________________
278 ಓಷಧಿ ಶಾಸ್ತ್ರ ) [XIII ನೆಯ ಚೌಗು ಭೂಮಿಯಲ್ಲಿ ಬೆಳೆಯುವ ಈ ಬರ್ಗಿಯಾವರ್ತಿಸಿಲ್ಫಾಟಾ ?? ಎಂಬ ಹೆಸರುಳ್ಳ ಗಿಡದ ದಂಟಿನಲ್ಲಿ ಅಡ್ಡಲಾಗಿ ಕತ್ತರಿಸಿದ ತುಂಡಿನ ನೆತ್ತಿ ಯನ್ನು ಭೂತಕನ್ನಡಿಯಿಟ್ಟು ನೋಡಿದರೆ, ಹೇಗೆ ಕಾಣುವುದೋ, ಅದರಂ ತೆಯೇ 216 ನೆಯ ಪಟದಲ್ಲಿ ಕಾಣಿಸಿರುವುದು. ಇದರಲ್ಲಿ ದಿಂಡಿನಲ್ಲಿಯ, ವಲ್ಕಲದಲ್ಲಿಯ ಗೂಡುಗಳು ದೊಡ್ಡದಾಗಿರುವುದನ್ನೂ, ಪೊಳ್ಳುಗಳು ಹೇರಳವಾಗಿರುವುದನ್ನೂ, ವೃದ್ದಿ ಜನಕಗಳಲ್ಲದೆ ದಾರುವೂ ಶಣವೂ ಕಡಿ ಮೆಯಾಗಿರುವುದನ್ನೂ ಗಮನಿಸಿ ನೋಡಿರಿ, ಎಲೆಗಳ ಒಳಗಿನ ಸ್ವರೂಪ. -09೫ಎಲೆಗಳ ಕಾವಿನ ಒಳಭಾಗವು, ಸ್ವಲ್ಪ ಹೆಚ್ಚು ಕಡಿಮೆಯಾಗಿ ದಂಟಿನ ಒಳಭಾಗದ ಸ್ವರೂಪವನ್ನೇ ಅನುಸರಿಸಿರುವುದು. ದಂಟಿನೊಳಗೆ ಹೊರ ಡುವ ಕೆಲವು ನಾಳ ಕೂರ್ಚಗಳು, ಗಿಣ್ಣುಗಳಲ್ಲಿ ವಿಭಾಗಹೊಂದಿ, ಹಲವು ಬಗೆಯಾಗಿ ಹೊರಡುವುದೆಂದು ಮೊದಲೇ ಹೇಳಲ್ಪಟ್ಟಿದೆ. ಇವುಗಳಲ್ಲಿ ಕೆಲವು ಕೂರ್ಚಗಳು ಗಿಣ್ಣಿನೊಳಗೆಸೇರಿ, ಕಾವಿನಮಾರ್ಗವಾಗಿ ಪತ್ರವನ್ನು ಮುಟ್ಟಿ, ಅಲ್ಲಿ ಬಲೆಯಂತೆ ವಿಸ್ತರಿಸಿಕೊಳ್ಳುವುವು. ಕಾವಿನಲ್ಲಿ ಸೇರಿರುವ ನಾಳಕರ್ಚಗಳಿಗೆ ನಡುನಡುವೆ ಇರುವ ದಿಂಡಿನ ರೇಖೆ ಯು ಅಗಲವಾಗಿರುವುದಲ್ಲದೆ, ವೃದ್ಧಿ ದನಕಗಳು ಬೇರೆ ಬೇರೆ ಯಾಗಿಯೇ ನಿಂತಿರುವುವು. ವಲಯಾಕಾರವನ್ನು ಹೊಂದುವುದಿಲ್ಲ. ಎಲೆಯ ನರಗ ಳೆಂದು ಹೇಳಲ್ಪಡುವ ನಾಳ ಕೂರ್ಚಗಳ ಬಲೆಯ ಕಣ್ಣುಗಳಲ್ಲಿ, ಗೂ ಡುಗಳು ತುಂಬಿರುವುವು. ಈ ಗೂಡುಗಳಲ್ಗೆಲ್ಲಾ ಹಸುರು ಪದಾರ್ಥ ದಿಂದ ತುಂಬಿದ ಬೇವಣುವು ವ್ಯಾಪಿಸಿರುವುದು, 21 7 ನೆಯ ಪಟವನ್ನು ನೋಡಿದರೆ, ಈ ವಿಷಯಗಳು ಚೆನ್ನಾಗಿ ವ್ಯಕ್ತವಾಗುವುವು. ಎಲೆಗಳ ತವು