ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 58 -

ಯುವಕನು ಕಣ್ಣೀರನ್ನು ಕಾಣಿಸದೆ ಒರಸುತ್ತ “ಎಲ್ಲರೂ ವಿಚಾರವಿಲ್ಲದೆ ಕೆಲಸಮಾಡುವರು, ನಾನೂ ಹಾಗೆಯೇ, ನೀನೂ ಹಾಗೆಯೇ, ಎಲ್ಲರೂ ಹಾಗೆಯೇ” ಎಂದು ಸ್ತಬ್ಬನಾದನು.

ಯುವಕನ ಮಾತುಗಳು ಶಲ್ಯದಂತೆ ಶೈಲಿನಿಯ ಮನಸ್ಸನ್ನು ಚುಚ್ಚಿದುವು. ಶೈಲಿನಿಯ ಹತ್ತಿರ ಬಂದು, “ನಾನು ವಿಚಾರವಿಲ್ಲದೆ ಮಾಡಿದ ಕಾರ್ಯವು ಯಾವುದು?” ಎಂದು ಕೇಳಿದಳು.

ಯುವಕನು ತಲೆಯನ್ನು ಕೈಯಿಂದ ಆಚರಿಸುತ್ತ “ನ-ನನ್ನನ್ನು-- ಪ್ರೀ- ಪ್ರೀತಿಸಿದುದು” ಎಂದು ಹೇಳಿ, ಮುಖವನ್ನು ತಗ್ಗಿಸಿದನು.

ಶೈಲಿನಿಯ ಹೃದಯವು ಐದೀರ್ಣವಾಗುವಂತಿತ್ತು. ಅವಳು ಕಿಟಕಿಯ ಕಡೆಗೆ ಕಣ್ಣೆತ್ತಿ ನೋಡಿದಳು. ಚಂದ್ರನು ಇದಿರಿಗೆ ತೋರುತ್ತಿರಲಿಲ್ಲ, ಶೈಲಿನಿಯು ಕಾತರಸ್ವರದಿಂದ, “ನನ್ನ ಕೃತ್ಯಗಳಲ್ಲಿ ವಿಚಾರವಿಲ್ಲ. ಅದನ್ನು ನಾನು ತಿಳಿದಿರುವೆ. ನನ್ನ ಪ್ರೀತಿಯಲ್ಲಿ ಆವಿಚಾರವು ಯಾವುದು? ತುಂಬಿಯು ಕಮಲದ ಬಳಿಗೈದುವುದರಲ್ಲಿ ಯಾವ ವಿಚಾರ ಮಾಡುವುದು?”

ಯುವಕ:- “ಕಮಲ ಪುಷ್ಪವೊ, ಕಿಂಶುಕಪುಪ್ಪವೋ ಎಂದು ನೋಡದೆ ಇರುವುದೇ??

ಶೈಲಿನಿಯ ಬಾಯಲ್ಲಿ ಮಾತಿಲ್ಲದೆ ಯುವಕನನ್ನೇ ನೋಡುತ್ತ ನಿಂತಳು. ಯುವಕನು ರುದ್ಧಕಂಠನಾದನು. ಹೊರಕ್ಕೆ ಯಾರೋ ಬಂದಂತೆ ಸದ್ದು ಕೇಳಿಸಿತು.

ಒಡನೆ ಶೈಲಿನಿಯ ಕೈಯನ್ನು ಯುವಕನು ತನ್ನ ಕೈಯಿಂದ ಬಿಗಿ ಹಿಡಿದು “ಜೈಲಿನಿ! ನನ್ನನ್ನು ಮನ್ನಿಸು! ಶೈಲಿನಿ! ನನ್ನನ್ನು ಕ್ಷಮಿಸು!” ಎಂದು ಹೇಳಿ ಅಳತೊಡಗಿದನು.

ಅಷ್ಟರಲ್ಲಿ ಹೊರಗಿನ ಗದ್ದಲವು ಹೆಚ್ಚಾಯಿತು. ಶೈಲಿನಿಯು ಅವಾಕ್ಕಾದಳು. ಆದರೂ ಚಿತ್ತಸ್ಥೆರ್ಯದಿಂದ, “ರಾಜಾಧಿರಾಜ! ಈ ದಾಸಿಯು ಯಾವುದನ್ನು ಮನ್ನಿಸಬೇಕು? ನಾನು ಕ್ಷಮಿಸುವುದಕ್ಕೆ ಅಪರಾಧವೇನಿದೆ?” ಎಂದು ವಿಸ್ಮಿತನಯನಗಳಿಂದ ಕೇಳಿದಳು.