ವಿಷಯಕ್ಕೆ ಹೋಗು

ಪುಟ:ಓಷದಿ ಶಾಸ್ತ್ರ.djvu/೩೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

296 ಓಷಧಿ ಶಾಸ್ತ್ರ ) . [XIV ನೆಯ ಕರಗಿರುವ ಸಕ್ಕರೆಯು, ಚರ್ಮದ ಮಾರ್ಗವಾಗಿ ಸಾತದ ನೀರೊಳಗೆ ಸೇರುವಂತೆ, ಈ ಬೇರಿನ ರೋಮಗಳ ನೀರಿನಲ್ಲಿರುವ ವಸ್ತುಗಳ ಹೊರಕ್ಕೆ ಬಂದು, ನೆಲದಲ್ಲಿರುವ ನೀರಿನಲ್ಲಿ ಕಲಿತಿರಬೇಕಲ್ಲವೇ? ಬೇರಿನ ಗೂಡುಗಳಲ್ಲಿ ಜೀವಾಣುವು ಸೇರಿರುವುದರಿಂದ, ಹೀಗೆ ನೀರನ್ನಾಗಲಿ ಕರಗಿರುವ ವಸ್ತುಗಳ ನಾಗಲಿ ಇದು ಹೊರಕ್ಕೆ ಬಿಡುವುದಿಲ್ಲ. ನೀರುನಾತ ಹೊರಗಡೆಯಿಂದ ಒಳ ಕ್ಕೆ ಹೋಗಿ ಸೇರುವುದು. ಭೂಮಿಯ ನೀರು ಬೇರಿನ ರೋಮಗಳೆಳಗೆ ಸೇರುತ್ತಲೇ ಇರುವದ ರಿಂದ, ಬಹಳ ಶೀಘ್ರವಾಗಿ ಬೇರಿನಲ್ಲಿ ನೀರು ತುಂಬಿಕೊಳ್ಳುವುದು, ಗೂಡು ಗಳೊಳಗಿನ ನೀರೂ ಹೆಚ್ಚುತ್ತಲೇ ಬರುವುವು. ಜೀವಾಣುವು ಸರಿಯಾದ ಸ್ಥಿತಿಯಲ್ಲಿರುವವರೆಗೂ ಹೀಗೆ ನೀರು ಒಳಗೆ ಸೇರುತ್ತಲೇ ಇರುವುವು - ಬೇರಿನಿಂದ ಹೆಚ್ಚಾಗಿ ನೀರು ಹೊರಕ್ಕೆ ಬಾರದು. ಜೀವಾಣುವು ಕೆಟ್ಟು ಹೋ ದರೆ, ಅದರೊಳಗಣ ನೀರಿನಲ್ಲಿ ಕರಗಿದ ವಸ್ತುವೂ ನೀರೂ ಹೊರಬೀಳು ವುದು. ಜೀವಾಣುವೆಂಬುದು ಬಹಳ ಅದ್ಭುತವಾದ ವಸ್ತುವು. ಇದು ಕೆಲವು ವಸ್ತುಗಳನ್ನು ಒಳಗೆ ಬರಲು ಅವಕಾಶ ಕೊಡುವುದು. ಕೆಲವುಗಳನ್ನು ಒಳ ಕ್ಕೆ ಬಿಡುವುದಿಲ್ಲ. ಗೂಡುಗಳೊಳಗಿನ ವಸ್ತುಗಳಲ್ಲಿ ಕೆಲವನ್ನು ಹೊ ರಕ್ಕೆ ಬಿಟ್ಟು ಕೊಡುವುದಿಲ್ಲ. ಇದೂ ಅಲ್ಲದೆ ಜೀವಾಣುವು ಕೆಲವು ಸಮಯಗ ಇಲ್ಲಿ ಕೆಲವು ಪದಾರ್ಥಗಳನ್ನು ಹೊರಕ್ಕೆ ಬಿಡುವುದು. ಅದೇ ವಸ್ತುಗಳ ನ್ನೇ ಮತ್ತೆ ಕೆಲವು ಸಂದರ್ಭಗಳಲ್ಲಿ ಹೊರಬೀಳಿಸದೆ ಇರುವುದೂ ಉಂಟು. ಯಾವಾಗ ಬಿಡಬೇಕೊ, ಯಾವಾಗ ಬಿಡಕೂಡದೋ, ಈ ಸಂದರ್ಭಗಳನ್ನು ಜೀವಾಣುವು ನಿರ್ಧಾರಣೆ ಮಾಡಬಲ್ಲುದು, ಈ ಜೀವಾಣುವಿನ ಶಕ್ತಿಯಿಂದಲೇ ಬೇರಿನ ರೋಮಗಳು ತನಗೆ ಬೇಕಾದ ಪದಾರ್ಥಗಳನ್ನು ಮೂತ) ನೀರಿನ