ವಿಷಯಕ್ಕೆ ಹೋಗು

ಪುಟ:ಓಷದಿ ಶಾಸ್ತ್ರ.djvu/೩೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಗಿಡಗಳ ದಳಿಕೆಯ ಕೆಲಸವೂ. 293 ಇಲ್ಲ. ಒಂದೇ ಗೂಡುಳ್ಳ ಗಿಡಗಳ ಇರುವುವು. (ಮೊದಲನೆಯ ಅಧ್ಯಾ ಯದಲ್ಲಿ ಒಂದನೆಯ ಪಟವನು ನೋಡಿರಿ. ಗಿಡಗಳು ಬಹುಸೂಕ್ಷವಾ ಗಿಯ ಒಂದೇ ಗೂಡುಳುದಾಗಿಯ ಇದ್ದರೂ, ಹಲವುಗೂಡುಗಳಿ೦ದ ಕೂಡಿದ ದೊಡ್ಡ ಗಿಡಗಳಲ್ಲಿ ನಡೆಯುವ ಮುಖ್ಯವಾದ ಎಲ್ಲಾ ಕೆಲಸಗಳ ಈ ಗಿಡಗಳಲ್ಲಿಯೂ ನಡೆಯುವುವು. ಪ್ರಾಣವುಳ್ಳ ಎಲ್ಲಾ ಜಂತುಗಳಿಗೂ ಗಿಡಗಳಿಗೂ ನೀರು ಅತ್ಯವಶ್ಯಕವಾದುದು. ನೀರಿಲ್ಲದೆ ಇವು ಸೇವಿಸುವುದು ಅಸಾಧ್ಯ. ಒಂದು ಗಿಡದಲ್ಲಿ, ನೂರುಭಾಗದಲ್ಲಿ 80 ಅಥವಾ 90 ಪಾಲು ನೀರಾ ಗಿಯೇ ಇರುವುದು, ಒಣಗಿದ ಬೀಜಗಳಲ್ಲಿ ಹೊರತು, ಇತರ ಎಲ್ಲಾ ಭಾಗ ಗಳಲ್ಲಿಯ ನೀರು ತುಂಬಿರುವುದು, ನೀರಿಲ್ಲದಿದ್ದರೆ ಗಿಡಗಳು ಸುಕ್ಕಿ ಹೋಗುವುದಲ್ಲದೆ, ಅವುಗಳಲ್ಲಿ ಈ ವಾಣುವಿನ ಸಹಾಯದಿಂದ ನಡೆಯಬೇಕಾದ ಕೆಲಸವೂ ಕಡಿಮೆಯಾಗಿ ಹೋ ಗುವುದು, ನೀರೇ ಸಿಕ್ಕದಿದ್ದರೆ ಜೀವಾಣುವು ಸ್ತಂಭಿಸಿ ಹೋಗುವುದು, ಗಿಡ ಗಳಲ್ಲಿ ನಡೆಯುವ ಕೆಲಸವೆಲ್ಲವೂ ನಿಂತುಹೋಗುವುದು, ಆ ಮೇಲೆ ನೀರು ಸಿಕ್ಕಿದರೆ ಚಿಗುರಿ ಬೆಳೆಯುವುದು. ಇಲ್ಲದಿದ್ದರೆ ಗಿಡವು ಕೆಡುವುದು. ಮೊದಲೇ ಹೇಳಲ್ಪಟ್ಟಂತೆ ದೇಜಗಳಲ್ಲಿರುವ ಜೀವಾಣುವು ನೀರಿನ ಸಂಬಂಧವಿಲ್ಲದಿರುವವರೆಗೂ ಸ್ವಂಭಿಸಿರುವುದು ಸ್ವಾಭಾವಿಕವು, ನೀರು ತಗು ವಿದ ಕೂಡಲೆ ಜೀವಾಣುವು ವೇಗದಿಂದ ಬೆಳೆಯಲಾರಂಭಿಸುವುದು. ಇದೇ ಜೀಜದ ಮೊಳೆಯುವಿಕೆಯು. ಗಿಡಗಳಿಗೆ ಬೇಕಾದ ಆಹಾರ ಪದಾರ್ಥಗಳಲ್ಲಿ ನೀರೂಒಂದಾಗಿರುವುದ ಲ್ಲದೆ, ಇದು ಆಹಾರ ಪದಾರ್ಥಗಳನ್ನು ಗಿಡಗಳಲ್ಲಿ ಹಲವು ಕಡೆಗಳಿಗೂ ತೆಗೆದು ಕೊಂಡು ಹೋಗುವುದಕ್ಕೂ ಸಹಾಯಕವಾಗುವುದು,