ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 68 -

ಮಾತನಾಡುವಷ್ಟರಲ್ಲ ಕೋಟಿಯ ಘಂಟಾನಾದವಾದುದರಿಂದ, ಒಟ್ಟು ಹೋಗಬೇಕಾಯಿತು, ನೀನು ನನ್ನ ಹೃದಯವನ್ನು ಓದಿದ್ದೆ.

ಶೈಲಿನಿ! ನಿನ್ನೊಡನೆ ಮುಚ್ಚು ಮರಿ ಏಕೆ? ನಿನ್ನ ಪ್ರಣಯ ಸರ್ವಸ್ವವನ್ನು ನನಗೆ ಅರ್ಪಿಸಲಿಕ್ಕೆ ಇದ್ದ ನಿನ್ನೊಡನೆ ಮರೆ ಮೋಸವೇಕೆ? ನನ್ನನ್ನು ಶಿವಾಜಿ ಎಂದು ಭಾವಿಸಿ, ನೀನು ಮೋಸಹೋದೆ. ನಿನ್ನ ಹೃದಯವು ಶಿವಾಜಿ ಮಹಾರಾಜರು ತುರುವಲ್ಲಿ ಅಲ್ಲದೆ ಮತ್ತೆಲ್ಲಿ ಹೋಗುವುದು? ಕಮಲಿನಿಯು, ರಾಜಹಂಸನಿಗೆ ಆಶ್ರಯ ಕೊಡುವುದಲ್ಲದೆ ಕಪ್ಪೆಯನ್ನು ಬಯಸುವುದೇ? ನಾನು ಶಿವಾಜಿರಾಜರ ಸ್ವಾಮಿಭಕ್ತನಾಗಿದ್ದರೂ ಸ್ವಾಮಿದ್ರೋಹಿಯಾದನು. ಮಹಾರಾಜರ ಆಪತ್ತುಗಳಲ್ಲಿ ನಾನು ಅವರಿಗೆ ನೆರವಾಗುವಂತೆ ನನಗೆ ಅವರ ಬಳಿಯಲ್ಲಿ ಆಶ್ರಯ ಕೊಟ್ಟಿದ್ದರು. ನನ್ನ ರೂಪ, ದೇಹ, ಆಕಾಶ, ವರ್ಣ ಎಲ್ಲವು ಶಿವಾಜಿರಾಜರಂತೆಯೇ, ಅವಳಿಜವಳಿ ಕೂಸುಗಳಲ್ಲಾದರೂ ಸ್ವಲ್ಪ ಭೇದ ತೋರಬಹುದು, ನಮ್ಮಲ್ಲಿರಲಿಲ್ಲ. ಏನೊಂದು ಪ್ರಮಾದ ಸಂಭವಿಸುವ ಹಾಗಿದ್ದರೆ, ರಾಜರು ನನ್ನನ್ನು ತಮ್ಮ ಸ್ಥಾನದಲ್ಲಿ ಇಟ್ಟು ಪ್ರಾಣವನ್ನು ಉಳಿಸಿಕೊಳ್ಳುತಿದ್ದರು. ರಾಜರು ಒಂದು ದಿಲೇರಿಖಾನನ ಹಸ್ತಗತವಾಗುವಂತಿದ್ದರು. ಆಗ ರಾಜರ ಬದಲಿಗೆ ನಾನೇ ಬಹಿರಂಗದಲ್ಲಿ ಕಾರ್ಯವನ್ನು ವಿಚಾರಿಸುತ್ತಿದ್ದೆನು. ಯುದ್ದದಲ್ಲಿ ರಾಜರಿಗೆ ಏಟು ತಗಲುವ ಹಾಗಿದ್ದರೆ, ಸೈನ್ಯವು ಹಿಂಜಾರದಂತೆ ನಾನೇ ನಾಯಕನಾಗಬೇಕಾಗುತ್ತಿತ್ತು. ಅಷ್ಟೇಕೆ! ಪ್ರಕೃತದಲ್ಲಿ ಬಾದಶಹರ ಬದಿಯಲ್ಲಿದ್ದ ಶ್ರೀ ಶಿವಾಜಿ ಮಹಾರಾಜರು ತಾವು ತಪ್ಪಿಸಿಕೊಂಡುದು ಬಾದಶಹರಿಗೆ ತಿಳಿಯಲು ಸ್ವಲ್ಪ ವಿಳಂಬವಾಗುವಂತೆ, ನನ್ನನ್ನು ಅವರ ಹಾಸಿಗೆಯ ಮೇಲೆ ಮಲಗಬೇಕೆಂದು ಆಜ್ಞೆ ಮಾಡಿದ್ದರು.

ಶೈಲಿನಿ! ಬ್ರಹ್ಮಹತ್ಯಕಾಗಲಿ ಪತ್ನಿಹತ್ಯಕ್ಕಾಗಲಿ ಪ್ರಾಯಶ್ಚಿತ್ತವು ಉಂಟು. ಸ್ವಾಮಿದ್ರೋಹಕ್ಕೆ ಪ್ರಾಯಶ್ಚಿತ್ತವಿಲ್ಲ, ನಾನು ಶಿವಾಜಿರಾಜರ ಸೇವೆಯಲ್ಲಿ ಸೇರುವಾಗ ವಿವಾಹಮಾಡಿಕೊಳ್ಳುವುದಿಲ್ಲ ಎಂದು ರಾಜಚರಣಗಳನ್ನು ಹಿಡಿದು ಪ್ರಮಾಣ ಮಾಡಿದ್ದೆನು. ಆದಕ್ಕೊಸ್ಕರವೇ ನನ್ನ ಬಡ ತಾಯಿಯನ್ನೂ ತಮ್ಮಂದಿರನ್ನೂ ರಾಜ್ಯದ ವೆಚ್ಚದಿಂದ ಮಹಾರಾಜರು ಪೋಷಿಸುತ್ತಿರುವರು. ನಾನು ಈ ಸ್ಥಿತಿಯಲ್ಲಿ ವಿವಾಹ ಮಾಡಿಕೊಳ್ಳುವುದು ಅನುಚಿತವಾಗಿತ್ತು. ನನ್ನ ವಿವಾಹದಿಂದ ರಾಜ್ಯ ಕಾರ್ಯ ಗಳಿಗೆ ತಡಕು ಉಂಟಾಗುವುದೆಂದು ನನಗೆ ಗೊತ್ತಿತ್ತು. ಅದರೆ ಅಂದು ನಿನ್ನ ರೂಪವನ್ನು ನೋಡಿ ನಾನು ಮರುಳಾದೆನು. ನನ್ನನ್ನು ಶಿವಾಜೆಯೆಂದು ಭ್ರಮಿಸಿ ನೀನೂ ಮರುಳಾದೆ. ನಾನು ಸ್ವಾಮಿದ್ರೋಹವನ್ನು ಮಾಡಿದುದು ಅಲ್ಲದೆ ನನ್ನ ಕಪಟವೇಶದಿಂದ ನಿನ್ನ ಹೃದಯವನ್ನೂ ಸೂರೆಗೊಳ್ಳಲಿಕ್ಕೆ ಇದ್ದೆನು. ನನ್ನ ಕಪಟಾಚರಣೆಯು ಮಹಾರಾಜರಿಗೆ ಪ್ರಕೃತದಲ್ಲಿ ತಿಳಿದಿತ್ತೋ ಇಲ್ಲವೊ