________________
178 ಓಷಧಿ ಶಾಸ್ತ್ರ ) [XI ನೆಯ ಹೈಬಿಸ್ಕಸ್ (Hibiscus) ಜಾತಿಯಲ್ಲಿ ಸೇರಿದ ಕೆಲವು ಕಟಗ ವಿರುವ ಗುಣಗಳ ವಿವರ : - 1, ಹೈಬಿಸ್ಕಸ್ ಮೈಕಾಂಥಸ್ (HibiscuLS Inicianthus):ಈ ಕೂಟದ ಗಿಡಗಳಲ್ಲಿ ಹೂಗಳು ಚಿಕ್ಕವು. ಕಾವು ಉದ್ದವಾಗಿರು ವುದು. ಎಂಟು ಸಣ್ಣ ವೃಂತ ಪುಚ್ಛಗಳಿರುವುವು. ದಳಗಳು ಬಿಳಿ ಬಣ್ಣ ವುಳ್ಳವು. ಕಾಯಿಯು ಸಣ್ಣನಾಗಿಯ ಉಂಡೆಯಾಗಿ ಇರುವುದು. ಬೀಜಗಳಲ್ಲಿ ರೋಮಗಳಿರುವುವು. 2. ಹೈಬಿಸ್ಕಸ್ ವಿಟಿಪೋಲಿಯಸ್ (HibiscuLS vitifolius):ಈ ಗಿಡವನ್ನೂ ಬಹುಮೃದುವಾದ ರೋಮವುಳುದು. ಹೂಗಳು ದೊಡ್ಡ ವಾಗಿರುವುವು. ಇವು ಗಿಡಗಳೊಳಗೆಲ್ಲ ಹಳದಿಯ ಬಣ್ಣದ ಮಣಿಗಳಂತೆ ಜೋಲುತ್ತಿರುವುವು. ಕಾವು ಬಗ್ಗಿರುವುದರಿಂದ ಹೂಗಳು ತೂಗಾಡುತ್ತಿರು ವುವು. ವೃಂತಪುಚ್ಛಗಳು ಆರು ಮೊದಲು ಹತ್ತರವರೆಗೆ ಇರುವುವು. ದಳ ಗಳು ಗಂಧಕದ ಬಣ್ಣವುಳ್ಳವು. - 3, ಹೈಬಿಸ್ಕಸ್ ಕೆನಾಬಿನಸ್, (Hibiscus cannabinus):ಗಿಡಗಳ ಎಲ್ಲಾ ಭಾಗಗಳಲ್ಲಿಯ ಕೂದಲುಗಳಿರುವುವು. ಹೂಗಳು ದೊಡ್ಡವು. ಕಾವು ಚಿಕ್ಕದು. ಏಳು ಮೊದಲು ಹತ್ತರವರೆಗೆ ವೃಂತ ಪುಚ್ಛಗಳಿರುವುವು. ಪುಷ್ಕಕೋಶದಲ್ಲಿ ಒಂದೊಂದು ಹಲ್ಲುಗಳ ತುದಿಯ ಯ, ಒಂದೊಂದು ಗುಂಡಿನ ಹಾಗೆ ಉಂಡೆ ಗಳಿರುವುವು. ದಳಗಳು ಹಳ ದಿಯ ಬಣ್ಣವುಳ್ಳವು. ಕಾಯಿಗಳು ಉಂಡೆಯಾಗಿ ಮುಳ್ಳುಗಳನ್ನು ಹೋಂ ದಿರುವುವು. 4. ಬೆಂಡೆ:-ಹೈಬಿಸ್ಕಸ್ ಎನ್ನುತಿಂಥಸ್ (Hibiscus esculentus):-ಹೂಗಳು ದೊಡ್ಡವು. ವೃಂತವು ಚಿಕ್ಕದು. ಎಂಟು ಮೊದಲು ಹತ್ರ ರವರೆಗೆ ವೃಂತ ಪುಚ್ಛಗಳಿರುವುವು. ಪುಷ್ಕಕೋಶವು ಗೂಡಿನ ಹಾಗಿದ್ದು