________________
108 ಓ ಪ್ರಧಿ ಶಾಸ್ತ್ರ ) [VIII 3000 ದದ ಚೀಲದಲ್ಲಿ ಎರಡು ಪದರಗಳಿರುವುವು. ಬಲಿತಮೇಲೆ ಇವೆರಡೂ ಕಲಿತು ಒಂದಾಗಿ ಬಿಡುವುದು. ಅದರಿಂದಲೇ ಮಕರಂದದ ಚೀಲದಲ್ಲಿ, ಒಂದೇ ಪದರ ಕಾಣುವುದು. ಸಾಧಾರಣವಾಗಿ ಹೂವರಳಿಯ ಕುಟುಂಬದ ಹೂಗಳ ಕೆಸರ ಗಳಲ್ಲಿ ಹೊರತು,ಬೇರೆ ಕೇಸರಗಳ ಮಕರಂದದ ಚೀಲಗಳು ಎರಡೇ ಉಂ ಟಾಗಿ ಬೆಳೆಯುವುದು ವಾಡಿಕೆ. ಈ ಒಂದೊಂದು ಚೀಲದಲ್ಲಿಯ ಎರಡು ಪದರಗಳಿರುವುವು, ಕಾಯಿ ಮೊಗ್ಗುಗಳ ಮಕರಂದದ ಚೀಲಗಳಲ್ಲಿ ಈ ನಾ ಲ್ಕು ಪದರಗಳ ಚೆನ್ನಾಗಿ ಕಾಣುವುವು. ಬಲಿತ ಮೇಲೆ ಎರಡು ಪದರಗಳ ಒಂದಾಗಿ ಬಿಡುವುವು. ಈ ವಿಷಯವೆಲ್ಲ 94 ನೆಯ ಪಟವನ್ನು ನೋಡಿದರೆ ತಿಳಿಯುವುದು. ಮಕರಂದದ ಚೀಲಗಳು ಕೇಸರದ ಕಾವಿನ ತುದಿಯಲ್ಲಿಯೇ ಸೇರಿಕೊಂಡಿರುವುವು. ಕೆಲವು ಕೇಸರಗಳಲ್ಲಿ, ಈ ಕಾವುಗಳು ಮಕರಂಧಚಿ “ಲಗಳಿಗಿಂತಲೂ ಮೇಲಕ್ಕೆ ನೀಡಿಕೊಂಡಿರುವುದೂ ಉಂಟು. (ಪಟ. 97.) ಪಟ 93.- 1 ಮಕರಂದ ರೇಣುಗಳು ಬಹಳ ದೊಡ್ಡದಾಗಿ ಕಾಣಿ ಸಲ್ಪಟ್ಟಿರುವುವು. (ರೇಣುಗಳ ಮೇಲೆ ತುಂಬಿರುವ ಸಣ್ಣ ಮುಳುಗಳನ್ನು ನೋಡಿರಿ. 2, ರೇಣುವಿನ ಒಳಗಿರುವ ಜೀವಾಣುವನ್ನು ತೋರಿಸುವುದು,