ಪುಟ:ಓಷದಿ ಶಾಸ್ತ್ರ.djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಬೀಜಗಳು ಮೊಳೆತು ಬೆಳೆಯುವ ಕುಮ, 163 ದನದಲ್ಲಿರುವ ಆಹಾರ ಪದಾರ್ಥಗಳು ಬೆಳೆಯುತ್ತಿರುವ ಅಂಕುರದಳ ದ. ಮಾರ್ಗವಾಗಿ, ಮೊಳೆಗೆ ಹೋಗಿಸೇರುವುದು, ಏಕಾಂಕುರದಳ ಬೀಜಗಳು ಹೆಚ್ಚು ಕಡಿಮೆಯಾಗಿ ಈಚಲು ಬೀಜದಂ ತೆಯೇ ಮೊಳೆಯುವುವು. ಅಂಕುರಚ್ಛದನವು ಏಕಾಂಕುರ ದಳ ಬೀಜಗಳ ಲೈಲ್ ಇರುವುದರಿಂದ, ಅಂಕುರದಳವು ಬೀಜದಲ್ಲಿ ನಿಂತಿರುವುದು. ಬೀಜ ವೂ ದಾರಿಗಾಣದೆ ಭೂಮಿಯೊಳಗೆಯೇ ನಿಂತುಬಿಡುವುದು. ಬೀಜಗಳಲ್ಲಿ ಆಹಾರ ಪದಾರ್ಥಗಳು ಅಂಕುರದಳಗಳಲ್ಲಿಯ ಅಂಕು ರಚ್ಛದನದಲ್ಲಿ ಸೇರಿರುವುವು. ಈ ಪದಾರ್ಥಗಳು ನೀರಿನಲ್ಲಿ ಕರಗದ ಹಿಟ್ಟಿನ ರೇಣುಗಳಾಗಿಯಾಗಲಿ, ಅಥವಾ ಅದರಂತಿರುವ ಬೇರೆ ಪದಾರ್ಥಗಳಾಗಿ ಯಾಗಿಯಾಗಲಿ, ಇರುವುವು. ಬೀಜಗಳು ಮೊಳೆಯುವುದಕ್ಕೆ ನೀರು, ಪ್ರಾಣ ವಾಯು, ಸ್ವಲ್ಪ ಉಪ್ಪ, ಮುಂತಾದವು ಅವಶ್ಯಕವು. ಕೆಲವುಗಳಲ್ಲಿ ಬೀಜಗಳಿಗೆ ನೀರು ಸುಲಭವಾಗಿ ಸೇರುವುದಕ್ಕಾಗಿ ಕೆಲವು ಸಾಧನಗಳು ಏರ್ಪಡಿಸಲ್ಪಟ್ಟರು ವುವು. ಪಾರಿವಾಳದ ಬೀಜದಲ್ಲಿರುವ ಗೆರೆಯು ಈ ವಿಧವಾದ ಸಾಧನವೇ, ಬೀ ಜಕ್ಕು ಕೂಡ, ಅದರ ಬಾಯಿರುವ ಕಡೆಯಲ್ಲಿ ಮೃದುವಾಗಿಯ, ಇತರಕಡೆ ಗಳಲ್ಲಿ ಕಠಿನವಾಗಿಯೂ ಇರುವುದು. ಮತ್ತು ಆ ಬಾಯಿಯಲ್ಲಿ ಸೇರಿರುವ ಬಿಳಿ ಪದಾರ್ಥವೂ ನೀರನ್ನು ಹೀರಿಕೊಳ್ಳುವ ಶಕ್ತಿಯನ್ನು ಸ್ವಲ್ಪ ಮಟ್ಟಿಗೆ ಹೊ೦ ದಿರುವುದು, ನೀರಿನಲ್ಲಿ ಕರಗದಹಾಗೆ ಅಂಟಪದಾರ್ಥದಿಂದ ಅದರ ಬಾಯನು ಮರೆಯಿಸಿಟ್ಟರೆ, ಬೀಜದಲ್ಲಿ ಬಹುದಿವಸಗಳವರೆಗೆ ನೀರು ಒಳಕ್ಕೆ ಸೇರದು. ಬೀಜಗಳು ಮೊಳೆಯಲಾರಂಭಿಸಿದ ಕಾಡಲೆ, ಬೀಜದೊಳಗಣ ಜೀವಾಣುವು ಈ ಆಹಾರ ಪದಾರ್ಥಗಳನ್ನು ಕರಗುವ ವಸ್ತುಗಳಾಗಿ ಮಾರ್ಪ ಡಿಸುವದು. ಹೀಗೆ ಮಾರ್ಪಟ್ಟ ವಸ್ತುಗಳನ್ನು ಮೊಳೆಯು ತನ್ನ ಬೆಳೆವ ಕೆಗೆ ಉಪಯೋಗ ಪಡಿಸಿಕೊಳ್ಳುವುದು. ನಾವು ತಿನ್ನುವ ಧಾನ್ಯಗಳಲ್ಲಿ