________________
ಅಧ್ಯಾ. ಪುಸ್ಮರೇಣು ಸ್ಪರ್ಶವೂ, ಗರ್ಭಧಾರಣವೂ. - 115 ಮಿಥುನಪುಪ್ಪಗಳಲ್ಲಿ, ಕೇಸರಗಳ ಅಂಡಕೋಶವೂ ಒಂದೇ ಹೂವಿನಲ್ಲಿ ರುವುದರಿಂದ, ಕೀಲಾರದಲ್ಲಿ ಮಕರಂದರೇಣುಗಳು ತಾವಾಗಿಯೇ ಬಿಳಬ ಹುದು, ಏಕ ಲಿಂಗ ಸಸ್ಯಗಳಲ್ಲಿಯ, ದ್ವಿಲಿಂಗ ಸಸ್ಯಗಳಲ್ಲಿಯೂ, ಹೂ ಗಳು, ಗಂಡು, ಹೆಣ್ಣು, ಎಂದು ಪತ್ಯೇಕ ಭಾಗವುಳ್ಳವುಗಳಾಗಿರುವುದರಿಂದ, ಮಕರಂದ ರೇಣುಗಳು ಕೀಲಾಗುವನ್ನು ಹೊಂದುವುದಕ್ಕೆ ಸಾಧನಗಳೇನಾದ ರೂ ಇದ್ದೇ ತೀರಬೇಕು, ಸ್ವಾಭಾವಿಕವಾಗಿಯೇ ಮಕರಂದರೇಣುವು ಗಾಳಿ ಬೀಸುವುದರಿಂದ ಹಾರಿ, ಕೀಲಾಗದಲ್ಲಿ ಬಿಳುವ ಸಂಭವವೂ ಉಂಟು. ತಾಳೆ, ಹುಲ್ಲು, ಈವರ್ಗಕ್ಕೆ ಸೇರಿದ ಹಲವು ಗಿಡಗಳು ಇದಕ್ಕೆ ಉದಾಹರಣವೆಂದು ಹೇಳಬಹುದು. ಗಾಳಿಬೀಸುವುದರಿಂದ, ಮಕರಂದ ಸ್ಪರ್ಶವುಂಟಾಗಿ, ಗರ್ಭಾ ಧಾನವನ್ನು ಹೊಂದುವ ಪುಸ್ಮಗಳು ಕಾಂತಿಯಿಲ್ಲದೆಯ, ವಾಸನೆಯಿಲ್ಲದೆ ಯ, ಬಣ್ಣವಿಲ್ಲದೆಯ ಆಕಾರದಲ್ಲಿ ಚಿಕ್ಕದಾಗಿಯೂ ಇರುವುವು. ಮಕ ರಂದದಧೂಳು ಮಟ್ಟಿಗೆ ವಿಶೇಷವಾಗಿ ಉಂಟಾಗುವುವು. ಏಕೆಂದರೆ? ಮಕ ರಂದ ರೇಣುವು ಸ್ವಲ್ಪವಾಗಿದ್ದರೆ, ಗಾಳಿಯಬಡಿತದಿಂದ ಚೆದರುವಾಗ ಕೀಲಾ ಗುಗಳನ್ನು ಹೊಂದದೆಯೇ ಹೋಗಬಹುದು. ಹಾಗಿಲ್ಲದೆ ವಿಶೇಷವಾಗಿದ್ದರೆ, ಅಡಿಗಡಿಗೆ ಗಾಳಿಯು ಬೀಸಿಹೊಡೆದು, ಅದರಿಂದ ಮಕರಂದರೇಣುವನ್ನು ಎಬ್ಬಿ ಸಿ ಚೆದರಿಸುವುದು. ಇದರಿಂದ ಮಕರಂದಧೂಳಿಗಳಲ್ಲಿ ಕೆಲವಾದರೂ ಕೀಲಾಗವನ್ನು ಸೇರಬಹುದಲ್ಲವೆ ? ಇಂಥವುಗಳಲ್ಲಿ ಮಕರಂದಧೂಳಿಯ ಬಹಳ ಹಗುರವಾಗಿರುವುದು, ತಾಳೆಯ ಹೂಗಳಿಂದ, ಕೆಳಕ್ಕೆ ಉದಿರುವ ಬಿಳಿಹು. ಡಿಯು ಮಕರಂದರೇಣುವೇ, ಬೇರೆ ಕೆಲವು ಗಿಡಗಳ ಹೂಗಳು ಗರ್ಭವನ್ನು ಧರಿಸಬೇಕಾದರೆ, ಜೇನುಹುಳ, ದುಂಬಿ, ಚಿಟ್ಟೆ ಹುಳ, ಮುಂತಾದುವು ಮಕರಂದ ಧೂಳಿಯನ್ನು ಕೀಲಾಗದಲ್ಲಿ ಸವರುವುದರಿಂದ ಗರ್ಭ ವುಂಟಾಗುವುದು. ಈ ಬಗೆಯ ಗಿಡಗಳ ಹೂಗಳು ಬಹಳ ಪಕಾಶವಾಗಿ ವಾಸನೆಯುಳ್ಳುದಾಗಿಯೂ ಇರುವುವು.