ್ವಲ್ಪ ಶಾಂತನಾದನು. ರಾಜಸಿಂಹನ ಕಡೆಯ ಮಾತುಗಳಿಂದ ಅವನ ಶಿರಸ್ಸಿನ ಭಾರವು ಕೊಂಚ ಇಳಿದಂತಾಯಿತು. ಒಡನೆ ಅವರಂಗಜೇಬನು ರಾಜಸಿಂಹನನ್ನು ತನ್ನ ಬಳಿಗೆ ಕರೆದು, ಅವನ ಕಿವಿಯಲ್ಲಿ ಏನನ್ನೋ ಉಸುರಿದನು. ರಾಜಸಿಂಹನು ಇನ್ನೂ ಅಲ್ಲಿ ತಡೆಯಲಿಲ್ಲ. ಅವನು ಬಾದಶಹನಿಗೆ ಪ್ರಣಾಮವನ್ನು ಮಾಡಿ, ಅರಮನೆ ಕಂದ ಹೊರಟುಹೋದನು.

ಮಧುರವಾದ ಚಂದ್ರೋದಯ. ಬೆಳದಿಂಗಳಲ್ಲಿ ನನೆದ ಮರಾಟಕ ಶಿಬರ. ಶಿಬಿರವು ಸುತ್ತಲೆಲ್ಲಾ ರಜತಮಯವಾದಂತಿತ್ತು. ಚಂದ್ರನು ಮೆಲ್ಲಮೆಲ್ಲನೆ ಇಳಿವಷ್ಟಕ್ಕೆ ಚಂದ್ರಿಕೆಯು ಮಂದಿರದ ತೆರೆದ ಕಿಟಕಿ ಗಳಿ೦ದ ಹಾಯ್ದು, ಒಳಗಡೆಯ ಕತ್ತಲನ್ನು ತೊಲಗಿಸುತ್ತಲಿತ್ತು. ಮಂದಿರದ “ ಹೋಲ್' ಒಂದು ಚಂದ್ರಿಕೆಯಿಂದ ಉಜ್ವಲವಾಗಿತ್ತು, (ಹೋಲ್' ಪರಿಷ್ಕಾರವಾಗಿತ್ತು, ಆದರೆ ಎರಡೂ ದ್ವಾರಗಳಿಗೂ ರೇಷ್ಮೆಯ ಪರದೆ; ಪರದೆಯಲ್ಲಿ ಚಿತ್ರಿತವಾದ ಹೂಗಳು. ಕಿಟಿಕಿಗೆ ಇದ್ದ ಪರದೆಯು ತೆರೆದಿತ್ತು. ಚಂದ್ರನ ಕಿರಣವು ಈ ಕಿಟಕಿಯಿಂದ ನುಸುಳಿ ಬಂದು, ಗೋಡೆಯ ಸಟ್ಟೆ ತೂಗುಗಳ (Silk hangings) ಮೇಲೆ ಕುಣಿಯುತ್ತಲಿತ್ತು. ಗೋಡೆಗೆ ಸಮೀಪವಾಗಿ ಪರ್ಯಂಕ; ಬೆಳ್ಳಿಯ ಕಾಲುಗಳುಳ್ಳ ಪರ್ಯ೦ಕ. ಮಂಚದ ನಾಲ್ಕು ಕಂಬಗಳಿಗೂ ಬೆಳ್ಳಿ; ಇವುಗಳ ಮೇಲೆ ಚಿನ್ನದ ಹುಲಿಯ ಮುಖಗಳು. ಮಂಚದ ಕೆಳಗೆ ಮೆತ್ತಗಾದ, ದಪ್ಪಗಾದ ರತ್ನ ಗಂಬಳಿಯು ಹಾಸಿತ್ತು. ಗೋಡೆಗಳಲ್ಲಿ ಚಿತ್ರಗಳು ಇದ್ದಂತೆಯೇ ರತ್ನ ಗಂಬಳಿಯ ಮೇಲೂ ಚಿತ್ರಗಳು. ಮಂಚದ ಮೇಲೆ ಹಂಸತೂಲಿಕಾಕಲ್ಪ. ಕಿನ್‌ಕಾಬಿನಿಂದ ರಚಿತವಾದ ಮೃದುವಾದ ಹಾಸಿಗೆ, ಹಾಸಿಗೆಯ ಮೇಲೆ, ಡಾಕ್ಕಾ ಮಲ್‌ಮಲಿನ ಹೊದಿಕೆ. ಹಾಸಿಗೆಯ ಇಕ್ಕಡೆಗಳಲ್ಲಿಯೂ ತುಪ್ಪುಳಿನ ತಲೆದಿಂಬುಗಳು. ಹಾಸಿಗೆಯ ಮೇಲೆ ಯಾರೂ ಮಲಗಿ