ಪುಟ:ಓಷದಿ ಶಾಸ್ತ್ರ.djvu/೩೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಗಿಡಗಳ ಬಾಳಿಕೆಯ ಕೆಲಸವೂ. 317 ಕಡೆಗಳಲ್ಲಿ ಬೆಳೆಯುವುದರಿಂದಲೋ, ಅಥವಾ ಬೇರೆ ಕಾರಣದಿಂದಲೇ, ಕೆಲವು ಗಿಡಗಳು ಈ ವಾಯುಮಿಶ ವೆದ ಪದಾರ್ಥಗಳನ್ನು ಪಾ೯ಣವುಳ್ಳ ಹುಳ, ಕಿವಿ, ಕೀಟ, ಮುಂತಾದವುಗಳಿಂದಲೇ ಹೊ೦ದುವುವು. ಎಂದರೆ, ಕೆಲವು ಗಿಡ ಗಳು ಕಿಮಿ ಮುಂತಾದವುಗಳನ್ನು ಆಹಾರವಾಗಿ ಉಪಯೋಗಿಸಿಕೊಳ್ಳು ವುವು. ಆ ಬಗೆಯ ಗಿಡಗಳನ್ನು “ ಕೀಟ ಭಕ್ಷಕ ಸಸ್ಯ ” ಗಳೆಂದು ಕರೆ ಯಬಹುದು, ನಮ್ಮ ಈ ದೇಶಗಳಲ್ಲಿಯೇ ಕೀಟಭಕ್ಷಕಸಸ್ಯಗಳು ಅನೇಕವಾ ಗಿರುವುವು. ಇವಮ್ಮ ಕೆಲಸಕ್ಕೆ ಬಾರದ ಸಣ್ಣಮಲಿಕೆಗಳಾಗಿರುವುದ ರಿಂದ, ನಮ್ಮವರು ಇದನ್ನು ಗಮನಿಸಿಯೇ ನೋಡಲಿಲ್ಲ. ಅದರಿಂದ ಅವು ಗಳಿಗೆ ಹೆಸರೇ ಇಲ್ಲ. ತೇವವಾಗಿರುವ ಕಡೆಗಳಲ್ಲಿ, 228, 229 ನೆಯ ಪಟಗಳಲ್ಲಿ ಕಾಣಿ ಸಿರುವ ಎರಡುಬಗೆಯ ಗಿಡಗಳ ಬೆಳೆಯುತ್ತಿರುವುವು. ಮೊದಲನೆಯ ದರಲ್ಲಿ ಎಲೆಗಳನ್ನೂ ಸೇರಿಗುಂಪಾಗಿ ನೆಲಸಮನಾಗಿರುವುವು. ಹೂಗೊನೆಯು ಮಾತು ಮೇಲೆ ಹೊರಟು ಬೆಳೆಯುವುದು. ಮತ್ತೊಂದರಲ್ಲಿ ಎತಿಯು ಸತ್ಯ ಕಸೇರುವೆಯುಳ್ಳುದು. ಎರಡರಲ್ಲಿಯ ಎಲೆಗಳಲ್ಲಿ ಉದ್ದವಾದ ರೋ ಮಗಳಿರುವುವು. ಗಿಡಗಳು ಬದುಕಿರುವಾಗ, ಈ ರೋಮಗಳ ತುದಿಯಲ್ಲಿ, ಚಿಕ್ಕಮುತ್ತಿನಂತೆ ಅಂಟಾದ ಒಂದುನೀರಿನ ಬಿಂದುವು ಇರುತ್ತಲೇ ಇರುವುದು. ಆಕಸ್ಮಿಕವಾಗಿ ಯಾವುದಾದರೂ ಕಿವಿಗಳು ಈ ಗಿಡದ ಎಲೆಗಳನ್ನು ತಾಗಿ ದರೆ, ಅವು ಅಂಟಿಕೊಳ್ಳುವುವು. ಆ ಕಿಮಿಯು ತಪ್ಪಿಸಿಕೊಂಡು ಹೋಗಲು ಪಯತ್ನಿಸುವುದು. ಅವುಗಳು ಈ ಪ್ರಯತ್ನ ಮಾಡುತ್ತಿರುವಾಗಲೇ, ಎತಿ ಯಲ್ಲಿರುವ ರೋಗಗಳಲ್ಲಿ ಕೆಲವು, ಕಿವಿಗಳ ಮೇಲೆ ತಮ್ಮ ಅಗವು ತಗು ಲುವಂತೆ ಬರುವುವು. ರೋಮದ ತುದಿಯಲ್ಲಿ ಅಂಟಿನಂತಿರುವ ನೀರು ಇರು ವುದರಿಂದ ಹುಳವು ತಪ್ಪಿಸಿ ಕೊಳ್ಳಲಾರದು, ಈ ಗಿಡಗಳು ಹೀಗೆ ಬಂದುದೇ ರುವ ಹುಳಗಳೊಳಗಿರುವ ಮಾಂಸವನ್ನು ಉಪಯೋಗಪಡಿಸಿಕೊಳ್ಳುವುವು.