ವಿಷಯಕ್ಕೆ ಹೋಗು

ಪುಟ:ಓಷದಿ ಶಾಸ್ತ್ರ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

164 ಓಷಧಿ ಶಾಸ್ತ್ರ ) [XI ನೆಯ ಯ, ಬೇಳೆ ಮುಂತಾದುವುಗಳಲ್ಲಿಯೂ ಈ ಹಿಟ್ಟಿನ ರೇಣುಗಳು ತುಂಬಿರು ವುವು. ಮೊಳೆಯು ಮೊಳೆಯುವಾಗ ಈ ಪದಾರ್ಥವು ಅದಕ್ಕೆ ಆಹಾರವಾ ಗುವುದಕ್ಕಾಗಿ ಸಂಗ್ರಹಿಸಲ್ಪಟ್ಟಿರುವುದು. ಗೆಡ್ಡೆ ಗೆಣಸುಗಳಲ್ಲಿಯೂ ಕೂಡ ವಿಶೇಷವಾಗಿ ಹಿಟ್ಟನರೇಣುಗಳು ತುಂಬಿರುವುವು. ಗೆಣಸುಗಳನ್ನು ಕತ್ತರಿಸಿ ಪುಡಿಮಾಡಿ ನೀರಿನಲ್ಲಿ ಕರಗಿಸಿದರೆ ಅದರ ಬಿಳುಪಾದ ಹಿಟ್ಟಿನ ಪುಡಿಯು ನೀರಿನ ಕೆಳಭಾಗದಲ್ಲಿ ಹರಡಿ ಬಿದ್ದಿರುವು ದು, ಆರರೊಟ್ಟಿನ ಹಿಟ್ಟು, ಆ ಗೆಣಸುಗಳಿಂದ ತೆಗೆದ ಹಿಟ್ಟಿನಿಂದ ಕೂಡಿದ ಪದಾರ್ಥವೇ ಆಗಿರುವುದು. ಈ ಹಿಟ್ಟಿನ ರೇಣುಗಳು ಉಂಟಾಗತಕ್ಕ ರೀತಿ ಯನ್ನೂ, ಅವುಗಳ ಸ್ವಭಾವವನ್ನೂ , ಮುಂದೆ 14 ನೆಯ ಅಧ್ಯಾಯದಲ್ಲಿ ವಿವರಿಸಿ ಹೇಳುವೆವು. ೧೧ ನೆಯ ಅಧ್ಯಾಯ ಗಿಡಗಳ ಜಾತಿಯನ್ನು ವಿಭಾಗಿಸುವ ಕ್ರಮ, ಪ್ರಪಂಚದಲ್ಲಿರುವ ಓಷಧಿಗಳು ಎರಡು ಬಗೆಯಾಗಿರುವುವು. ಅವು ಪುಸತಕ ಓಪಧಿಗಳೆಂದೂ, ಪುಪ್ಪಿಸದೇ ಇರತಕ್ಕವುಗಳೆಂದ ಎರಡುಬಗೆ, ಇದುವರೆಗೆ ನಾವು ಪರಿಶೋಧಿಸಿದ ಓಷಧಿಗಳೆಲ್ಲವೂ ಪುಪ್ಪಿತ ಮಗಳೇ, ಅಣಬೆ, ಪಾಚಿ, ಎಂದು ಕರೆಯಲ್ಪಡುವ ಗಿಡಗಳೆಲ್ಲಾ ಬಿಡತಕ್ಕವುಗಳಲ್ಲ. ಇದುವರೆಗೆ ನಾವು ಪುಪ್ಪಿಸುವ ಗಿಡಗಳನ್ನೇ ಪರಿಕೋ ಧಿಸುತ್ತಾ ಬಂದುದರಿಂದ, ಇವುಗಳನ್ನು ಕುಟುಂಬಗಳಾಗಿಯ, ಜಾತಿಗಳಾ ಯ, ಕೂಟಗಳಾಗಿ ವಿಭಾಗಿಸುವ ಕರುವನ್ನು ತಿಳಿದುಕೊಳ್ಳಲು ತುತ್ನಿ ಸೋಣ,