________________
302 ಓಷಧಿ ಶಾಸ್ತ್ರ ) [XIV ನೆಯ ೪ ಆ ರೇಣುಗಳಿಂದಲೇ ಆಗುವುವು. ಇದರಂತೆಯೇ ಜೀವಾಣುವೋಳಗೆ ಹು ದುಗಿರುವ ಜೀವಪರಮಾಣುವೂ ಆ ಪರಮಾಣುವಿನಿಂದಲೇ ಉಂಟಾಗುವುದು. ಜೀವಾಣುವೂ ಅದರೊಳಗೆ ಹುದುಗಿರುವ ಜೀವಪರಮಾಣುವೂ, ಎಲೆಯ ಹಸುರುರೇಣುಗಳ ಹೆಚ್ಚುತ್ತಿರುವುದು, ಅವು ಬೇರೆಯಾಗಿ ವಿಭಾಗಹೊಂದಿ ಬೆಳೆಯುವುದರಿಂದಲೇ, ಎಲೆಗಳಲ್ಲಿ ಎಲೆಯ ಹಸುರು ರೇಣುಗಳು ಹೆಚ್ಚಾಗಿ ಸೇರಿರುವುದ ರಿಂದ, ಗಿಡಗಳಿಗೆ ಎಲೆಗಳನ್ನು ಮುಖ್ಯವಾದ ಅಂಗವನ್ನಾಗಿ ಎಣಿಸಬೇಕು. ಆದರೆ ಈ ಹಸುರುರೇಣುಗಳು ಎಲೆಗಳಲ್ಲಿಯೇ ಇರಬೇಕೆಂಬ ನಿಯಮವಿಲ್ಲ. ಬೆಳಕು ಬೀಳುವಂತೆ ಎಲ್ಲಿಯಾದರೂ ಇವು ವ್ಯಾಪಿಸಿಕೊಂಡಿದ್ದರೆ ಸಾಕಾ ಗಿರುವುದು. ಚದುರಗಳ್ಳಿ, ಮುಳ್ಳು, ಪಾಪಾಸುಕಳ್ಳಿ ಇವುಗಳಲ್ಲಿ ಅತಿ ಗಳೇ ಉಂಟಾಗುವುದಿಲ್ಲ. ಸಕಾಂಡದ ಶಾಖೆಗಳ ದಂಟುಗಳೊಳಗೆಲ್ಲಾ ಈ ಎಲೆಯ ಹಸುರು ರೇಣುಗಳು ಇರುವುವು. ಸಾಮಾನ್ಯವಾದ ಗಿಡಗಳಲ್ಲಿ ಎಲೆಗಳಲ್ಲಿ ನಡೆಯತಕ್ಕ ಕೆಲಸವು ಈ ಗಿಡಗಳಲ್ಲಿ ದಂಟುಗಳಲ್ಲಿಯೇ ನಡೆಯುವುವು. ಹದಿಮೂರನೆಯ ಅಧ್ಯಾಯದಲ್ಲಿ, ಎಲೆಯೆಂಬುದು ಹಸುರುರೇಣುಗಳಿಂ ದ ತುಂಬಿದ ಗೂಡುಗಳ ಸಮೂಹವೆಂದೂ, ಇವು ಮಂದವಿಲ್ಲದೆ ತೆಳುವಾಗಿ ವಿಸ್ತರಿಸಿಕೊಂಡಿರುವಂತೆ ನರಗಳ ಕಟ್ಟುಗಳಿಂದ ಏರಡಿಸಲ್ಪಟ್ಟಿವೆಯೆಂದೂ, ಇವನ್ನೂ ಎಲ್ಲಾ ಭಾಗಗಳಲ್ಲಿಯ ತೊಕ್ಕಿನಿಂದ ಮುಚ್ಚಲ್ಪಟ್ಟಿವೆಯೆಂದೂ, ಈತ ಕ್ಕಿನ ಕೆಲವು ಭಾಗಗಳಲ್ಲಿ, ಬಹಳ ಚಿಕ್ಕ ರಂಧುಗಳಳಿರುವು ದೆಂದೂ ತಿಳಿದು ಕೊಂಡೆವು. ಎಲೆಗಳಲ್ಲಿ ನರಗಳ ಕಟ್ಟಿನ ಕಣ್ಣುಗಳಲ್ಲಿ ಚಿಕ್ಕಗೂಡುಗಳು ತುಂಬಿ ರುವುವೆಂಬುದೂ ಹೇಳಲ್ಪಟ್ಟಿತು. ಎಲೆಗಳ ನರಗಳೆಲ್ಲಾ ದಂಟಿನಿಂದ