ಪುಟ:ಓಷದಿ ಶಾಸ್ತ್ರ.djvu/೩೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಗಿಡಗಳ ಬಾಳಿಕೆಯ ಕೆಲಸವೂ, 311 ದ್ದಾಗ ಆ ಕೆಲಸವು ನಿಂತು ಹೋಗುವುದು. ಈಕೆಲಸದಿಂದಾಗುವ ಹಿಟ್ಟುಗ ಳೆಲ್ಲಾ ಎಲೆಯ ಗೂಡುಗಳಲ್ಲಿಯೇ ನಿಂತುಬಿಟ್ಟರೆ, ಆ ಗೂಡುಗಳಲ್ಲಿ ಬೇರೆ ಯಾವ ಕೆಲಸವೂ ನಡೆಯುವುದಕ್ಕೆ ಅವಕಾಶವಿಲ್ಲದೆಯೇ ಹೋಗುವುದು. ಈ ಕವನ್ನು ನೀಗಿಸುವುದಕ್ಕಾಗಿ, ಜೀವಾಣುವು ಈ ಹಿಟ್ಟನ್ನು ಸಕ್ಕರೆಯಾ ಗಿ ವ್ಯತ್ಯಾಸ ಪಡಿಸಿ, ತಮಗೆ ಬೇಕಾದುದನ್ನು ಹೊರತು, ಉಳಿದುದನ್ನು ಬೇರೆ ಕಡೆಗಳಿಗೆ ಹೋಗುವಂತೆ ಮಾಡುವುದು. ಹೀಗೆ ನಿಂತುಳಿದ ಸಕ್ಕರೆಯು, ಬೇರುದಂಟು, ಕಾಯಿ, ಬೀಜ, ಈ ಭಾಗ ಗಳಿಗೆ ಹೋಗಿ, ಅಲ್ಲಿರುವ ಜೀವಾಣುವಿನ ಗೂಡುಗಳನ್ನು ಹೊಂದಿ, ಹಿಟ್ಟಾಗಿ ಯಾಗಲಿ, ಸಕ್ಕರೆಯಾಗಿಯಾಗಲಿ ಬದಲಾಯಿಸಿ ನಿಲ್ಲುವುದು, ಕಾಂಡ, ಬೇರು, ಇವುಗಳ ಭೇದಗಳಾದ ಗೆಡ್ಡೆ, ಮಲವಹ, ಕಂದ, ಲಶುನ, ಮುಂತಾದುವೂ ಇವುಗಳು ಸೇರಿರುವುದಕ್ಕಾಗಿಯೇ ಏರ್ಪಟ್ಟ ಕಣಜಗಳಾಗಿವೆ, ಎಲೆಗಳೆಳಗಿನ ಜೀವಾಣುವು ಕಿರಣ ಜನ್ಯ ಸಂಯೋಗಕಿ)ಯೆಯ ಸಂ ಗಡ ಬೇರೆ ಕೆಲಸಗಳನ್ನ ಮಾಡುವುವು. ಹಿಟ್ಟು ಸಕ್ಕರೆಯಾದ ಮೇಲೆ ಅದರ ಸಂಗಡ ನೀರೇತದಿಂದ ಮೇಲೇರಿ ಬಂದ ಉಪ್ಪುಗಳೊಳಗಿರುವ ಗಂಧಕ (Sulphur) ston, Onts (Phosphorus) evayj Ja 0053 (Nitrogen) ಮುಂತಾದ ಧಾತುಗಳನ್ನು ಸೇರಿಸಿ, ಅದನ್ನು ಜೀವಾಣು ವಸ್ತುವಾಗಿ ಯೋ ಅಥವಾ ಬೇರೆ ವಸ್ತುವಾಗಿ ಬದಲಾಯಿಸಿ, ತನ್ನಲ್ಲಿಟ್ಟು ಕೇಳು ವುವು, ಜೀವಾಣುವು ತನಗೆ ಬೇಕಾದ ಉಪ್ಪು ವಾಯುವು (Nitrogen) ಸುತ್ತಲೂ ಇರುವ ವಾಯುಮಂಡಲದಲ್ಲಿ ತುಂಬಿದ್ದರೂ, ಅದರಿಂದ ಉಪ ಯೋಗಪಡಿಸಿಕೊಳ್ಳದೆ ಭೂಮಿಯಿಂದ ಉಪ್ಪಾಗಿ ಬರುವ ಪದಾರ್ಥ ಗಳಿಂ ದಲೇ ನಡೆಯುವುದು. ಕೆಲವು ಗಿಡಗಳು ವಾತ) ಭೂಮಿಯಲ್ಲಿ ಈ ವಾಯು ವೋಳಗಿನ ಉಪ್ಪು ಕಡಿಮೆಯಾದ ಮೇಲೆ,ಗಾಳಿಯೊಳಗಣ ಉಪ್ಪು ವಾಯುವನ್ನು ಉಪಯೋಗಪಡಿಸಿ ಕೊಳ್ಳುವುದಕ್ಕೆ ಬೇಕಾದ ಸಾಧನಗಳನ್ನು ಹೊಂದಿರು