ಪುಟ:ಓಷದಿ ಶಾಸ್ತ್ರ.djvu/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ: ಪುಷ್ಟಿಸುವ ಗಿಡಗಳ ಕುಟುಂಬಗಳ ವಿಭಾಗ, 187 ನೀರು ಹೆಚ್ಚಾಗಿದ್ದರೂ, ಕಡಿಮೆ ಯಾಗಿದ್ದರೂ, ಎಲೆಯು ನೀರು ಮಟ್ಟದಲ್ಲಿಯೇ ಇರುವುದು. ನೀರು ಕಡಿಮೆಯಾದ ಹಾಗೆ, ಕಾವು ಬಾಗಿ ರುವುದು. ನೀರು ಏರಿದಾಗ, ಕಾವು ನೇರವಾಗಿ ಉದ್ದ ವಾಗುವುದು, ಆದುದರಿಂದ ಎಲಿಯು ಯಾವಾಗಲೂ ತೇಲುತ್ತಲೇ ಇರುವುದು. ನೈದಿಲೆಯ ಹೂಗಳು ಉದ್ದವಾದ ಕಾವುಗಳುಳ್ಳು ವು. ಚಿಕ್ಕ ಮೊಗ್ಗಾಗಿರುವಾಗ ನೀರಿನಲ್ಲಿ ಮುಳುಗಿರುವುವು. ಹೂಗಳು ಹೊರಡುವ ತರುಣದಲ್ಲಿ ವೃಂತವು ಉದ್ದವಾಗುವುದು. ಹೂವೂ ನೀರಿಗೆ ಮೇಲಾಗಿ ಕಾಣುವುದು, ಈ ಹೂಗ ಳಲ್ಲಿ ಹೊರದಳಗಳು ನಾಲ್ಲೂ, ದಳಗಳು ಬಹಳವಾಗಿಯೂ ಇರುವುವು. ದಳಗಳಂತೆ ಕೇಸರಗಳ ಅಸಂಖ್ಯ ವಾಗಿರುವುವು - ಅಂಡಕೋಶವು ಉಚ್ಯವಾಗಿ ಹಲವು ಗೂಡುಗಳನ್ನು ಹೊಂದಿರುವುವು. ಇದರ ಬೀಜಕ್ಕೆ ಪುಚ್ಛಗಳ ಅಂಕುರಚ್ಛದನವೂ ಉಂಟು. ಬೀಜಪುಚ್ಛವು ಒಂದು ಚೀಲದಹಾಗೆ ಬೀಜವನ್ನು ಒಳಗಡಗಿಸಿ ಕೊಂಡಿರುವುದನ್ನು ನೋಡಿರಿ. ನೈದಿಲೇ ಜಾತಿಗೆ “ ನಿಂಫಿಯಾ ?” ಎಂದು ಹೆಸರು, ನೀಲೋತ್ಪಲವೂ ಈ ಜಾತಿಗೆ ಸೇರಿದುದೇ, ಇದರಲ್ಲಿ ದಳಗಳ ತುದಿಯು ಕಚಾಗಿಯ, ಕೇಸರದಂಡಗಳು ಮಕರಂದದ ಚೀಲಗಳಿಗಿಂತ ಮೇಲೆ ನೀಡಿಕೊಂಡ ಇರುವುದರಿಂದ, ಇದನ್ನು ನೈದಿಲೆಯಜಾತಿಯಲ್ಲದ, ಪತ್ಯೇಕ ಕಟಕ್ಕೆ ಸೇ ರಿದುದನಾಗಿ ಎಣಿಸಬೇಕು. ಆದುದರಿಂದ ನೈದಿಲೆಗೆ ನಿಂಫಿಯಾ ಲೋಟಸ್ ಎಂದೂ, ನೀಲೋತ್ಪಲಕ್ಕೆ ನಿಂಫಿಯಾ ಸೈಟಾ ?” (N, stellata) ಎಂದೂ ಹೇಳುವರು. ತಾವರೆ ಮತ್ತು ನೈದಿಲೆಗಳ ಸ್ವರೂಪವು ಒಂದನ್ನೊ೦ ದು ಹೋಲುತ್ತಿದ್ದರೂ, ಅಂಡಕೋಶವು ಮಾತ) ತಾವರೆಯಲ್ಲಿ ವಿಭಕ್ವಾಂಡಾ ಶಯವುಳ್ಳದು. ಆದುದರಿಂದ ತಾವರೆಯು ಬೇರೆ ಜಾತಿಗೆ ಸೇರಿದುದು. ಇದಕ್ಕೆ * ನೆಲಂಬಿಯಂ” (Nelumbium) ಎಂದು ಹೆಸರು. ಹೂವಿನ ನಡುವೆ ಗುಪ್ಪಿನಹಾಗೆ ಎದ್ದಿರುವಭಾಗವು, ಉದ್ದಕ್ಕೆ ಬೆಳೆದು ಅಗಲಿಸಿಕೊಂಡಿರುವ ವೃಂತಾಗುವೇ,