ವಿಷಯಕ್ಕೆ ಹೋಗು

ಪುಟ:ಓಷದಿ ಶಾಸ್ತ್ರ.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. ಬೀಜಗಳು ಮೊಳೆತು ಬೆಳೆಯುವ ಕುಮು. 157 ಗಿಡಗಳು ಬೆಳೆಯುವುದಕ್ಕೆ ಬೇಕಾದ ಆಹಾರ ಪದಾರ್ಥಗಳು ಅಂಕುರದಳ ಗಳಲ್ಲಿ ಸಂಗ್ರಹಿಸಲ್ಪಟ್ಟಿರು ವುದರಿಂದ, ಮೊಳೆಯು ಬಹುವೇಗವಾಗಿ ಬೆಳೆದು ಹಸುರೆಲೆಗಳನ್ನುಂಟುಮಾಡುವುವು. ಎಲೆಗಳುಂಟಾಗಿ ಅವು ಬೆಳೆದಷ್ಟೂ ಅಂ ಕುರದಳಗಳು ಸುರುಗಿ ಕೊಳ್ಳುತ್ತಾ ಬರುವುವು. ಎಲೆಗಳುಂಟಾದ ಕೂಡಲೆ ಅವುಗಳೇ ಆಹಾರ ಪದಾರ್ಥಗಳನ್ನು ಒದಗಿಸಿಕೊಳ್ಳುವುವು. ಆದುದರಿಂದ ಮೊಳೆಗಳಿಗೆ ಆಹಾರ ಪದಾರ್ಥಗಳು ಬೇಕಾದುದು ಎಲೆಗಳು ಹೊರಟು ಬರುವವರೆಗೆ ಮಾತ್ರವೇ ಪಾರಿವಾಳದ ಸಸಿಯಲ್ಲಿ ಅಂಕುರ ದಳಗಳಾದಮೇಲೆ ಉಂಟಾಗುವ ಮೊದಲನೇ ಎಲೆಗಳ ಜತೆಯು, ಸಾಮಾನ್ಯವಾದ ಇತರ ಎಲೆಗಳಿಗಿಂತ ವ್ಯತ್ಯಾ ಸವುಳ್ಳವು ಗಳಾಗಿರುವುವು. ಮೊದಲು ಉಂಟಾಗತಕ್ಕ ಎಲೆಗಳ ಜತೆಯು ಸಾಮಾನ್ಯವಾದ ಸತುವಾಗಿರುವುದು. ಇದಕ್ಕೆ ಮೇಲೆ ಆಗತಕ್ಕ ಎಲಿಗಳ ಸತುವು ಮರಾಗಿಭಾಗಿಸಲ್ಪಟ್ಟು, ಭಿನ್ನ ಪತಿಗಳಾಗಿರುವುವು. ಭಿನ್ನ ಪತ)ಗಳುಳ್ಳ ಎಲೆಗಳುಂಟಾಗ ತಕ್ಕ ಕೆಲವು ಗಿಡಗಳ ಮೊಳೆಗಳಲ್ಲಿ, ಮೊದಲುಂಟಾಗತಕ್ಕ ಎಲೆಗಳು ಆಮೇಲೆ ಉಂಟಾಗತಕ್ಕವುಗಳಂತಿರದೆ ಬೇರೆಯಾಗಿರುವುದುಂಟು. ಹೀಗೆ ವ್ಯತ್ಯಾಸವಿಲ್ಲದೆ ಎಲ್ಲಾ ಎಲೆಗಳ ಒಂದೇ ವಿಧವಾಗಿ ಕೆಲವು ಗಿಡಗಳ ರುವುದನ್ನೂ ನೋಡಬಹುದು. ಇದಕ್ಕೆ ಉದಾಹರಣವಾಗಿ ಹುಣಿಸೇಸಸಿ ಯನ್ನು ಹೇಳಬಹುದು. ಹುಣಿಸೇ ಬೀಜದ ಅಂಕುರದಳಗಳಲ್ಲಿ ಮೊದಲು ಟಾಗುವ ಎಲೆಗಳ ಜೋಡಿಯ, ಆಮೇಲೆ ಉಂಟಾಗತಕ್ಕವೂ ಒಂದೇ ಬಗೆ ಯಾಗಿರುವುವು, ಸಾಯಿಕವಾಗಿ ಸಾಮಾನ್ಯ ಮತಗಳುಳ್ಳ ಗಿಡಗಳ ಸಸಿಯಲ್ಲಿ ಈ ವಿಧವಾದ ವ್ಯತ್ಯಾಸಗಳಿರವು.