ಪುಟ:ಓಷದಿ ಶಾಸ್ತ್ರ.djvu/೩೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ'] ಗಿಡಗಳ ದಳಿಕೆಯ ಕೆಲಸವೂ. 301 ಹೋಗುವುವು, ಬೇರುಗಳು ಒಳಕೊಳ್ಳುವ ನೀರು ಈ ವಿಧವಾದುದೇ. ಈ ನೀರು ಎಲೆಗಳಿಗೆ ಸೇರಿ, ಅಲ್ಲಿ ಆವಿಯಾಗಿ ಬದಲಾಯಿಸಿ ಹೋದಮೇಲೆ ನೀರಿನಲ್ಲಿ ಕರಗಿದ ವಸ್ತುಗಳು (ಉಪುಗಳು) ಎತಿಗಳ ಗೂಡುಗಳಲ್ಲಿ ನಿಂ ತುಬಿಡುವುವೆಂದೂ, ಹೀಗೆ ನಿಂತು ಬಿಡುವುದರಿಂದ, ಆ ಗೂಡುಗಳೊಳಗಿನ ನೀರು ಮಂದವಾಗಿ ಬಿಡುವುದೆಂದೂ ಮೊದಲೇ ಹೇಳಲ್ಪಟ್ಟಿದೆ. ಹೀಗಾಗು ವುದು ಎರಡು ಕೆಲಸಗಳಿಗೆ ಅನುಕೂಲ, ನೀರು ಏರುವುದಕ್ಕೆ ಸಹಾಯ ಕನಾಗುವುದೆಂದು. ಗಿಡಗಳ ಆಹಾರೋಪಯುಕ್ತವಾದ ವಸ್ತುಗಳು ಎಲೆ ಗಳಲ್ಲಿ ಬಂದು ತುಂಬುವುದು ಮತ್ತೊಂದು, ಈ ಬಗೆಯಾದ ಹಲವು ಉಪುಗಳ ಎಲೆಗಳೆಳಗೆ ಮೇಲೆಮೇಲೆ ಬರುತ್ತಲೇ ಇದ್ದರೂ, ಇವು ಎಲೆಗಳಲ್ಲಿ ನಿಂತು ಬಹಳವಾಗಿ ಹೆಚ್ಚಿ ಬಿಡುವು ದಿಲ್ಲ. ಆಗಾಗ ಜೀವಾಣುವು ಆ ವಸ್ತುಗಳನ್ನು ಉಪಯೋಗಪಡಿಸಿಕೊ ಳ್ಳುತ್ತಲೇ ಇರುವುವು. ಉಪಯೋಗಪಡಿಸಲ್ಪಡದಿದ್ದರೆ ಉಪ್ಪುಗಳು ಬಹ ಛವಾಗಿ ಸೇರಿಕೊಂಡು ನೀರೇತಕ್ಕೆ ಭಂಗವುಂಟಾಗುವುದು. ಓಷಧಿಗಳ ಜೀವವುಳ್ಳವುಗಳೇ ಆಗಿದ್ದರೂ, ಅವುಗಳು ಎಲೆಯ ಹಸುರು ರೇಣುಗಳನ್ನು ಹೊಂದಿರುವುದರಿಂದ, ಜೀವಜಂತುಗಳಿಗಿಂತ ವ್ಯತ್ಯಾಸ ಹೊಂದಿರುವುವೆಂದೂ, ಈ ವ್ಯತ್ಯಾಸದಿಂದಲೇ, ಅವು ಇಂಗಾಲಾಮ್ಮು, ಉಪ್ಪು ಗಳು, ನೀರು, ಇವುಗಳನ್ನೊಳ ಕೊಂಡು, ಅವುಗಳನ್ನು ತಮಗೆ ಬೇಕಾದ ಆಹಾರ ಪದಾರ್ಥಗಳನ್ನಾಗಿ ಮಾಡಿಕೊಳ್ಳುವ ಶಕ್ತಿಯುಳ್ಳವೆಂದೂ ಮೊದಲೇ ಹೇಳಲ್ಪಟ್ಟಿದೆ, ಎಲೆಯ ಹಸುರುರೇಣುಗಳ ಜೀವಾಣುವಿನ ಒಂದು ಭೇದವೇ. ಜೀವಾಣುವಿನಿಂದ ಜೀವಾಣುಗಳುಂಟಾಗುವಂತೆ, ಎಲೆಯ ಹಸುರು ರೇಣುಗ