ಪುಟ:ಕಂಬನಿ-ಗೌರಮ್ಮ.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕಂಬನಿ

ಒಂದು ಬಗೆಯ ಆಗರ ಹುಟ್ಟಿತ್ತು. ಮುಂದೆ ಒಂದೆರಡು ಕತೆಗಳು 'ಜ. ಕ.'ದಲ್ಲಿ ಬಂದವ. 'ಕೆಲವು ನೀಳ್ಗತೆಗಳು' ಎಂಬ ಸಂಗ್ರಹದಲ್ಲಿಯ 'ಕೌಸಲ್ಯಾನಂದನ' ಎಂಬ ಕತೆ ನನಗೆ ಬಹಳ ಮೆಚ್ಚುಗೆಯಾಯಿತು. ಅದರಲ್ಲಿಯ ವಸ್ತು-ವಿವರಣೆ, ಆ ಕಲಾಪೂರ್ಣ ಮುಕ್ತಾಯ ನನಗೆ ತುಂಬ ಆನಂದಕೊಟ್ಟವು. 'ಅಂತೂ ಕನ್ನಡ ಮಹಿಳೆಯರೂ ಇಂತಹ ಉತ್ತಮ ಕತೆ ಬರೆಯುತ್ತಾರಲ್ಲ!' ಎಂದು ಹೆಮ್ಮೆ ತಾಳಿದೆ. ಅಂದುದಪಟ್ಟ ಆ ಆನಂದ, ತಳೆದ ಆ ಹೆಮ್ಮೆ ನನ್ನನ್ನು ಹೆಣ್ಣು ಮಕ್ಕಳದೇ ಒಂದು ಕಥಾಸಂಗ್ರಹ ಪ್ರಕಟಿಸುವ ಸಾಹಸಕ್ಕೆಳೆಯಿತು. ಆ ಕೆಲಸ 'ರಂಗವಲ್ಲಿ' ಎಂಬ ಹೆಸರಿನಿಂದಾಯಿತು.

'ರಂಗವಲ್ಲಿ' ಯಲ್ಲಿಯ ಗೌರಮ್ಮನವರ 'ಮನುವಿನ ರಾಣಿ' ಎಂಬ ಕತೆಯ ಬಗ್ಗೆ ನನಗೆ ಬಂದ ಕೆಲವು 'ಪ್ರಶಂಸೆ' ಗಳನ್ನು ಅವರಿಗೆ ತಿಳಿಸಿದಾಗ, ಅವರು ತಮ್ಮ ಆ ಕತೆಯ ವಿಷಯಕ್ಕಿದ್ದ ಅತೃಪ್ತಿಯನ್ನು ತಾವೆ ಸೂಚಿಸಿದರು. ಆಗಲೇ ಅವರು ಹೊಗಳಿಕೆಗೆ ಹಿಗ್ಗುವವರಲ್ಲ- ಎನಿಸಿತು.

ಅದುವರೆಗೆ ಪ್ರಕಟವಾದ ಅವರ ಕತೆಗಳನ್ನೋದಿದ ನನಗೆ ಒಂದೇನೊ ಆಶೆ: ಇವರದೊಂದು ಕಥಾಸಂಗ್ರಹ ಪ್ರಕಟಿಸಬೇಕೆಂದು. ಆ ಮೊದಲು ನನಗೆ ಬರೆದ ಒಂದೆರಡು ಕಾಗದಗಳಲ್ಲಿಯೆ ಮೈವೆತ್ತುನಿಂತ ಅವರ ಸುಸಂಸ್ಕೃತತೆ, ಹಿರಿಯಾಸೆ ನನ್ನನ್ನು ಮತ್ತಷ್ಟು ಆ ಕೆಲಸಕ್ಕೆ ಒತ್ತಾಯ ಪಡಿಸಿದವು.

ಮಖಂಡಿಯಲ್ಲಿ ಅವರು ಗೌರಮ್ಮನವರೆಂದು ತಿಳಿದ ಮೇಲೆ ಅವರೊಡನೆ ಮಾತನಾಡಬೇಕೆಂಬ ಆಶೆಯಿಂದ ಅವರಿಳಿದ ಸ್ಥಳಕ್ಕೆ ಹೋದೆ. ಅಲ್ಲಿದ್ದ ನನ್ನ ಸ್ನೇಹಿತರೊಬ್ಬರು ಅವರ ಪರಿಚಯ ಮಾಡಿಸಿದರು. ಆಗ ಅವರು ಊಟಕ್ಕೆ ಕುಳಿತವರು ಎದ್ದು 'ನಮಸ್ಕಾರ' ಎಂದರು. ಅಂದಿನ ಆ ಮೊದಲ ಸಲದ ಅವರ ನಿಂತ ನಿಲುವು, ಆ ವಿನಯ, ಆ ಸಹಜವಾದ ನಗೆ ಇನ್ನೂ ನನ್ನ ಕಣ್ಣ ಮುಂದಿವೆ. ಊಟವಾದೊಡನೆ ನಾವಿಬ್ಬರೇ