ಪುಟ:ಓಷದಿ ಶಾಸ್ತ್ರ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಮೊಗ್ಗೆಯ ಎಲೆಯ. - 51. ಮೊಗ್ಗೆಯನ್ನು ಪರ ಪುಚ್ಚಗಳು ಮುಚ್ಚಿಕೊಂಡಿರುವುದನ್ನು ಪಟದಲ್ಲಿ ನೋ ಡಿರಿ. ಹೀಗೆ ಮುಚ್ಚಿಕೊಂಡಿರುವ ಪುಚ್ಛಗಳಾದರೆ ಹೊರಗಿರುವ ಎಳೇ ಎಲೆಯ ಪರ ಪುಚ್ಛಗಳಾಗಿಯೇ ಇರುವುವು. ಮೊಗ್ಗೆಗಳು ಕೊಂಬೆಗಳಾಗಿ ಬೆಳೆದಮೇಲೆ, ಅವುಗಳಲ್ಲಿ ಸಾಯಿಕವಾಗಿ ಎಲೆಗಳು ಉಂಟಾಗುವುವಲ್ಲವೆ.? ಕೆಲವು ಗಿಡಗಳ ಕೊಂಬೆಗಳಲ್ಲಿ ಎಲೆಗಳೆ "ಇಲ್ಲದಂತೆ ದಂಟುವಾತುವೇ ಇರುವುದೂ ಉಂಟು. ಒಂದು ವೇಳೆ ಎಲೆಗಳ ಪಟ 36.-ಆಲದಮೊಗ್ಗೆ. ಉ೦ಟಾದರೂ, ಅವು ಬಹುಸೂಕ್ಷ್ಮ ವಾಗಿರುವುವು. ಬಹುಬೇಗ ಉದಿರಿ ಹೋಗುವುವು. ಈ ವಿಧವಾದ ಕೊಂಬೆಗಳು ಯಾವಾಗಲೂ ಹಸುರು ಬಣ್ಣವನ್ನೆ ಹೊಂದಿರುವುವು. ಚದರಗಳ್ಳಿ, ಮುಳ್ಳುಗಳುಳ್ಳ ನಾಗದಾಳೆ ಎಂದು ಹೇಳಲ್ಪಡುವ ಪಾಪಾಸುಕಳ್ಳಿಗಿಡ, ಇವುಗಳಲ್ಲಿ ಎಲೆಗಳೇ ಇಲ್ಲ. ಕೊಂಬೆಗಳ ವಾತವೇ ಇರುವುವು. ಎಲ್ಲಾ ಭಾಗಗಳ ಹಸು ರುಬಣ್ಣವನ್ನೇ