ಪುಟ:ಓಷದಿ ಶಾಸ್ತ್ರ.djvu/೩೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

294 ಓಷಧಿ ಶಾಸ್ತ್ರ ) [XIV ನೆಯ ಬೇರಿನ ಸ್ವರೂಪವನ್ನು ಕುರಿತು ಹೇಳುವಾಗಲೇ, ಭೂಮಿಯಲ್ಲಿರುವ ನೀರನ್ನು ಬೇರುಗಳು ತಮ್ಮಮಗಳ ಮಲಕವಾಗಿ ಗ್ರಹಿಸುವು ವೆಂದು ಹೇಳಲ್ಪಟ್ಟಿತು, ಭೂಮಿಯಲ್ಲಿ ನಾನಾಕಡೆಗಳಲ್ಲಿಯ ಬೇರುಗಳು ವ್ಯಾಪಿಸುವುದರಿಂದ, ಎಲ್ಲಾ ಕಡೆಯ ನೀರನ್ನೂ ಇವು ಆಕರ್ಪಿಸಿಕೊಳ್ಳು ವುವು, ಬೇರಿನ ರೋಮಗಳ ಸುತ್ತಲೂ ಸಣ್ಣ ಸಣ್ಣ ಮರಳುಗಳು ಅಂಟಿಕೊಂಡಿರುವುವು. ಈ ಕಲ್ಲು ಚೂರುಗಳಸುತ್ತಲೂ ಸವರಿದಹಾಗೆ ಸೇರಿ ರುವ ನೀರನ್ನೇ ಈ ರೋಮಗಳು ಕುಡಿಯುವುವು. ಹೀಗೆ ಮಳಲಿನಲ್ಲಿ ಅಂಟಿ ಕೊಂಡಿರುವ ನೀರಿನಲ್ಲಿ ಗಿಡಗಳಿಗೆ ಬೇಕಾದ ಹಲವು ಬಗೆಯ ಉಪ್ಪುಗಳ ಕರಗಿರುವುವು. ಕೆಲವು ವಸ್ತುಗಳು ನೀರಿನಲ್ಲಿ ಕರಗದವುಗಳಾಗಿದ್ದರೂ, ಭೇರುಗಳ, ಬೇರಿನ ರೋಮಗಳ, ಆ ಪದಾರ್ಥಗಳನ್ನು ಕರಗುವಂತೆ ಮಾಡುವ ಶಕ್ತಿಯನ್ನು ಹೊಂದಿರುವುವು. ಒ೦ದು ಹೂವಿನ ತೊಟ್ಟಿಯಲ್ಲಿ ಕೆಳಗಡೆ ಮಾರ್ಬಿಲ್ಲ” ಎಂದು ಹೇಳಲ್ಪಡುವ ಒಂದು ಕಲ್ಲು ಹಲಗೆಯನ್ನು ಇಟ್ಟು, ಅದರ ಮೇಲೆ ಗಿಡವನ್ನು ನಟ್ಟು, ಕೆಲವು ದಿವಸಗಳ ಮೇಲೆ ಆಕಲ್ಲನ್ನು ಎತ್ತಿ ನೋಡಿದರೆ, ಅದರಲ್ಲಿ ಬೇರುಗಳು ತಗುಲಿದ್ದ ಕಡೆಗಳಲ್ಲೇಲ್ಲಾ ಹಳ್ಳ ಗಳಿರುವುದನ್ನು ಕಾಣಬಹುದು. ಈ ಪರೀಕ್ಷೆಯಿಂದ ಬೇರುಗಳು ಕೆಲವು ಪದಾರ್ಥ ಗಳನ್ನು ಕರಗುವಂತೆ ಮಾಡುವ ಶಕ್ತಿಯುಳ್ಳವುಗಳೆಂದು ಊಹಿಸಬೇಕು. ನೀರು ಭೂಮಿಯಿಂದ ಬೇರಿನ ರೋಮಗಳೆಳಗೆ ಹುಗುವುದಕ್ಕೆ ಕಾರಣವೇ ನೆಂದು ನಮಗೆ ತಿಳಿಯಬೇಕಲ್ಲವೆ? ಈ ಕಾರಣವನ್ನು ತಿಳಿದು ಕೊಳ್ಳುವುದಕ್ಕಾ ಗಿ, ಒಂದುದೊಡ್ಡ ಪಾತ)ದಲ್ಲಿ ಒಳ್ಳೆನೀರನ್ನು ಸುರಿದು,ಎರಡು ಕಡೆಯ ಸಂ ದುಳ್ಳ ಒಂದು ಕೊಳವೆಯ ಒಂದುಕಡೆಯದ್ವಾರವನ್ನು ತೆಳುವಾದ ಚರ್ಮದಿಂ ದಮುಚ್ಚಿ, ಆಪಾತ) ದಲ್ಲಿ ಮುಳುಗಿಸಿಟ್ಟು, ಆ ಕೊಳವೆಯಲ್ಲಿ ಸಕ್ಕರೆ ಅಥವಾ ಉಪ್ಪನ್ನು ಕರಗಿಸಿದ ನೀರನ್ನು ಸುರಿಯಬೇಕು. ಹಾಗೆಸುರಿದ ಸ್ವಲ್ಪ ಹೊತ್ತಿಗೆ ಮೇಲೆ, ದೊಡ್ಡ ಪಾತ) ದೊಳಗಣ ನೀರನ್ನು ಪರೀಕ್ಷಿಸಿದರೆ, ಅದರಲ್ಲಿ ಸಕ್ಕರೆ