ಪುಟ:ಓಷದಿ ಶಾಸ್ತ್ರ.djvu/೨೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

258 ಓಷಧಿ ಶಾಸ್ತ್ರ ) [XIII ನೆಯ ಮೊದಲೇ ಇರುವ ಕರ್ಚಗಳಿಗೆ ನಡುವೆ ಹೊಸ ನಾಳಕೂರ್ಚಗಳು ಉಂಟಾ ಗುವುವು. ಹೀಗೆ ಮೇಲೆಮೇಲೆ ಬದಲಾವಣೆಯು ಉಂಟಾಗುತ್ತಲೇ ಇರುವು ದರಿಂದ, ಕರ್ಚಗಳ ಒಂದಾಗಿ ಸೇರಿ, ವಲಯವಾಗಿ, ಅಗಲದಲ್ಲಿ ಹೆಚ್ಚುತ್ತಲೇ ಬರುವುದು. ಸೂರ್ಯಕಾಂತಿ ದಂಟಿನ ಅಡಿಭಾಗದಲ್ಲಿ, ದಾರುವು ವಲಯವಾಗಿ ಹೆಚ್ಚು ಅಗಲವಾಗುವುದೂ ಈ ಕಾರಣದಿಂದಲೇ, ಎಲ್ಲಾ ಓಪ್ಪದಿಗಳಲ್ಲಿಯ ದಂಟುಗಳು ಹೆಚ್ಚು ಘನವಾಗುವುದೂ ಈ ಬದಲಾವಣೆಗಳಿಂದಲೇ, ಓಷಧಿಗಳಿಲ್ಲ, ಪಟ್ಟಿಯನ್ನು ಸುಲಿದ ಮೇಲೆ, ದಂಟಿನಲ್ಲಿ ನಿಂತ ಭಾಗವು ದಾರುವಾಗಿರುವುದು, ಪಟ್ಟಿಯು ದಾರುವಿನ ಸಂಗಡ ವೃದ್ಧಿ ದನಕ ಗಳಿಂದ ಸೇರಿಸಲ್ಪಟ್ಟಿರುವುದರಿಂದಲೂ, ವೃದ್ಧಿ ದನಕಗಳು ಚಿಕ್ಕವಾಗಿ, ಮೃ ದುವಾಗಿರುವುದರಿಂದಲೂ, ಪಟ್ಟಿಯನ್ನು ಸುಲಿಯುವುದಕ್ಕೆ ಸುಲಭವಾಗಿರು ವುದು, ಪಟ್ಟಿಯೆಂಬುದು, ಶಣ, ವೃದ್ಧಿಜನಕಗಳ ಸ್ಪಲ್ಪಭಾಗ, ವಲ್ಕಲ, ಇವು ಮರ ಸೇರಿದುದಾಗಿಧೆ. - ದಂಟನ್ನು ತುಂಡಾಗಿ ಹೆರೆದುನೋಡಿದಂತೆ, ಉದ್ದುದ್ದಕ್ಕೆ ಹೆರೆದೂ ನೋಡಿ ಪರೀಕ್ಷಿಸಬೇಕು, ಸೂರ್ಯಕಾಂತಿಯ ದಂಟನ್ನು ದಿಂಡಿನಿಂದ ವಲ್ಕಲದ ವರೆಗೆ, ಉದ್ದುದ್ದವಾಗಿ ಹೆರೆದು, ಆತುಂಡನ್ನು ಪರೀಕ್ಷಿಸಿದರೆ ಹೇಗೆ ಕಾಣುವು ದೋ, ಹಾಗೆಯೇ 204 ನೆಯ ಪಟದಲ್ಲಿ ತೋರಿಸಿರುವುದು. ಮತ್ತು ಇದರಲ್ಲಿ ವಲ್ಕಲದಿಂದ ದಿಂಡಿನವರೆಗೆ ಇರುವ ಭಾಗಗಳು ಚೆನ್ನಾಗಿ ತಿಳಿಯುವಂತೆ ಅಲ್ಲಲ್ಲಿ ಗುರುತು ಮಾಡಲ್ಪಟ್ಟಿರುವುದು. ವಲ್ಕಲದ ಗೂಡುಗಳ, ದಿಂಡಿನ ಗೂಡುಗಳ ದೀರ್ಘ ಚತುರಶ)ಗಳಾಗಿ ಇಟ್ಟಿಗೆಗಳನ್ನು ಜೋಡಿಸಿಟ್ಟಂತೆ ಇರುವುವು. ಶಣದ ಹೊರಭಾಗವು ಉದ್ದಕ್ಕೆ ಸಣ್ಣ ಕೊಳವೆಗಳಾಗಿ ಕಾಣು ವುವು. ಈ ನಾಳಗಳೇ ಪಟ್ಟಿಯಲ್ಲಿ ನಾರುಗಳಾಗಿ ಸೇರಿರುವುವು,