ಪುಟ:ಓಷದಿ ಶಾಸ್ತ್ರ.djvu/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ: ಪುಪ್ಪಿಸುವ ಗಿಡಗಳ ಕುಟುಂಬಗಳ ವಿಭಾಗ, 233 ಹೊಂದಿರುವುದೇ ಈ ಹೂಗಳ ಮುಖ್ಯ ಲಕ್ಷಣವಾಗಿದೆ. ಕೆಳಗಿನ ದಳ ವು ಸ್ವಲ್ಪ ಬಿಳುಪಾಗಿಯೂ, ಇತರ ದಳಗಳ ಹೊರದಳಗಳ ಹಸುರಾಗಿಯ ಇರುವುವು. ಕೆಳಗಿನದಳವು ಒಳಗೆ ಒಂದು ಚೀಲವನ್ನು ಹೊಂದಿರುವುದು. ಇದರಲ್ಲಿ ಜೇನು ಉ೦ಟಾಗುವುದು. ಅದನ್ನು ಕುಡಿಯುವುದಕ್ಕಾಗಿ ಜೇನು ಹುಳ ಮುಂತಾದುವು ಹೂವನ್ನು ಪ್ರವೇಶಿಸುವುವು, ಆರ್ಕಿಡೀಯಾ 27, ಕುಟುಂಬದ ಗಿಡಗಳಲ್ಲಿ ಹೂವಿನಲ್ಲಿ ಕೆಳಗಿರುವ ದಳವು ಹಲವು ಬಗೆಯಾಗಿ ಬದಲಾವಣೆಯನ್ನು ಹೊಂದಿರುವುದೇ ಸ್ವಾಭಾವಿಕವು, ಕೇಸರವು ಒಂದೇ ಇದಕ್ಕೆ ಕೇಸರದಂಡವಿಲ್ಲ. ಕೀಲಾಗು, ನುಕರಂದದ ಚೀಲ, ಇವೆರಡೂ ಕೀಲದ ಭಾಗಗಳಾಗಿಯೇ ಇರುವುದು ಈ ಕುಟುಂಬದ ಹೂಗಳ ಸ್ವಭಾವ. 'ಯಲೋಫಿಯಾವಿರೆನ್ಸ್” ಎಂಬ ಹೂವಿನಲ್ಲಿ ಕೀಲವು ಮಂದವಾಗಿ, ಒಂದು ಕಡೆಯಲ್ಲಿ ಒಂದು ಹಳ್ಳವನ್ನು ಹೊಂದಿಯ ಇರುವುದು. ಈ ಹಳ್ಳ ವೇ ಕೀಲಾಗುವು, ಈ ಹಳ್ಳಕ್ಕೆ ಮೇಲಾಗಿ ಕೀಲದ ತುದಿಯಲ್ಲಿ ಒಂದು ಮಕರಂದದ ಚೀಲವು ಅಂಟಿಕೊಂಡಿರುವುದನ್ನು ಗಮನಿಸಿರಿ, ಒಂದು ಸ ಜಿಯಿಂದ ಈ ಮಕರಂದದ ಚೀಲವನ್ನು ಅಲುಗಿಸಿನೋಡಿದರೆ, ಆ ಸೂಜೆಯ ತುದಿಯಲ್ಲಿ ಬಿಳಿ ಕಾವುಗಳುಳ್ಳ ಹಳದಿ ಬಣ್ಣದ ಎರಡು ಉಂಡೆಗಳು ಅಂಟಿಕೊಳ್ಳುವುವು. ಈ ಉಂಡೆಗಳೇ ಮಕರಂದದ ತಿರುಳುಗಳು. ಈ ಕುಟುಂಬದ ಹೂಗಳಲ್ಲಿ ಮಕರಂದವು ಪುಡಿಯಾಗಿಲ್ಲದೆ, ತಿರುಳಾಗಿರುವುದು. ಕೀಟಗಳು ಜೇನನ್ನು ಹುಡುಕುವಾಗ, ಸೂದೆಯಲ್ಲಿ ಅಂಟಿಕೊಳ್ಳುವಂ ತೆಯೇ ಇವುಗಳ ತಲೆಯಲ್ಲಿಯ ಆ ಉಂಡೆಗಳು ಅಂಟಿಕೊಳ್ಳಬಹುದಲ್ಲವೆ ? ಈ ಹುಳಗಳೇ ಬೇರೊಂದು ಹೂವಿನಲ್ಲಿ ಜೇನನ್ನು ಹುಡುಕುವಾಗ, ಹೀಗೆ ಅಂಟಿಕೊಂಡಿರುವ ಮಕರಂದದ ತಿರುಳು, ಬೇರೇ ಹೂಗಳ ಕೀಲಾಗದ ತಗುಲಿ, ಮಕರಂದ ಸ್ಪರ್ಶವಾಗುವುದು. ಹೀಗೆ ಕೀಟಗಳ ಮೂಲಕ ಮಕ