ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 57 -

ದಂತೆ ತೋರಲಿಲ್ಲ. ಹೊದಿಕೆಯು ಸುರ್ಕುಗೊಂಡಿರಲಿಲ್ಲ. ಅಂತಸ್ತಿನಿಂದ ಬೆಳ್ಳಿಯ ತೂಗುದೀಪವೊಂದು ಮಿಣಮಿಣನೆ ಉರಿಯುತ್ತಲಿತ್ತು. ದೀಪಕ್ಕೆ ಚಿನ್ನದ ಸರಪಣಿ; ಗಂಧದ ಎಣ್ಣೆ, ದೀಪದ ಕೆಳಗೆ ಆಜಾನುಬಾಹುವಾದ ಯುವಕನೊಬ್ಬನು ಏನನ್ನೋ ಯೋಚಿಸುತ್ತ ಕುಳಿತಿದ್ದನು. ಯುವಕರು ಒಂದು ತಡವೆ ಕಣ್ಮರಸುತ್ತ, ಮತ್ತೊಂದು ತಡವೆ ಚಂದ್ರನನ್ನು ನೋಡುತ್ತಲಿದ್ದನು. ನಡುನಡುವೆ “ನಾನೇಕೆ ಹೀಗೆ ಮಾಡಿದನು?” ಎನ್ನುವನು. ದೀಪವು ನಂದಿಹೋಗುವಂತಿತ್ತು. ಯುವಕನು ಅದನ್ನು ಸರಿಮಾಡವುದಕ್ಕೆ ಎದ್ದನು. ಅಷ್ಟರಲ್ಲಿ ಹೊರಕ್ಕೆ ಯಾರೋ ಬಂದಂತೆ ಸದ್ದಾಯಿತು. ಬಂದವನಿಗೆ ಯುವಕನಿದ್ದ ಕೊಟ್ಟಡಿಯನ್ನು ಪ್ರವೇಶಿಸುವುದಕ್ಕೆ ಯಾರೂ ಅಡ್ಡಿ ಮಾಡಲಿಲ್ಲ. ಬಂದವಳು “ಹಕೀಮನ" ವೇಷದಲ್ಲಿದ್ದಯಿತು.

ಯುವಕ:-“ಕೈಲಿನಿ! ನೀನು ಈ ಗಂಭೀರವಾದ ರಾತ್ರಿ ಇಲ್ಲಿ ಬಂದೆ ಏತಕ್ಕೆ?”

ಶೈಲಿನಿಯು ಈ ಮಾತಿನಿಂದ ನೀರಾವಳಾದಳು. ಸಲ್ಲಾಪದ ಪ್ರಾರಂಭದಲ್ಲೇ ಕೇಳಿದ ವಿಪರೀತವಾದ ಪ್ರಶ್ನೆಗೆ ಶೈಲಿನಿಯ ತುಟಿಗಳು ಉತ್ತರವಿಲ್ಲದೆ ಅಲುಗಿದುವು.

ಯುವಕನು “ಏಕೆ ಬಂದೆ? ಏಕೆ ಪ್ರಯಾಸಪಟ್ಟಿ?” ಎಂದು ಮತ್ತೂ ಕೇಳಿದನು.

ಶೈಲಿನಿಯು ಸ್ವಲ್ಪ ಧೈರ್ಯಗೊಂಡ “ನಿನ್ನ ಕ್ಷೇಮವನ್ನು ವಿಚಾರಿಸುವುದಕ್ಕೆ; ಅವರಂಗಜೇಬನ ಕೃತ್ರಿಮವನ್ನು ತಿಳಿಸುವುದಕ್ಕೆ” ಎಂದಳು.

ಯುವಕನು ಸಿಟ್ಟುಸಿರಿಡುತ್ತ “ಎಲ್ಲವೂ ಕೃತ್ರಿಮ ಎಂದು ಹೇಳಿ ಪುನಃ ಉಸಿರು ಬಿಟ್ಟನು.

ಶೈಲಿನಿಯ ಹೃದಯವು ದಡದಡಿಸತೊಡಗಿತು. ಆದರೂ ಅವಳು ಮನಸ್ಸನ್ನು ಸ್ಥಿರಗೊಳಿಸಿ, ತನ್ನ ಪ್ರಿಯನ ಮಾತನ್ನು ಲಕ್ಷಿಸದಂತೆ ಮಾಡಿ, “ನನ್ನ ತಂದೆಯು ವಿಚಾರವಿಲ್ಲದೆ ಮಾಡಿದ ಕೃತ್ಯಕ್ಕೆ ನೀನು ಇಷ್ಟು—?”