ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 61 -

ಅದೇ ಸಮಯದಲ್ಲಿ ಶಿಬಿರದ ಅಂತಸ್ತು ಮರಾಟನ ತಲೆಯನ್ನು ಹಳಚಿತು. ಮರಾಟನು ಭಾರದಿಂದ ಮು೦ದರಿಸಲಾರದೆ 'ಜೈಲಿನಿ-ಶೈ ಎನ್ನುತ್ತ ಅಡ್ಡಗೆಡಲಿಕ್ಕಾದನು.

'ಶೈಲಿನಿ' ಎಂಬ ಮಾತು ಕಿವಿಗೆ ಬಿದ್ದಿತೊ ಇಲ್ಲವೊ ರಾಜಸಿಂಹನು ಉನ್ಮತ್ತನಾದನು. ಕೆಲಸವು ಕೈಮೀರಿ ಹೋಯಿತು. ಯಾರನ್ನೂ ಬದ ಕಿಸುವುದಕ್ಕೂ ಉಪಾಯವಿರಲಿಲ್ಲ. ( ಅಮ್ಮಾ! ಜೈಲಿನಿ! ನೀನು ಎಲ್ಲಿ ಇರುವೆ??? ಎಂದು ಹೇಳಿ ರಾಜಸಿಂಹನು ಜೀವದಾಸೆಯಿಲ್ಲದೆ ಒಳಕ್ಕೆ ಹಾರಿದನು. ಸಿಪಾಯನೊಬ್ಬನು ಅವನನ್ನು ತಡಿಸುವುದಕ್ಕೆ ಹೋದನು. ಅವನು ಕೃತಕೃತ್ಯನಾಗಲಿಲ್ಲ. ಎತ್ತರವಾದ ಮಾಡು ಮಹಾಶಬ್ದದೊಡನೆ ನೆಲವನ್ನು ಚುಂಬಿಸಿಬಿಟ್ಟಿತು. ಆ ಭಯಂಕರ ಧ್ವನಿಯು ಆ ಗಂಭೀರವಾದ ರಾತ್ರಿಯಲ್ಲಿ ಅರಣ್ಯ ಮಧ್ಯದಲ್ಲಿ ಉಂಟಾದ ಗುಡುಗಿನಂತೆ ಕೇಳಿಸಿತು.

ಮುಆಜಮನು ಆರಮನೆಗೆ ಓಡಿದನು. ಬಾದಶಹನು (ಘುನಾಲ್ ಖಾನೆ'ಯಲ್ಲಿ ನಿದ್ದೆ ಹೋಗದೆ, ರಾಜಸಿಂಹನಿಂದ ಸಮಾಚಾರವನ್ನು ನಿರೀಕ್ಷಿಸಿದ್ದನು. ಮುಆಜಮನ ಬಾದಶಹನ ಬಳಿಗೆ ಬಂದು ಘೋರ ಪ್ರಮಾದವಾಯಿತು” ಎಂದನು.

ಅವರಂಗಜೇಬನು 'ಶಿವಾಜಿಯು ತಪ್ಪಿಸಿಕೊಂಡು ಹೋದನೆ?' ಎಂದು ಕಾಂಕ್ಷಿತಸ್ವರದಿಂದ ಕೇಳಿದನು.

ಮುಆಜಮ್:- ರಾಜಸಿಂಹನು ಶಿಬಿರವನ್ನು ಬಿಚ್ಚುವಂತೆ ಆಜ್ಞೆ ಮಾಡಿದನು.

ಬಾದಶಹ:-“ಶಿವಾಜಿಯು ಒಳಗೆ ಇರಲಿಲ್ಲವೇ?'

ಮುಆಜಮ್: - 'ಶಿವಾಜಿಯೂ ಇದ್ದನು. ಅವನೊಡನೆ ಶೈಲಿನಿಯ ಇದ್ದಳು' ಎಂದನು.

ಬಾದಶಹ:-'ರಾಜಸಿಂಹನು ಮಗಳನ್ನು ರಕ್ಷಿಸಲಿಲ್ಲವೇ?

ಮುಅಜಮ್:— ಮಗಳನ್ನು ಲಕ್ಷ್ಮಿ ಸುವುದು ಅಸಾಧ್ಯವಾಗಿದ್ದಿತು. ಮಗಳು ಒಳಗೆ ಇರುವಳೆಂದು ಕೇಳುತ್ತಲೇ ರಾಜಸಿಂಹನು ತಾನೂ ಬಲಿಬಿದ್ದನು'.