ವಿಷಯಕ್ಕೆ ಹೋಗು

ಪುಟ:ಓಷದಿ ಶಾಸ್ತ್ರ.djvu/೩೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ.] ಗಿಡಗಳ ಒಳಗಿನ ಸ್ವರೂಪ. 283 ಸೀಳಿನೋಡಿದರೆ, ನಡುವೆ ಒಂದು ಬಿಳಿ ಕಡ್ಡಿಯ, ಇದರ ಸುತ್ತಲೂ ಮೃದು ವಾದ ಒಂದು ಪದಾರ್ಥವೂ ಕಂಡುಬರುವುದು, ನಡುವೆ ಬಿಳುಪಾಗಿಯ ಕಠಿನವಾಗಿಯೇ ಇರುವ ಕಡ್ಡಿಯೇ ನಾಳಕೂರ್ಚಗಳ ಮೊತ್ತವು. ಇದಕ್ಕೆ ಹೊರಗೆ, ಇದನ್ನು ಸುತ್ತಿಕೊಂಡಿರುವುದೆಲ್ಲಾ ವಲ್ಕಲವೇ, ಸಾಯಿಕವಾಗಿ, ಬೇರುಗಳಲ್ಲೆಲ್ಲಾ ನಾಳ ಕೂರ್ಚಗಳ ನಡುವೆಯೇ ಇರುವುವು. ದಂಟಿನಲ್ಲಿ ರುವಂತೆ ಇವು ಹೊರಭಾಗದಲ್ಲಿರುವುದಿಲ್ಲ. ಪಟ 220.-ಬಾಳೆಬೇರಿನಲ್ಲಿ ಕತ್ತರಿಸಿದ ತುಂಡಿನ ನೆತ್ತಿ. ಸುಮಾರು 50 ಮಡಿ ದೊಡ್ಡದು, ಬಾಳೆ ಬೇರಿನಲ್ಲಿ ಕತ್ತರಿಸಿದ ತುಂಡಿನ ನೆತ್ತಿಯು 220, 221 ನೆಯ ಪಟಗಳಲ್ಲಿ ಕಾಣಿಸಲ್ಪಟ್ಟಿರುವುವು. ಈ ಎರಡು ಪದಗಳಲ್ಲಿಯ ನಡುವೆ ಇರುವುದೇ ನಾಳ ಕೂರ್ಚಸಮುದಾಯಗಳು ಇದರ ಸುತ್ತಲೂ ಇರುವ ಗೂಡುಗಳ ಅಡಕುಗಳೇ ವಕ್ಕಲವಾಗಿರುವುದು. ಇದು ಬೇರುಗಳೊಳಗೆ ದಂತಿನಲ್ಲಿರುವುದಕ್ಕಿಂತ ಹೆಚ್ಚಾಗಿ ವಿಸ್ತರಿಸಿಕೊಂಡಿರುವುದು,