ವಿಷಯಕ್ಕೆ ಹೋಗು

ಪುಟ:ಓಷದಿ ಶಾಸ್ತ್ರ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಓಷಧಿ ಶಾ ಸ್ತ. --04:9 ೧ ನೆಯ ಅಧ್ಯಾಯ. ಜೀವವುಳ್ಳವುಗಳ ಗುಣವೂ ಲಕ್ಷಣವೂ. ಈ ಪ್ರಪಂಚದಲ್ಲಿ ಕಾಣುವ ಪದಾರ್ಥಗಳನ್ನೆಲ್ಲ, ದೇವವುಳ್ಳವುಗಳೆ೦ ದೂ, ಜೀವವಿಲ್ಲದುವುಗಳೆಂದೂ, ಎರಡುಬಗೆಯಾಗಿ ವಿಂಗಡಿಸುವ ರೂಢಿ ಯುಂಟು. ಇವು ದೇವವುಳ್ಳವುಗಳು, ಇವು ದೇವವಿಲ್ಲದವುಗಳು ಎಂಬ ಭೇದವು, ಎಲ್ಲರಿಗೂ ಸುಲಭವಾಗಿ ತಿಳಿಯ ಬಹುದಾಗಿದ್ದರೂ, ಅವೆರಡಕ ಇರುವ ಲಕ್ಷಣಗಳ ವ್ಯತ್ಯಾಸವು ಯಾವುದೆಂಬುದನ್ನು ತಿಳಿದು ಕೊಳ್ಳುವುದು ಸ್ವಲ್ಪ ಕಷ್ಮವಾದುದರಿಂದ, ಅದನ್ನು ಕುರಿತು ಸ್ವಲ್ಪ ವಿಚಾರಿಸಬೇಕಾಗಿದೆ. ನೋಣ, ಇರುವೆ, ನಾಯಿ, ಆಕಳು ಇವುಗಳನ್ನೆಲ್ಲ, ದೇವವುಳ್ಳ ವು ಗಳೆಂದು ಎಣಿಸಿರುವೆವು. ಇಲ್ಲಿಗಲ್ಲಿಗೆ ಸಂಚಾರ ಮಾಡುವುದರಿಂದ ಇವು ದೇವವುಳ್ಳವುಗಳೆಂದು ಹೇಳುವೆವು. ಅನೇಕ ಪ್ರಾಣಿಗಳು ಹಿಂದುಸ್ಥಳದಿಂದ ಮತ್ತೊಂದುಸ್ಥಳಕ್ಕೆ ಹೋಗತಕ್ಕ ಶಕ್ತಿಯುಳ್ಳವುಗಳಾಗಿಯೇ ಇದ್ದರೂ, ದೇವವುಳ್ಳವುಗಳೆಂದು ಹೇಳುವುದಕ್ಕೆ ಈ ಸಂಚಾರ ಶಕ್ತಿಯನ್ನೇ ಮುಖ್ಯ ಕಾರಣವನ್ನಾಗಿ ಎಣಿಸುವುದು ಸರಿಯಲ್ಲ. ಏಕೆಂದರೆ; ಒಂದೇ ಸ್ಥಳದಲ್ಲಿದ್ದು ಕೊ೦ಡು ಜೀವಿಸುವ ಹಲವು ಪ್ರಾಣಿಗಳ ಉಂಟು, ಹವಳವನ್ನುಂಟು ಮಾಡ ತಕ್ಕ ಸಂತು ಮುಂತಾದುವುಗಳನ್ನು ಇದಕ್ಕೆ ನಿದರ್ಶನವಾಗಿ ಹೇಳಬಹುದು,