ಪುಟ:ಕಂಬನಿ-ಗೌರಮ್ಮ.pdf/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೨

ನನ್ನ ಮತ್ತು ಪಾಪನ (ನನ್ನ ಆ ತಂಗಿಯ ಮುದ್ದಿನ ಹೆಸರು.) ಪ್ರೇಮದ ಆಳವನ್ನು ತಿಳಿದುಕೊಳ್ಳಬೇಕಾದರೆ, ನಾನವಳನ್ನು ನನ್ನ ಹಿರಿಯಕ್ಕ ಪ್ರಭೆಗಿಂತ ಹೆಚ್ಚೇಕೆ ಪ್ರೀತಿಸುವೆನೆಂಬುದನ್ನು ತಿಳಿದುಕೊಳ್ಳಬೇಕಾದರೆ ಅವಳು ಹುಟ್ಟಿದ ದಿನ ನಮ್ಮ ತಾಯಿಯು ಸತ್ತು ಹೋದುದನ್ನು ಹೇಳಿಯೇ ತೀರಬೇಕು.

"ಆಗ ಪಾಪ ಎಳೆಗೂಸಾದರೆ,ನನ್ನೊಡನೆ ಆಡದವಳಾದರೂ ನನಗೆ ಅವಳೆಂದರೆ ಪ್ರಾಣ. ನಾವೂ ಬೆಳೆಯುತ್ತ ಬಂದಂತೆ ನನ್ನ ಪ್ರೇಮವೂ ಬೆಳೆಯತೊಡಗಿತು. ನಾನು ಪ್ರಭಾ ಎಲ್ಲಾ ಜಗಳವಾಡಿಕೊಳ್ಳುತ್ತಿದ್ದೆವು. ಆದರೆ ನನಗೂ ಪಾಸನಿಗೂ ಒಂದೇ ಒಂದು ಸಾರಿಯಾದರೂ ಜಗಳವಾಗಿಲ್ಲ. ಪ್ರಭೆ ಈಗ ಗಂಡನ ಮನೆಯಲ್ಲಿ ಸಂಸಾರ ಮಾಡುತ್ತಿದ್ದಾಳೆ. ಅವಳಿಗೆ ಮದುವೆಯಾದ ವರ್ಷವೇ ನಮ್ಮ ತಂದೆಯೂ ಪುನಃ ಮದುವೆ ಮಾಡಿಕೊಂಡರು. ಪಾಪನಿಗೀಗ ಹತ್ತೊಂಬತ್ತೋ ಇಪ್ಪತ್ತೋ ವರ್ವಯಸ್ಸು. ಅವಳಿಗೆ ಇನ್ನೂ ಹನ್ನೊಂದು ವರ್ಷ ತಂದಿರಲಿಲ್ಲ. ಆಗಲೇ ತಂದೆ-ತಾಯಿಯರಿಲ್ಲದ ನಮ್ಮ ಸೋದರತ್ತೆಯ ಮಗನಿಗವಳನ್ನು ಕೊಟ್ಟು ಮದುವೆ ಆಗಿ ಹೋಗಿತ್ತು. ಅವಳ ಮದುವೆಯಾಗುವಾಗಿನ್ನೂ ಶಾರದಾ ಬಿಲ್ಲು ಪಾಸಾಗಿರಲಿಲ್ಲ. ಅದೇ ಅವಸರದಿಂದವಳಿಗೆ ಮದುವೆಯಾಯ್ತು. ಆಡುವ ಮಗು ಪಾಪನ್ನ ಅವನ ಕೊರಳಿಗೆ ಕಟ್ಟಿ ಅವನ ವಿಲಾಯತಿಯು ಶಿಕ್ಷಣಕ್ಕೆ ದುಡ್ಡು ತೆರಲು ನಮ್ಮ ತಂದೆ ಒಪ್ಪಿದರು. ಮದುವೆ ಆದ ವರ್ಷವೇ ಅವನು ಮೆಟ್ರಿಕ್ ಪಾಸಾದ. ಅವನ ಕಾಲೇಜು ಶಿಕ್ಷಣದ ಭಾರವನ್ನೂ ನಮ್ಮ ತಂದೆಯೇ ಹೊತ್ತರು. ಬಿ. ಎ. ಆದ ವರ್ಷವೇ ಎಮ್. ಎ. ಯನ್ನು ಗುರಿಯಾಗಿಟ್ಟುಕೊಂಡು ಅವನು ಆಕ್ಸಫರ್ಡಿಗೆ ಹೊರಟುಹೋದ. ಅವಳು ಹೋಗುವಾಗ ನನ್ನ ತಂಗಿಗೆ ಹದಿನೈದು ವರ್ಷ ಪ್ರಾಯ. ಅದು ಸತ್ಯಾಗ್ರಹವು ಜೋರಾದ ಕಾಲ. ಪ್ರತಿಯೊಂದು ವ್ಯಕ್ತಿಯ ದೇಶಕ್ಕಾಗಿ ಬೇರೆಲ್ಲವನ್ನೂ ತೊರೆಯಲು ಸಿದ್ದವಾದ ಸಮಯವದು. ಆಗ ನನ್ನ ತಂಗಿಗೆ ಆಸ ರಾಜಕೀಯ ಪರಿಸ್ಥಿತಿಯನ್ನು ತಿಳಿದುಕೊಳ್ಳುವ ಶಕ್ತಿ ಇಲ್ಲದಿದ್ದರೂ ತನ್ನ ಗಂಡ ಪರದೇಶಕ್ಕೆ, ಅದರಲ್ಲೂ