ವಿಷಯಕ್ಕೆ ಹೋಗು

ಪುಟ:ಓಷದಿ ಶಾಸ್ತ್ರ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ: | ದೇವವುಳ್ಳವುಗಳ ಗುಣವೂ ಲಕ್ಷಣವೂ. ಯಿಸಿ, ಈ ಮಾಲವಸ್ತುವಿಗೆ ಫೋಟೋಸ್ವಾಸವರ್ ” (Protoplasm) ಎಂದು ಹೆಸರಿಟ್ಟಿರುವರು. ಈ ವಸ್ತುವೇ ದೇವವುಳ್ಳವುಗಳಲ್ಲಿದ್ದುಕೊಂಡು, ಎಲ್ಲಾ ಬದಲಾವಣೆಗಳನ್ನೂ ಉಂಟುಮಾಡುತ್ತಿರುವುದು. ಇದು ಕೆಟ್ಟು ಹೋದರೆ, ಯಾವುದೆಂದು ಕೆಲಸವೂ ನಡೆಯದು. ದೇವಕ್ಕೆ ಈ ವಸ್ತುವೇ ಆಧಾರ ವಾಗಿರುವುದರಿಂದ ಇದಕ್ಕೆ ನಾವು ಜೀವಾಣು 12 (Protoplasm) ಎಂದು ಹೆಸರಿಡಬಹುದು. ಈ ದೇವಾಣುವಿಲ್ಲದ ಗಿಡ ವಾಗಲಿ, ಪ್ರಾಣಿಯಾಗಲಿ ಪಪಂಚದಲ್ಲಿಲ್ಲ. ಎಷ್ಟು ಸೂಕ್ಷ್ಮವಸ್ತುವಾಗಿ ದ ರಾ ಜೀವಾಣುವೊಂದಿದ್ದರೆ ಅಲ್ಲಿ ದೇವವಿರುವುದು. ಅದು ಕೆಟ್ಟು ಹೋದ ಕಡೆಯಲ್ಲಿ ಜೀವವಿಲ್ಲ. ಮರ, ಗಿಡ, ಮಾಲಿಕೆ, ಗೆಜ್ಜೆ ಮುಂತಾದ ಓಷಧಿಗಳ ಸಾಣಿಗಳ ದೇವವುಳ್ಳವುಗಳೇ ಆಗಿದ್ದರೂ, ಇವೆರಡೂ ಅನೇಕ ವಿಷಯಗಳಲ್ಲಿ ಒಂದ ಕೊಂದಕ್ಕೆ ವ್ಯತ್ಯಾಸವುಳ್ಳವುಗಳಾಗಿರುವುವು. ಮೃಗಗಳ, ಕಿಮಿಕೀಟ ಮೊದಲಾದುವೂ, ಆಹಾರ ಪದಾರ್ಥಗಳನ್ನು ತಾವಾಗಿಯೇ ಮಾಡಿಕೊ ಕೃತಕ ಶಕ್ತಿಯನ್ನು ಹೊಂದಿಲ್ಲ. ಇವು ಬೇರೆ ರಾಣಿಗಳನ್ನಾಗಲಿ, ಹುಲ್ಲು, ಗೆಜ್ಜೆ ಮುಂತಾದುವುಗಳನ್ನಾಗಲಿ, ಅಥವಾ ಇವುಗಳಿಂದ ಉಂಟಾಗುವ ವಸ್ತು ಗಳನ್ನಾಗಲಿ ತಿಂದು ಜೀವಿಸುವುವು. ಗಿಡಗಳಾದರೆ ನೀರು, ಉಪ್ಪು , ಇ೦ ಗಾಲಾಮು ವಾಯು, ಇವುಗಳನ್ನು ಗ್ರಹಿಸಿ, ಅವುಗಳ ಮೂಲಕ ತಮಗೆ ಬೇ ಕಾದ ಆಹಾರಗಳನ್ನು ಉಂಟುಮಾಡಿಕೊಳ್ಳುವುವು. ಭೂಮಿಯ ಕೆಳಭಾಗ ದಿಂದಲ, ವಾಯುಮಂಡಲದಿಂದಲೂ ಇವುಗಳನ್ನು ಗ್ರಹಿಸಿ, ಸರಕಿರಣ ಗಳ ಸಹಾಯದಿಂದ ಅವುಗಳನ್ನು ಬೇರೆಯಾಗಿ ವಿಭಾಗಿಸಿಕೊಂಡು, ಪುನಃ ಬೇರೇ ವಿಧದಿಂದ ಅವುಗಳನ್ನು ಸಂಯೋಗಿಸಿ, ತಮಗೆ ಬೇಕಾದ ಆಹಾರ ನ್ನುಂಟುಮಾಡಿ ಕೊಳ್ಳುವುವು.