________________
-238 ಓಷಧಿ ಶಾಸ್ತ್ರ ) [XII ನೆಯ ಗಿ, ಒಂದೇ ಮರದ ಹೊಂಬಾಳೆಯಲ್ಲಿಯಾಗಲಿ, (ಉದಾ, ಅಡಿಕೆ, ತೆಂಗು,) ಅಥವಾ ಬೇರೆಬೇರೆ ಮರದ ಹೊಂಬಾಳೆಗಳಲ್ಲಿಯಾಗಲಿ, (ಉದಾ, ಈಚಲು, ಓತಿ.) ಇರುವುದುಂಟು. ಅಡಿಕೆ, ತೆಂಗು, ಇವುಗಳಲ್ಲಿ ಹೂಗೊನೆಗಳ ಕವಲುಗಳಲ್ಲಿ, ಹೆಣ್ಣು ಹೂಗಳು ಕೆಳಗೂ, ಗಂಡು ಹೂಗಳು ಮೇಲುಭಾಗ ದಯ ಸೇರಿಕೊಂಡಿರುವುವು. ಹೆಣ್ಣು ಹೂಗಳಲ್ಲಿರುವ ಹೊರದಳ ಗಳ, ದಳಗಳ, ಕಾಯಿಯಸಂಗಡ ಬೆಳೆಯುವ ಸ್ವಭಾವವುಳ್ಳವು. ಹೆಣ್ಣು ಹೂಗಳಲ್ಲಿ ಕೆಲವುಗಳಿಗೆ ಗೊಡ್ಡಾದ ಕೇಸರುಗಳುಂಟು (ಉದಾ. ಓತಿ.) ಅಂಡಾಶಯವು ಮರುಗೂಡುಗಳುಳ್ಳದು, ಓಲೆಯಲ್ಲಿ ಈ ಮೂರು ಗೂಡುಗಳಲ್ಲಿಯ ಬೀಜಗಳುಂಟಾಗುವುವು, ತೆಂಗು, ಈಚಲು, ಅಡಿಕೆ, ಇವುಗಳಲ್ಲಿ ಒಂದುಗೂಡುಮಾತು ಬೆಳೆದು ಒಂದೇ ಬೀಜವುಂಟಾಗುವುದು. ಈ ಎಲ್ಲಾ ಗಿಡಗಳಲ್ಲಿಯ ಕಾಯಿಯ ಬೀಜಕೋಶವು ಒಳಗಡೆಯಲ್ಲಿ ವಾಟೆಯನೂ, ಹೊರಗೆ ನಾರನ್ನೂ ಹೊಂದಿರುವುದು, ಕೊರೆನಾರಿ (ಮುಸ್ತೆ) ಅಥವಾ “ ಸೈಪಿರೇಸಿಯೋ ?” (Cyperaeee) ಕುಟುಂಬ:-ಇದಕ್ಕೆ ಉದಾಹರಣವಾಗಿ 192, 193 ನೆಯ ಪಟ ದಲ್ಲಿ ಕಾಣಿಸಲ್ಪಟ್ಟಿರುವ ಎರಡು ಕೆರನಾರಿ ಗಿಡಗಳನ್ನು ತೆಗೆದುಕೊ ಳೋಣ. ಕೋರನಾರಿಗೆಡ್ಡೆಯ ಗಿಡದಲ್ಲಿ ಪುಕಾಂಡವು ನೆಲದಲ್ಲಿಯೇ ಹುದು ಗಿರುವುದು. ಕೆಲವು ಶಾಖೆಗಳು ಹೊರಕ್ಕೆದ್ದು ಬರುವುವು. ಮತ್ತೆ ಕೆಲವು ಗೆಡ್ಡೆಗಳಾಗಿ ಬದಲಾಯಿಸಲ್ಪಡುವುವು. ಹೊರಕ್ಕೆದ್ದು ಬರುವ ಶಾಖೆಗಳು ಪುಸಿ ಕೆಟ್ಟು ಹೋದಮೇಲೆ, ಗೆಡ್ಡೆಗಳಾಗಿ ನಿಂತಿರುವವು ಶಾಖೆಗಳಾಗಿ ಬೆಳೆದು ಹೊರಕ್ಕೆ ಬರುವುವು. ಈ ಕಾರಣದಿಂದ ಕೆರನಾರಿ ಗೆಡ್ಡೆಯ ಗಿಡವು