________________
306 ಓಷಧಿ ಶಾಸ್ತ್ರ ) (XIV ನೆಯ ಮೇಲೆ ಹೊರಟು ಆಕೊಳವೆಯಲ್ಲಿ ತುಂಬಿಹೋಗುವುದು, ಬಿಸಿಲು ಹೆಚ್ಚಾ ಗಿದ್ದರೆ ಗುಳ್ಳೆಗಳು ವೇಗವಾಗಿ ಒಂದರ ಹಿಂದೆ ಮತ್ತೊಂದರಂತೆ ತಳ್ಳಿ ಕೊಂಡೇ ಬರುವುವು. ಬಿಸಿಲು ಕಡಿಮೆಯಾಗಿ ದರೆ ಗುಳ್ಳೆಗಳ ಕಡಿಮೆಯಾಗಿರುವುವು. ಕತ್ರ ಲೆಯಾಗಿದ್ದರೆ ಗುಳ್ಳೆಗಳೇ ಹೊರಡವು, ಮತ್ತು ನೀರನ್ನು ಕುದಿಸಿ, ಅದನ್ನು ಗಾಳಿತಗುಲದಂತೆ ಆರಿಸಿ, ಅದರಲ್ಲಿ ಪಾಚಿಯನ್ನು ಮುಳುಗಿಸಿಟ್ಟರೆ, ಬಿಸಿಲಿನಲ್ಲಿಟ್ಟ ರೂ ಗುಳ್ಳೆಗಳು ಹೊರಡವು. ಈ ನೀರಿನಲ್ಲಿಯೇ ಇಂಗಾಲಾಮ್ಲನ್ನು ಸೇರಿಸಿ ಕುಲುಕಿ, ಆ ಮೇಲೆ ಪಾಚಿಯನ್ನು ಹಾಕಿ ಬಿಸಿಲಿ ನಲ್ಲಿಟ್ಟರೆ ಗುಳ್ಳೆಗಳು ಹೊರಡುವುವು. ಕೋ ಪಟ 224 , ೪ ನೆಯಲ್ಲಿ ತುಂಬಿರುವ ಗಾಳಿಯನ್ನು ಕೆಂಡಕ್ಕೆ ಹಿಡಿದರೆ ಅದು ಉರಿಯಲಾರಂಭಿಸುವುದು. ಇದು ರಿಂದ ಅದನ್ನು ಪ್ರಾಣವಾಯುವೆಂದು ನಿರ್ಧರವಾಗಿ ಹೇಳಬೇಕು. ಕೆಂಡ ವನ್ನು ಉರಿಸುವಹಾಗೆ ಮಾಡುವುದು ಸಾಣವಾಯುವಿನ ಮುಖ್ಯಗುಣ. ದೀಪ ಮುಂತಾದವು ಉರಿಯುವುದೂ ಪ್ರಾಣವಾಯು ಸಂಬಂಧದಿಂದಲೇ. ಮೇಲೆ ವಿವರಿಸಲ್ಪಟ್ಟ ನಿದರ್ಶನಗಳಿ೦ದ ಗಿಡಗಳು ಬೆಳಕಿನಲ್ಲಿರುವವರೆಗೂ ಅವುಗಳಿಂದ ಪ್ರಾಣವಾಯುವು ಹೊರಬೀಳುತ್ತಿರುವುದೆಂದೂ, ಬೆಳಕಿಲ್ಲ ದಿದ್ದರೂ ಅಥವಾ ಇಂಗಾಲಾಮ್ಯವಿಲ್ಲದಿದ್ದರೂ ಪ್ರಾಣವಾಯುವು ಹೊರ ಬೀಳದೆಂದೂ, ನಾವು ತಿಳಿದುಕೊಳ್ಳಬೇಕಲ್ಲವೆ ? ಪ್ರಾಣವಾಯುವೂ, ಇಂಗಾಲಾಮುವೂ, ಹೊರಬೀಳುವುದರಿಂದ, ಎಲೆಗಳಲ್ಲಿ ಯಾವುದೋ ವಿಶೇ ಪ್ರಚಲ್ಯಗಳು ನಡೆಯುವುದೆಂದು ನಾವು ಊಹಿಸಬೇಕು. ಈ ಕರೆಗಳು ಸರಿಯಾಗಿ ನಡೆದುಬರುವುದಕ್ಕೆ ಎಲೆಯ ಹಸುರುರೇಣುಗಳು, ಇಂಗಾಲಾಮ್ಮ