ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 62 -

ಅವರಂಗಜೇಬನು ಇದನ್ನು ಕೇಳುತ್ತಲೇ ಶಿಬಿರದ ಕಡೆಗೆ ಹೊರಟನು. ಸೈನಿಕರಿಗೆ ಆಜ್ಞೆ ಮಾಡಿ ಹಾಳು ಕೊಂಪೆಯನ್ನೆಲ್ಲಾ ಬೆಳಗಾಗುವಷ್ಟರಲ್ಲಿ ತೊಡಿಸಿ ತೆಗೆದನು. ನಾಲ್ಕು ಮಂದಿ ರಜಪೂತ ಸೈನಿಕರು ಮರಾಟನ ಶವವನ್ನು ಅವರಂಗಜೇಬನ ಕಾಲಡಿಯಲ್ಲಿ ತಂದಿಟ್ಟರು. ಅವರಂಗಜೇಬನು ಮುಖದಲ್ಲಿ ಸಂತೋಷವನ್ನಾಗಲಿ ದುಃಖವನ್ನಾಗಲಿ ಸ್ಪುಟವಾಡಲಿಲ್ಲ. ಶಿವಾಜಿಯು ಸತ್ತು ತನ್ನ ಪಾದಾಕ್ರಾಂತನಾದನೆಂದು ಮನಸ್ಸಿನಲ್ಲಿ ತಿಳಿದರೂ, ಬಾದಶಹನು ಶಾಂತನಾಗಿದ್ದನು. ಬಳಿಕ ರಾಜಸಿಂಹ ಶೈಲಿನಿಯರ ಶವಗಳು ತೆಗೆಯಲ್ಪಟ್ಟುವು. ಚಂದ್ರಕಾಂತಪುತ್ಥಳಿಯು ಚಂದ್ರಕಿರಣದಲ್ಲಿ ನೆನೆದು ಹೋದಂತೆ, ಶೈಲಿನಿಯ ದೇಹವು ತಣ್ಣಗಾಗಿದ್ದಿತು. ಬಾದಶಹನು ಶೈಲಿನಿಯ ದೇಹವನ್ನು ನೋಡುತ್ತ ನಿಂತನು. ಅವಳ ಹಸ್ತದಲ್ಲಿ ಬಿಗಿ ಹಿಡಿದ ಪತ್ರವೊಂದಿತ್ತು. ಬಾದಶಹನು ಕಾಗದವನ್ನು ಓದಿಸಿದನು. ಕಾಗದವು ಈ ಪರಿಯಾಗಿ ಬರೆದಿತ್ತು:-

ಶೈಲಿನಿ,
ನಿನ್ನನ್ನು ಹೇಗೆ ಸಂಬೋಧಿಸಬೇಕೆಂದು ಇದುವರೆಗೆ ನಿಶ್ಚಯಮಾಡಲಾರದವ ನಾಗಿದ್ದೇನೆ. ಒಂದೆರಡು ಬಾರಿ ನಿನ್ನನ್ನು ಪ್ರಿಯೆ, ಪ್ರಯ' ಎಂದು ಕರೆದಿದ್ದೇನೆ. ಹಾಗೆ ಏಕೆ ಕರೆದೆನೆಂದು ಈಗ ದುಃಖಪಡುತ್ತೇನೆ. ನಾನು ಹತಭಾಗ್ಯನು; ಪಾಪಿಯು. ನನ್ನ ಪಾಪದಿಂದ ನಿನ್ನ ದೇಹವನ್ನು ಪಾಪಮಯವಾಗಿ ಮಾಡಲು ನಾನು ಆಶಿಸು ಯಾವ ಕಾಲದಲ್ಲಿ ನೀನು ನಿನ್ನ ತಂದೆಯೊಡನೆ ಪ್ರತಾಪಗಡಕ್ಕೆ ಬಂದೆಯೋ ಆ ಕಾಲದಲ್ಲಿ ಈ ಪಾಪದ ಬೀಜವು ನನ್ನ ಹೃದಯದಲ್ಲಿ ಉಂಟಾಯಿತು. ಒಂದು ಸಾಯಂಕಾಲ ಪ್ರತಾಪಗಡದ ಉಪವನದಲ್ಲಿ ಏಕಾಕಿಯಾಗಿ ಏನನ್ನೋ ಚಿಂತಿಸುತ್ತ ಕುಳಿತಿದ್ದೆ. ಬಳಿಕ ಚಿಂತನೆಯನ್ನು ಬಿಟ್ಟು ನಿನ್ನ ಪ್ರಾಣೇಶನ ಸ್ಮರಣೆ ಯನ್ನು ಮಾಡತೊಡಗಿದೆ. ನಿನ್ನ ದೀರ್ಘವಾದ ಕೇಶದಾನವು ಬೆನ್ನ ಮೇಲೆ ಗುಂಗುರು ಗುಂಗುರಾಗಿ ಹರಡಿತ್ತು. ಮುಖವು ಕೈ ದಳದ ಮೇಲೆ ಆಶ್ರಯಿಸಿತ್ತು. ಪ್ರಣಯಜನ್ಯವಾದ ಕಣ್ಣೀರುಗಳು ದರದರನೆ ಸುರಿಯುತ್ತಿದ್ದುವು. ಆಗ ನಾನು ಬಳಿಯಲ್ಲಿದ್ದ ನಿಕುಂಜದ ಮರೆಯಲ್ಲಿದ್ದೆನು. ಎರೆಹಿಣಿಯಾದ ವನದೇವತೆಯಂತೆ ಒಪ್ಪುತ್ತಲಿದ್ದ ನನ್ನ ಮೂರ್ತಿಯನ್ನು ನೋಡಿ ನಾನು ಮುಗ್ಧನಾದೆನು, ನಾನು ಯೋಚಿಸಿದ ಕೃತ್ಯವು ಆಕರ್ಯವೆಂದು ನಾನು ಆಗ ತಿಳಿದಿದ್ದರೂ, ನಿನ್ನ ಲಾವಣ್ಯಮಯವಾದ ಶರೀರದ ಕಡೆಯಿಂದ ನನ್ನ ಮನಸ್ಸು ಹಿಂದೆಳೆಯಲಾರದೆ ಹೋದೆನು ನಾನು ಮರೆಯಿಂದ ಹೊರಕ್ಕೆ ಬಂದೆನು, ನೀನು ನನ್ನನ್ನು ನೋಡಿ ಲಜ್ಜಿತಳಾದೆ. ನಾನು