ಪುಟ:ಓಷದಿ ಶಾಸ್ತ್ರ.djvu/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಗಿಡಗಳ ಒಳಗಿನ ಸ್ವರ ಪ. 255 ಈ ವಲ್ಕಲ ಸಮೂಹದಲ್ಲಿ, ಎಲ್ಲಾ ವರಿಸೆ ಗಳಿಗಿಂತಲೂ ಮೇಲಾಗಿ ಹೊರಗಿರುವ ಗೂಡುಗಳು, ಒಂದನ್ನೊಂದು ಮುಟ್ಟಿಕೊಂಡು, ಆಕಾರದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾಗಿ ಚಾಕವಾಗಿಯೇ ಇರುವುವು. ಈ ಸುತ್ತು, ಗಿ ಡದ ಎಲ್ಲಾ ಭಾಗಗಳಿಗಿಂತಲೂ ಹೊರಗಡೆಯಲ್ಲಿಯೇ ಇರುವುದು. ಇದಕ್ಕೆ “ ತಕ್ಕು ” ಎಂದು ಹೆಸರು. ಎಲೆಗಳ ಅಡಿಯ ಭಾಗದಲ್ಲಿ ಇದನ್ನು ಸು ಲಭವಾಗಿ ಸುಲಿದು ಬಿಡಬಹುದು. ತೃಕ್ಕಿಗೂ, ನಾಳ ಕೂರ್ಚಗಳಿಗೂ ನಡುವೆ... ಇರುವ ವಲಲದ ಗೂಡುಗಳು ದುಂಡಾಗಿಯೂ, ಇನ್ನೂ ಹಲವು ಬಗೆಯ ಆಕಾರವುಳ್ಳವುಗಳಾಗಿಯೂ ಇರುವುವು, ಎಳೆದಂಟಿನ ವಲ್ಕಲದ ಎಲ್ಲಾ ಗೂಡುಗಳಲ್ಲಿಯ, ಬಲಿತ ದಂಟಿನ ನಲದ ಕೆಲವು ಗೂಡುಗಳಲ್ಲಿಯ ಜೀವಾಣುವು ಸೇರಿ ಕೊಂಡಿರುವುದು. ಪಾಯಕವಾಗಿ ದಿಂಡಿನ ಗೂಡುಗಳು ದೊಡ್ಡವುಗಳಾಗಿಯೇ ಇರು ವುವು, ಎಳೆದಂಟಿನಲ್ಲಿ ಈಗೂಡುಗಳೊಳಗೆ ಜೀವಾಣುವು ಇದ್ದರೂ, ದಂಟು ಬಲಿತಹಾಗೆ, ಈ ವಸ್ತುವು ಕುಗ್ಗುತ್ತಲೇ ಬಂದು, ಕೊನೆಗೆ ನಿಶೆಷವಾಗಿ ಹೋಗಿ, ಇದಕ್ಕೆ ಬದಲಾಗಿ ಆಗೂಡುಗಳಲ್ಲಿ ನೀರಾಗಲಿ ಗಾಳಿಯಾಗಲಿ ತುಂ ಬಿಕೊಳ್ಳುವುವು, ದಿಂಡಿನ ಗೂಡುಗಳು ಬೆಂಡಿನಂತೆ ಬಿಳುಪಾಗಿರುವುದಕ್ಕೆ ಇದೇ ಕಾರಣವು. ದಂಟಿನ ಭಾಗಗಳಲ್ಲಿ ನಾಳ ಕರ್ಚಗಳು ಬಹು ಮುಖ್ಯವಾದುವು. ಇದೇ ದಂಟು ದಪ್ಪನಾಗುವುದಕ್ಕೂ, ನೀರು ಏರುವುದಕ್ಕೂ, ಆಧಾರವಾದ ಭಾಗವು, ಈ ನಾಳ ಕೂರ್ಚಗಳಲ್ಲಿ ಮೂರು ಭಾಗಗಳುಂಟು. ಒ೦ದು ಭಾ. ಗವು ದಿಂಡಿನ ಅಂಚಿನಲ್ಲಿಯ, ಮತ್ತೊಂದು ವಲ್ಕಲದ ಪಕ್ಕದಲ್ಲಿಯ... ಮೂರನೆಯದು ಈ ಎರಡಕ್ಕೂ ನಡುವೆಯೂ ಇರುವುವು, ದಿಂಡನ್ನು ಸಮೀ. ಪಿಸಿರತಕ್ಕದ್ದು, ಚಿಕ್ಕ ಚಿಕ್ಕ ಗೂಡುಗಳಿಂದಲೂ, ದೊಡ್ಡ ದ್ವಾರವುಳ್ಳ ಉದ್ದ