ಪುಟ:ಓಷದಿ ಶಾಸ್ತ್ರ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಪುಸ್ಮರೇಣು ಸ್ಪರ್ಶವೂ, ಗರ್ಭಧಾರಣವೂ, 19: ಉಮ್ಮತ, ಬೆಂಡೆ, ಹೂವರಳಿ, ಅಗಸೆ ಇವುಗಳಿ,ಒಂದೊಂದು ನಕ ರಂದ ಚೀಲದಲ್ಲಿಯೂ, ಎರಡು ಪದರಗಳ ಸೇರಿ ಒಂದಾದಮೇಲೆ, ಉದ್ದ ಕ್ಕೂ ಒಂದು ಸೀಳುಂಟಾಗಿ, ಅದರ ಮೂಲಕ, ಮಕರಂದರೇಣುವು ಹೊ ರಕ್ಕೆ ಬರುವುದು. ಬದನೆ, ಆವರಿಕೆ, ಇವುಗಳಲ್ಲಿಯದರೋ, ಚೀಲಗಳ ತುದಿಯಲ್ಲಿರುವ ದ್ವಾರದಿಂದ, ಮಕರಂದ ರೇಣುವು ಹೊರಕ್ಕೆ ಬರುವುದು ಸ್ವಾಭಾವಿಕವು. ಇನ್ನೂ ಕೆಲವು ಮಕರಂದ ಚೀಲಗಳಲ್ಲಿ, ಚಿಕ್ಕ ಮುಚ್ಚಳಗಳ ಮೇಲೆ ಏಳುವುದರಿಂದ ಉಂಟಾಗುವ ಬಾಗಿಲಿನಿಂದ, ಹೊರಗೆ ರೇಣುಗಳು ಬರುವು ದೂ ಉಂಟು. ಈ ಏರ್ಪಾಡುಗಳೆಲ್ಲವೂ, 94 ಮೊದಲು, 98 ನೆಯ ಪಟಗಳ ಪಟ 94.ಉಮ್ಮತದ ಕೇಸರಗಳು, 1, ಮುಂಭಾಗ 2, ಪಾರ್ಶ್ವಭಾಗ, (ಮಕರಂದದ ಧೂಳು ಹೊರಬೀಳು: ನ ಸೀಳನ್ನು ಕಾಣಿಸಿರುವುದು) 3. ಹಿಂಭಾಗ, 4 ಮಕರಂದದ ಚೀಲವನ್ನು ಕತ್ತರಿಸಿ ತೋರಿಸಿದ ಭಾಗ. (ಇದರಲ್ಲಿ ನಾಲ್ಕು ಪದರಗಳಿರುವುದನ್ನು ನೋಡಿ ರಿ. ಪದರಗಳಲ್ಲಿ ಆ ಮಕರಂದದ ಧೂಳುಗಳು ಕಾಣುವುವು.) 5. ಬಹಳ ದೊಡ್ಡದಾಗಿ ಕಾಣಿಸಿರುವ ಮಕರಂದದ ಒಂದು ರೇಣು.