ಪುಟ:ಓಷದಿ ಶಾಸ್ತ್ರ.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

126 ಓಷಧಿ ಶಾಸ್ತ್ರ (IX ನೆಯ ಮಿಶ ಫಲಗಳು. ಕಾಯಿಗಳಲ್ಲಿ ಉಂಟಾಗುವ ಸಕಲವಿಧವಾದ ಬದಲಾವಣೆ ಗಳ, ಬೀಜಗಳು ಪಕ್ಷವಾಗಿ ಹೊರಬೀಳುವವರೆಗೂ ಅವುಗಳನ್ನು ಕಾಪಾ. ಡುತ್ತಿದ್ದು, ಆಮೇಲೆ ಈ ಬೀಜಗಳು ಚೆದರುವುದಕ್ಕೆ ಸಹಾಯಕವಾ ಗಿ ಏರ್ಪಟ್ಟ ಸಾಧನಗಳೆಂದೇ ಹೇಳಬೇಕಾಗಿದೆ. ಕೆಲವು ಸಾಮಾನ್ಯ ಫಲ. ಗಳಲ್ಲಿ ಬೀಜಕೋಶವು ತೆಳುವಾಗಿಯ, ತಿರುಳನ್ನು ಹೊಂದಿಯ, ಬೇರೆ ಕೆಲವುಗಳಲ್ಲಿ ಒಣಗಿಯೂ ಇರುವುವು. M ಪಟ 107.ಮಾವಿನಕಾಯಿ. (ಒಳ ವಾಟೆಯುಳ್ಳ ತಿರುಳುಗಾಯಿ.) 1, ಕಾಯಿ, 2. ಉದ್ದಕ್ಕೆ ಸೀಳಿದ ಕಾಯಿಯ ಹೋಳು. 3. ನಾಟಿಯ ಹೋಳುಗಳು, (ಒಂದು ಹೋಳಿನಲ್ಲಿ ಬೀಜವು ಸೇರಿರುವುದು.) ಬದನೆ, ಮಾವು, ಸುರಹೊನ್ನೆ, ದ್ರಾಕ್ಷಿ, ಬಾಳೆ ಇವುಗಳಲ್ಲಿ ಬೀಜ ಕೋಶವು ತಿರುಳುಳ್ಳುದು, ಆದರೆ ಬದನೆ, ದ್ರಾಕ್ಷಿ, ಇವುಗಳಲ್ಲಿ ಬೀಜ ಕೋಶವು ಮೊತ್ತಕ ಮೃದುವಾಗಿ ತಿರುಳುಳ್ಳದಾಗಿಯೇ ಇರುವುದು.