ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 60 -

ಮುಆಜಮನು ಹೊರಕ್ಕೆ ಬಂದು, ಪಹರೆಯವನಿಗೆ “ಬಾಗಿಲನ್ನು ಬಿಗಿಮಾಡು” ಎಂದು ಆಜ್ಞೆ ಕೊಟ್ಟನು.

ಮರಾಟಿನು ಹೊರಕ್ಕೆ ಬಾರದಂತೆ, ಪಹರೆಯವನು ಬಾಗಿಲನ್ನು ಬಿಗಿದುಬಿಟ್ಟನು. ಮರಾಟನು ಉಚ್ಚಸ್ವರದಿಂದ, “ಶೈಲಿನಿ! ಶೈಲಿನಿ! ಪ್ರವಾದ ಸಂಭವಿಸುವಂತಿದೆ. ಬೇಗನೆ ಓಡಿಬಿಡು! ನಿನ್ನ ಪ್ರಾಣವನ್ನು ರಕ್ಷಿಸಿಕೊಳ್ಳು!” ಎಂದು ಹೇಳುತ್ತ ಮತ್ತೊಂದು ಕೊಟಡಿಗೆ ಹೋಗಿ, ತೆರೆದಿದ್ದ ಕಿಟಕಿಯನ್ನು ಹತ್ತುತ್ತಿದ್ದನು. ಅದನ್ನು ನೋಡಿ ಮಂದಿರದ ಜಗುಲಿಯ ಮೇಲಿದ್ದ ಮಆಜಮನು ಓಡತೊಡಗಿದನು. ಶಿಬಿರದ ಸುತ್ತಲಿದ್ದ ಸೈನಿಕರೆಲ್ಲರು ಗದ್ದಲದಿಂದ ಸಂಭ್ರಾಂತರಾದರು. ಅಷ್ಟರಲ್ಲಿ ರಾಜಸಿಂಹನು ಮಂದಿರದ ಬಳಿಯಲ್ಲಿ ಇಬ್ಬರು ಸಿಪಾಯರೊಡನೆ ಬಂದು ಇಳಿದನು. ಮರಾಟನು ಕಿಟಕಿಯನ್ನು ಹತ್ತಿ, ಕೈಯಲ್ಲಿದ್ದ ಖಡ್ಗವನ್ನು ಜಳಪಿಸುತ್ತ ಕೆಳಗೆ ದುಮುಕುವುದಕ್ಕೆ ಸಿದ್ಧನಾಗಿದ್ದನು. ಮುಅಜವನು ರಾಜಸಿಂಹನನ್ನು ನೋಡಿ, “ಅಯ್ಯಾ ! ಶಿವಾಜಿಯು ನನ್ನನ್ನು ಅಟ್ಟ ಕೊಂಡು ಬರುವನು. ಇಕೋ! ನನ್ನನ್ನು ರಕ್ಷಿಸು~ " ಎಂದು ಚೀರುತ್ತ ಹತ್ತಿರಕ್ಕೆ ಬಂದನು. ರಾಜಸಿಂಹನು ಮರಾಟನನ್ನು ನೋಡಿದನೋ ಇಲ್ಲವೋ, ಉಪ್ಪರಿಗೆಯ ಮೇಲೆ ಕಾವಲಿದ್ದ ಸೈನಿಕರಿಗೆ ಕೈಸನ್ನೆ ಮಾಡಿ, “ಕಳಚಿಬಿಡು!” ಎಂದು ಒದರಿದನು. ನೂರಾರು ಬcಡಿಗಳ ಗಡಗಡ ಶಬ್ದದ ಚೀತ್ಕಾರವೊಂದು ಮಹಡಿಯಿಂದ ಕೇಳಿಸಿತು. ಮರಾಟನು ಕಿಟಕಿಯಿಂದ ಕೆಳಕ್ಕೆ ಹಾರಿದನು. ಕಣ್ಣು ಮುಚ್ಚುವಷ್ಟರಲ್ಲಿ ಮಂದಿರದ ಉಪ್ಪರಿಗೆಯು ಮಾಡಿನೊಡನೆ ಜರಿದು ಜಾರಿ ಬರುವಂತಿತ್ತು, ಸಾವಿರಾರು ಬೀಳಲು ಗಳಿಂದ ಆದರಿಸಿದ್ದ ಉನ್ನತವಾದ ಮಹತ್ತಾದ ಆಲದ ಮರವು ಸಿಡಿಲಘಾತದಿಂದ ಬುಡದೊಡನೆ ನೆಲಕ್ಕೆ ಒರಗುವಂತೆ, ಸೈನಿಕರು ಶೀಘ್ರವಾಗಿ ಗೊಣಸುಗಳನ್ನು ಕಳಚಿ ಬಿಡುತ್ತಲೇ, ಆ ಕೃತ್ರಿಮಭವನವು ಓರ್ಗುಡಿಸಿ ಬೀಳತೊಡಗಿತು.

ಮುಆಜಮನು ಕಳವಳದಿಂದ “ಅಯ್ಯೋ! ಅಯ್ಯೋ! ಶೈಲಿನಿಯು ಒಳಕ್ಕೆ ಇರುವಳು--ನಿನ್ನ ಮಗಳನ್ನು ರಕ್ಷಿಸು!” ಎಂದು ಚೀರಿದನು.