ಪುಟ:ಓಷದಿ ಶಾಸ್ತ್ರ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-28 ಓಷಧಿ ಶಾಸ್ತ್ರ, [III ನೆಯ ಬದನಿಕೆ ಮುಂತಾದುವುಗಳ ಬೇರುಗಳು ನೆಲದೊಳಗೆ ಪ್ರವೇಶಿಸದೆ, ಬೇರೆ ಗಿಡಗಳ ಕೆಂಬೆಗಳೊಳಗೆ ನುಗ್ಗಿ ಬೆಳೆಯುವುವು. ಈ ಬೇರುಗಳು ಬಿಳ ಪಟ 14.ತಾಳೆಯ ಬಿಳಲು. ಲಗಳಂತೆ ಹೊರಗಿರತಕ್ಕವುಗಳು ಯಾವವುರದ ಕೊಂಬೆಗಳಲ್ಲಿ ಇವು ಸೇರಿಕೊಂಡಿರುವುವೋ, ಆ ಮರದ ಕೊಂಬೆಗಳ ಬದನಿಕೆಯ ಬೇರುಗಳು ಒಳ ಹುಗು, ತನಗೆ ಬೇಕಾದ ನೀರು ಮುಂತಾದ ಆಹಾರ ಪದಾರ್ಥ ಗಳನ್ನು ಅವುಗಳಿಂದಲೇ ಪಡೆಯುವುವು. ಒಂದು ಮರದ ಕೊಂಬೆಗಳಲ್ಲಿ ಈಬದ ನಿಕೆಯ ಗಿಡಗಳು ವಿಶೇಷವಾಗಿ ಉಂಟಾದರೆ, ಇವುಗಳಿಗೆ ಆಹಾರವನ್ನು ಒದ ಗಿಸಿಕೊಡುವ ಮರವು ಕೆಟ್ಟು ಹೋಗುವುದು.