ಪುಟ:ಓಷದಿ ಶಾಸ್ತ್ರ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಪ) ಕಾ೦ ಡ. 4. ಹೀಗೆ ಸುತ್ತುವುದು ಬಹಳ ನಿದಾನವಾಗಿರುವುದರಿಂದ, ನೋಡುವಾಗ ಕಾಣುವುದಿಲ್ಲ. ಅಶಯವು ಸಿಕ್ಕಿದೊಡನೆ, ಅವುಗಳನ್ನು ಸುತ್ತಿಕೊಳ್ಳುವ ಕುಡಿಗಳು ಬಹಳ ಸೂಕ್ಷಗಳಾಗಿರುವುದರಿಂದ, ಇವುಗಳಲ್ಲಿ ಸುರುಳಿಗಳು ಬಹಳ ಒತ್ತೊತ್ತಾಗಿ ಉಂಟಾಗುವುವು. ಈ ಸುರುಳಿಗಳನ್ನು ಗಮನಿಸಿ ದರೆ, ಒಂದೇ ಕುಡಿಯಲ್ಲಿ ಎರಡು ವಿಧವಾದ ಸುರುಳಿಗಳ ಇರುವುದನ್ನು ನೋಡಬಹುದು. (ಪಟ 29-30) ಹೀಗಿರುವುದು ಆಯಾ ಗಿಡಗಳಿಗೆ ಬಹಳ ಸಹಾಯಕವಾಗಿರುವುದು, ಏಕೆಂದರೆ, ಗಾಳಿಯ ಬಡಿತದಿಂದಲೋ, ಅಥವಾ ಇತರ ಕಾರಣಗಳಿಂದಲೋ, ಬಳ್ಳಿಗಳು ಇಲ್ಲಿಗಲ್ಲಿಗೆ ಆಡಿಸಲ್ಪಟ್ಟರೂ, ಈ ಕುಡಿಗಳು ಕಿತ್ತುಹೋಗದೆ, ಬಲವಾಗಿ ತಡೆದುಕೊಂಡಿರುವುವು. ಈ ಕುಡಿ ಗಳನ್ನು ನಾವು ಎಳೆದುಬಿಟ್ಟರೂ, ಅದರ ಸುರುಳಿಗಳು ಮೊದಲಿನಂತೆಯೇ ತಿರುಗಿ ಸುತ್ತಿಕೊಳ್ಳುವುವು. ದಂಟುಗಳಿಂದ ಬೇರುಗಳು ಹೊರಟು, ಅವುಗಳ ಸಹಾಯದಿಂದ ಹಬ್ಬುವ ಬಳ್ಳಿಗಳ ಬಹಳವುಂಟು, ವಿಳ್ಳೆದೆಲೆ, ಮೆಣಸು, ಈ ಬಳ್ಳಿಗಳು ಈ ವಿಧವಾದವುಗಳೆ, ಇಂತವುಗಳಗೆ ಮಲಾರೋಹಿಲತೆಗಳೆಂದು ಹೆಸ ರಿಡಬಹುದು. ಸಕಾಂಡದ ದಂಟುಗಳು, ಇಲ್ಲಿ ವಿವರಿಸಿದ ಹಲವು ಬಗೆಯಾದ. ಬದಲಾವಣೆಗಳನ್ನು ಹೊಂದಿದ್ದರೂ, ಇವುಗಳ ಮುಖ್ಯವಾದ ವ್ಯಾಪಾರವು ಎಲೆ, ಹೂ, ಕಾಯಿ ಇವುಗಳನ್ನು ತಕ್ಕಂತೆ ವಹಿಸಿರುವುದಲ್ಲದೆ, ಎಲೆಗಳಿಗೂ ಬೇರುಗಳಿಗೂ ನಡುವೆ ಇದ್ದುಕೊಂಡು, ಒಳ ಭಾಗದಿಂದ ಬರುವ ಪದಾರ್ಥ ಗಳು ಗಿಡಗಳ ನಾನಾಕಡೆಗೂ ಸೇರುವುದಕ್ಕೆ ಮಾರ್ಗವಾಗಿಯೂ ಇರುವುದೇ.. ಕೆಲವು ದಂಟುಗಳಲ್ಲಿ ಈ ಮುಖ್ಯವಾದ ಗುಣವು ಕಡಿಮೆಯಾಗಿ, ಆಹಾರ ಪದಾ ರ್ಥಗಳು ಸೇರುವುದಕ್ಕಾಗಿ, ದಂಟುಗಳು ಕಣಜದಂತೆ ಬದಲಾಯಿಸುವುದೂ ಉಂಟು. ಗೆಣಸು, ಗೆಡ್ಡೆ, ಉಳ್ಳಿ ಇವೆಲ್ಲವೂ ಈ ವಿಧವಾದುವುಗಳೆ. -- > ---